ಕರ್ನಾಟಕ

karnataka

ETV Bharat / entertainment

DON 3: ಮುಂದಿನ ಡಾನ್​ ಶಾರುಖ್​ ಅಲ್ಲ ರಣ್​ವೀರ್! ಸಿಂಗ್​ ಜೊತೆ ಕಿಯಾರಾ ಅಭಿನಯ - ranveer singh

DON 3 Movie: ನಿರ್ದೇಶಕ ಫರ್ಹಾನ್​ ಅಖ್ತರ್ 'ಡಾನ್​​ 3' ಸಿನಿಮಾ ಘೋಷಿಸಿದ್ದಾರೆ.

DON 3 Movie
ಡಾನ್​​ 3 ಸಿನಿಮಾ

By

Published : Aug 8, 2023, 6:35 PM IST

DON 3. ಬಿಟೌನ್​ಲ್ಲಿ ಡಾನ್​ ಸದ್ದಾಗುತ್ತಿದೆ. ಆಗಸ್ಟ್ 8ರಂದು ಬಾಲಿವುಡ್​ನ ಸೆನ್ಸೇಶನಲ್​ ಸುದ್ದಿ ಅಂದ್ರೆ ಅದು 'ಡಾನ್​​ 3'. ನಟ, ನಿರ್ದೇಶಕ, ನಿರ್ಮಾಪಕ ಮತ್ತು ಬಹುಮುಖ ಪ್ರತಿಭೆ ಫರ್ಹಾನ್​ ಅಖ್ತರ್ ಇಂದು 'ಡಾನ್​​ 3' ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಬಹಳ ಸಮಯದಿಂದ ಕಾದು ಕುಳಿತಿದ್ದರು. ಅಂತಿಮವಾಗಿ 'ಡಾನ್​​ 3' ಘೋಷಣೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹೌದು, ಡಾನ್​ 3 ಸಿನಿಪ್ರಿಯರ ಮೊಗದಲ್ಲಿ ಸಂತಸ ಮೂಡಿಸಿದೆ. ಆದ್ರೆ ಬಾಲಿವುಡ್​ ಕಿಂಗ್​ ಖಾನ್​ ಅವ್ರ ಕಟ್ಟಾ ಅಭಿಮಾನಿಗಳ ಹೃದಯ ಛಿದ್ರಗೊಳಿಸಿದೆ. ಏಕೆಂದರೆ ಡಾನ್​ 1 ಮತ್ತು ಡಾನ್​ 2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಎಸ್​ಆರ್​ಕೆ ಡಾನ್​ 3ರ ಭಾಗವಾಗುತ್ತಿಲ್ಲ. ರಾಕಿ ಔರ್​ ರಾಣಿ ಕಿ ಪ್ರೇಮ ಕಹಾನಿಯ ಯಶಸ್ಸಿನಲೆಯಲ್ಲಿ ತೇಲುತ್ತಿರುವ ರಣ್​ವೀರ್​ ಸಿಂಗ್​​ ಅವರನ್ನು ಬಾಲಿವುಡ್​ನ ಮುಂದಿನ ಡಾನ್​ ಆಗಿ ಸ್ವೀಕರಿಸಲಾಗಿದೆ.

ಮುಂದಿನ ಡಾನ್​ ರಣ್​ವೀರ್​ ಸಿಂಗ್​...: ನಿರ್ದೇಶಕ ಫರ್ಹಾನ್​ ಅಖ್ತರ್ ಅವರು ಸಿನಿಮಾದಲ್ಲಿ ಅಭಿನಯಿಸುವ ನಟ ನಟಿಯರ ಬಗ್ಗೆ ಮಾಹಿತಿ ನೀಡಿಲ್ಲ. ಸದ್ಯ ಸಿನಿಮಾವನ್ನು ಘೋಷಿಸಿದ್ದಾರಷ್ಟೇ. ಆದ್ರೆ ಅವರ ಸೋಷಿಯಲ್​ ಮಿಡಿಯಾ ಪೋಸ್ಟ್ ಪ್ರಕಾರ, ಸೂಪರ್​ ಸ್ಟಾರ್​ ಶಾರುಖ್​ ಖಾನ್​ ಡಾನ್​ 3ರ ಭಾಗವಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿದೆ. ಇತ್ತ ನಟ ರಣ್​ವೀರ್​ ಸಿಂಗ್​ ಅವರ ಕಾಸ್ಟಿಂಗ್​ಗೂ ಅಂತಿಮ ಮುದ್ರೆ ಬಿದ್ದಿಲ್ಲ. ಆದ್ರೆ ಚಿತ್ರತಂಡದ ಮೂಲಗಳ ಪ್ರಕಾರ ನಟ ರಣ್​ವೀರ್​ ಸಿಂಗ್​ ಅವರೇ ಮುಂದಿನ ಡಾನ್​.

