ದುಲ್ಕರ್ ಸಲ್ಮಾನ್ ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟ. 'ಕಿಂಗ್ ಆಫ್ ಕೋಥಾ' ನಟನ ಮುಂದಿನ ಸಿನಿಮಾ. ಬಹುನಿರೀಕ್ಷಿತ ಸಿನಿಮಾ ವೀಕ್ಷಣೆಗೆ ಅಭಿಮಾನಿಗಳು ಕಾತರರಾಗಿದ್ದಾರೆ. ಇದೀಗ ಚಿತ್ರದ ಟ್ರೇಲರ್ ಅನಾವರಣಗೊಂಡು, ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಅವರು ಇಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ 'ಕಿಂಗ್ ಆಫ್ ಕೋಥಾ'ದ ಅಧಿಕೃತ ಟ್ರೇಲರ್ ಅನಾವರಣಗೊಳಿಸಿದ್ದಾರೆ.
ದುಲ್ಕರ್ ಸಲ್ಮಾನ್ ಕಿಂಗ್ ಆಫ್ ಕೋಥಾ: ಟ್ವಿಟರ್ನಲ್ಲಿ ಕಿಂಗ್ ಆಫ್ ಕೋಥಾ ಟ್ರೇಲರ್ ಶೇರ್ ಮಾಡಿದ ಸೂಪರ್ ಸ್ಟಾರ್ ಶಾರುಖ್ ಖಾನ್, ''ಮನಮುಟ್ಟುವ ಕಿಂಗ್ ಆಫ್ ಕೋಥಾ ಟ್ರೇಲರ್, ಅಭಿನಂದನೆಗಳು ದುಲ್ಕರ್ ಸಲ್ಮಾನ್, ಸಿನಿಮಾಗಾಗಿ ಎದುರು ನೋಡುತ್ತಿದ್ದೇನೆ, ನಿಮಗೆ ನನ್ನ ದೊಡ್ಡ ಅಪ್ಪುಗೆ, ಸಿನಿಮಾ ದೊಡ್ಡ ಯಶಸ್ಸು ಕಾಣಲಿ ಎಂದು ಚಿತ್ರತಂಡಕ್ಕೆ ಶುಭ ಹಾರೈಸುತ್ತೇನೆ'' ಎಂದು ತಿಳಿಸಿದ್ದಾರೆ. ಎಸ್ಆರ್ಕೆ ಜೊತೆಗೆ ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ಗಳಾದ ಮೋಹನ್ಲಾಲ್, ಸೂರ್ಯ, ನಾಗಾರ್ಜುನ ಕೂಡ ಟ್ರೇಲರ್ ಲಾಂಚ್ ಮಾಡಿದರು.
ಗ್ಯಾಂಗ್ಸ್ಟರ್ ಪಾತ್ರದಲ್ಲಿ ದುಲ್ಕರ್ ಸಲ್ಮಾನ್:ಹೆಚ್ಚಾಗಿ ಕ್ಲಾಸಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಸೀತಾ ರಾಮಮ್ ನಟ ದುಲ್ಕರ್ ಸಲ್ಮಾನ್ 'ಕಿಂಗ್ ಆಫ್ ಕೋಥಾ' ಚಿತ್ರದಲ್ಲಿ ಗ್ಯಾಂಗ್ಸ್ಟರ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಗೆ ಅಭಿಲಾಷ್ ಜೋಶಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೇ ಆಗಸ್ಟ್ 24 ರಂದು ಸಿನಿಮಾ ಬಿಡುಗಡೆ ಆಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರೆಡಿಯಾಗಿರುವ ಈ ಚಿತ್ರ ಓಣಂ ಸಂದರ್ಭ ತೆರೆಕಾಣಲು ಸಜ್ಜಾಗಿದ್ದು, ಚಿತ್ರತಂಡ ಪ್ರಚಾರ ಪ್ರಾರಂಭಿಸಿದೆ. 'ಕಿಂಗ್ ಆಫ್ ಕೋಥಾ' ಪ್ರಮೋಶನ್ ಭಾಗವಾಗಿ ಇದೀಗ ಟ್ರೇಲರ್ ಅನಾವರಣಗೊಂಡಿದೆ. ಸ್ಟಾರ್ ನಟರು ಸಾಥ್ ನೀಡಿರುವ ಈ ಸಿನಿಮಾ ಇದೇ ಆಗಸ್ಟ್ 24 ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಚಿತ್ರಮಂದಿಗಲಲ್ಲಿ ತೆರೆಕಾಣಲಿದೆ. ಸಿನಿಪ್ರಿಯರು ಸಿನಿಮಾ ವೀಕ್ಷಿಸಲು ಉತ್ಸುಕರಾಗಿದ್ದಾರೆ. ಚಿತ್ರಕಥೆ ಬಗ್ಗೆ ಫ್ಯಾನ್ಸ್ ಕುತೂಹಲ ಹೊಂದಿದ್ದಾರೆ.