ಪಲಕ್ ತಿವಾರಿ ಅಭಿನಯದ ಚೊಚ್ಚಲ ಹಿಂದಿ ಚಿತ್ರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ತೆರೆಕಾಣಲು ಸಜ್ಜಾಗಿದೆ. ಇದೇ ಏಪ್ರಿಲ್ 21ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಅಗಲಿದೆ. ಈ ಹಿನ್ನೆಲೆ ಚಿತ್ರತಂಡ ಪ್ರಚಾರದಲ್ಲಿ ತೊಡಗಿದೆ. ನಟಿ ಪಲಕ್ ತಿವಾರಿ ಕೂಡ ಸಂದರ್ಶನಗಳನ್ನು ಕೊಡುತ್ತಿದ್ದು, ನಟ ಸಲ್ಮಾನ್ ಖಾನ್ ಬಗ್ಗೆ ಕೆಲ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
2021ರಲ್ಲಿ ತೆರೆಕಂಡ ಅಂತಿಮ್ ದಿ ಫೈನಲ್ ಟ್ರುತ್ ಚಿತ್ರಕ್ಕೆ ಪಲಕ್ ತಿವಾರಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಆಯುಶ್ ಶರ್ಮಾ ಅಭಿನಯದ ಈ ಚಿತ್ರದಲ್ಲಿ ನಟ ಸಲ್ಮಾನ್ ಖಾನ್ ಕೂಡ ನಟಿಸಿ, ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಸಿನಿಮಾದ ಶೂಟಿಂಗ್ ಸೆಟ್ನಲ್ಲಿ ಸಲ್ಮಾನ್ ಅವರು ಕೆಲ ನಿಮಯಗಳನ್ನು ಜಾರಿಗೆ ತಂದಿದ್ದರು ಎಂದು ಪಲಕ್ ತಿವಾರಿ ತಿಳಿಸಿದ್ದಾರೆ.
2021ರ ಹಾರ್ಡಿ ಸಂಧು ಅವರ ಬಿಜ್ಲೀ ಬಿಜ್ಲಿ ಮ್ಯೂಸಿಕ್ ವಿಡಿಯೋದಲ್ಲಿ ನಟಿ ಶ್ವೇತಾ ತಿವಾರಿ ಅವರ ಪುತ್ರಿ ಪಲಕ್ ತಿವಾರಿ ಕಾಣಿಸಿಕೊಂಡಿದ್ದರು. ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಅವರ ಬಾಲಿವುಡ್ ಚೊಚ್ಚಲ ಚಿತ್ರ. ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಚಿತ್ರದಲ್ಲಿ ಪೂಜಾ ಹೆಗ್ಡೆ, ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಶೆಹನಾಜ್ ಗಿಲ್ ಮತ್ತು ರಾಘವ್ ಜುಯಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಸಲ್ಮಾನ್ ಖಾನ್ ತಮ್ಮ ಸೆಟ್ನಲ್ಲಿ ಮಹಿಳೆಯರು ಹೇಗೆ ಡ್ರೆಸ್ ಮಾಡಬೇಕು ಎಂಬ ನಿಯಮವನ್ನು ತಂದಿದ್ದರು ಎಂದು ಪಲಕ್ ತಿವಾರಿ ತಿಳಿಸಿದ್ದಾರೆ
'ಹಲವರಿಗೆ ಈ ವಿಷಯದ ಬಗ್ಗೆ ತಿಳಿದಿರಕ್ಕಿಲ್ಲ. ಸಲ್ಮಾನ್ ಸರ್ ಅವರ 'ಅಂತಿಮ್ ದಿ ಫೈನಲ್ ಟ್ರುತ್' ಸೆಟ್ನಲ್ಲಿ ಪ್ರತೀ ಹುಡುಗಿಯರು ನೆಕ್ಲೈನ್ ಇರುವ ಡ್ರೆಸ್ ಧರಿಸಬೇಕೆಂಬ ನಿಯಮ ತಂದಿದ್ದರು. ಎಲ್ಲ ಹುಡುಗಿಯರು ಮೈ ಮುಚ್ಚುವಂತಹ ಬಟ್ಟೆ ತೊಡಬೇಕು. ನಾನು ಸರಿಯಾದ ಬಟ್ಟೆ ಧರಿಸುತ್ತಿದ್ದರಿಂದ ನನ್ನ ತಾಯಿ ಕೂಡ ಆಶ್ಚರ್ಯದ ಜೊತೆಗೆ ಸಮಾಧಾನಗೊಂಡರು. ಒಮ್ಮೆ ನನ್ನ ತಾಯಿ, ನೀವು ಎಲ್ಲಿಗೆ ಹೋಗುತ್ತಿದ್ದೀರಿ? ಎಂದು ಆಶ್ಚರ್ಯದಿಂದ ಕೇಳಿದ್ದರು. ಇಷ್ಟು ಸುಂದರವಾಗಿ ಹೇಗೆ ರೆಡಿ ಆದ್ರಿ? ಎಂದು ಕೇಳಿದ್ದರು. ಸಲ್ಮಾನ್ ಸರ್ ಸೆಟ್ಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದೆ. ಅದಕ್ಕೆ "ವಾವ್, ಅತ್ಯುತ್ತಮ" ಎಂದು ಹೇಳಿದ್ದರು ಎಂಬ ವಿಚಾರವನ್ನೂ ಹಂಚಿಕೊಂಡರು.