ಕಿಯಾರಾ ಅಡ್ವಾಣಿ ಎಂಟ್ರಿ:ರಣ್​ವೀರ್​ ಸಿಂಗ್​ ಅವರೊಂದಿಗೆ ಬಾಲಿವುಡ್​ ಬೆಡಗಿ ಕಿಯಾರಾ ಅಡ್ವಾಣಿ ನಟಿಸಲಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಮುನ್ನಲೆಗೆ ಬಂದಿರುವ ವಿಡಿಯೋವೊಂದು ಇದನ್ನು ಬಹುತೇಕ ಖಚಿತಪಡಿಸಿದೆ. ಚಿತ್ರಕ್ಕೆ ಬಂಡವಾಳ ಹೂಡಲಿರುವ ಎಕ್ಚೆಲ್​ ಎಂಟರ್​ಟೈನ್​ಮೆಂಟ್​ನ ಮಾಲೀಕ ರಿತೇಶ್​ ಸಿಧ್ವಾನಿ ಅವರನ್ನು ನಟಿ ಭೇಟಿಯಾಗಿದ್ದಾರೆ. ನಿರ್ಮಾಪಕರ ಕಚೇರಿಯಲ್ಲಿ ಬಹಳ ಹೊತ್ತು ಚರ್ಚೆ ನಡೆದಿದೆ. ಬಳಿಕ ರಿತೇಶ್​ ಅವರು ಕಿಯಾರಾರನ್ನು ಡ್ರಾಪ್​ ಮಾಡಲು ಹೊರಗೆ ಬಂದರು. ಈ ವಿಡಿಯೋ ಆನ್​ಲೈನ್​ನಲ್ಲಿ ವೈರಲ್​ ಆಗುತ್ತಿದ್ದು, ನಾಯಕ ನಟಿ ಬಹುತೇಕ ಇವರೇ ಎಂದು ನಂಬಲಾಗಿದೆ.

ಇದನ್ನೂ ಓದಿ:Jailer: ರಜನಿಕಾಂತ್​ ಜೈಲರ್‌ ಸಿನಿಮಾ ನೋಡಲು ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ರಜೆ!

ನಿರ್ಮಾಪಕ ರಿತೇಶ್​ ಸಿಧ್ವಾನಿ ಕಚೇರಿ ಕಿಯಾರಾ ಬಳಿ ಕಂಪ್ಲೀಟ್​ ವೈಟ್​ ಡ್ರೆಸ್​ ಧರಿಸಿ ಕಿಯಾರಾ ಕಾಣಿಸಿಕೊಂಡರು. ರಿತೇಶ್​ ಅವರ ಕಚೇರಿಯೆದುರು ಕಿಯರಾರನ್ನು ನೋಡಿದ ನೆಟ್ಟಿಗರು, ಈ ಡಾನ್​ 3 ಸಿನಿಮಾಗೆ ಅವರೇ ನಾಯಕ ನಟಿ ಎಂದು ಅಂದಾಜಿಸಿದ್ದಾರೆ. ಆ್ಯಕ್ಷನ್​ ಥ್ರಿಲ್ಲರ್ ಸಿನಿಮಾ ಡಾನ್​ 3 ಬಗ್ಗೆ ಫರ್ಹಾನ್​ ಅಖ್ತರ್​ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. 'ಡಾನ್​​ 3' ಅಷ್ಟೇ ಅಧಿಕೃತ ಘೋಷಣೆ ಆಗಿದ್ದು, ರಣ್​ವೀರ್​ ಸಿಂಗ್ ಮತ್ತು ಕಿಯಾರಾ ಅಡ್ವಾಣಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ. 2025 ರಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಜನೆಯಿದೆ.​

ಇದನ್ನೂ ಓದಿ:ನಟಿ ಶೆರ್ಲಿನ್​ ಚೋಪ್ರಾಗೆ ರಾಹುಲ್​ ಗಾಂಧಿಯವರನ್ನು ಮದುವೆಯಾಗೋ ಆಸೆಯಂತೆ - ಕಂಡೀಶನ್ಸ್ ಅಪ್ಲೈ!

ABOUT THE AUTHOR

...view details