'ಲಿಡ್ಕರ್' ಉತ್ಪನ್ನಗಳಿಗೆ ರಾಯಭಾರಿಯಾದ ಡಾಲಿ ಧನಂಜಯ್ ಅಮೋಘ ಅಭಿನಯದ ಮೂಲಕ ಸಿನಿಪ್ರೇಮಿಗಳ ಹೃದಯ ಗೆದ್ದಿರುವ ಕನ್ನಡದ ಖ್ಯಾತ ನಟ ಡಾಲಿ ಧನಂಜಯ್. ಇವರು ನಟರಾಕ್ಷಸ ಎಂದೇ ಹೆಸರುವಾಸಿ. ಅಮೋಘ ಅಭಿನಯ, ಅಭಿಮಾನಿಗಳ ಸಂಖ್ಯೆಯೂ ಅಪಾರ. ಸಾಮಾಜಿಕ ಕಳಕಳಿ ಹೊಂದಿರುವ ನಟನೂ ಹೌದು. ಈ ಹಿನ್ನೆಲೆಯಲ್ಲಿ ಇವರನ್ನು ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ (ಲಿಡ್ಕರ್) ಇದೇ ಮೊದಲ ಬಾರಿಗೆ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ.
'ಲಿಡ್ಕರ್' ರಾಯಭಾರಿಯಾದ ಡಾಲಿ ಧನಂಜಯ್ 'ಲಿಡ್ಕರ್' ಉತ್ಪನ್ನಗಳಿಗೆ ರಾಯಭಾರಿಯಾದ ಡಾಲಿ: ನಟನೆ, ನಿರ್ಮಾಣದ ಜೊತೆಗೀಗ ಜಾಹೀರಾತು ಕ್ಷೇತ್ರಕ್ಕೂ ಡಾಲಿ ಕಾಲಿಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಸರ್ಕಾರದ ಜಾಹೀರಾತಿನಲ್ಲಿ ಮಿಂಚುತ್ತಿದ್ದಾರೆ. 'ಲಿಡ್ಕರ್' ಬ್ರ್ಯಾಂಡ್ಸ್ ಪ್ರಮೋಟ್ ಮಾಡುತ್ತಿದ್ದಾರೆ.
ಲಿಡ್ಕರ್‌ನಲ್ಲಿ 50 ಸಾವಿರಕ್ಕೂ ಹೆಚ್ಚು ಚರ್ಮ ಕುಶಲಕರ್ಮಿಗಳ ಕುಟುಂಬಗಳಿವೆ. ಚರ್ಮ ಕೈಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಮುಂದಾಗಿರುವ ಸರ್ಕಾರ ಸ್ಯಾಂಡಲ್‌ವುಡ್ ಸ್ಟಾರ್ ಧನಂಜಯ್ ಅವರನ್ನು ರಾಯಾಭಾರಿಯಾಗಿ ನೇಮಿಸಿದೆ. ಈಗಾಗಲೇ ಡಾಲಿ ಜೊತೆ ಮಾತುಕತೆಯಾಗಿದ್ದು, ಧನಂಜಯ್ ಕೂಡ ಗ್ರೀನ್‌ಸಿಗ್ನಲ್ ನೀಡಿದ್ದಾರೆ.
'ಲಿಡ್ಕರ್' ಉತ್ಪನ್ನಗಳಿಗೆ ರಾಯಭಾರಿಯಾದ ಡಾಲಿ ಧನಂಜಯ್ 'ಎಲ್ಲಾ ವರ್ಗದ ಜನರನ್ನು ತಲುಪುವ ನಟ': ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ.ಎಸ್ ವಸುಂಧರಾ, ಧನಂಜಯ್ ರಾಯಭಾರಿಯಾಗಿದ್ದು ತುಂಬಾ ಖುಷಿ ಕೊಟ್ಟಿದೆ. ಅವರು ಕನ್ನಡ ಚಿತ್ರರಂಗದ ಲೀಡಿಂಗ್ ನಟ. ಎಲ್ಲಾ ವರ್ಗದ ಜನರನ್ನು ತಲುಪುವ ಕಲಾವಿದ. ಹಾಗಾಗಿ ಅವರನ್ನು ಆಯ್ಕೆ ಮಾಡಿದ್ದೇವೆ. ಸಚಿವರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ಆದಷ್ಟು ಬೇಗ ಜಾಹೀರಾತಿನ ಚಿತ್ರೀಕರಣ ನಡೆಯಲಿದೆ ಎಂದರು.
ಇದನ್ನೂ ಓದಿ:ಸ್ಟೈಲಿಶ್ ಲುಕ್ನಲ್ಲಿ ಆಲಿಯಾ ಭಟ್; ಶಾರುಖ್ ನಂತರದ ಸ್ಥಾನ ಬಣ್ಣದ ಲೋಕದ ಈ ಬೊಂಬೆಗೆ- ಫೋಟೋಗಳಿವೆ ನೋಡಿ
ಡಾಲಿ ಧನಂಜಯ್ ಸದ್ಯ ಸಾಲು ಸಾಲು ಸಿನಿಮಾಗಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗಷ್ಟೇ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ನಿರ್ಮಾಣದ 'ಟಗರು ಪಲ್ಯ' ಸಿನಿಮಾ ರಿಲೀಸ್ ಮಾಡಿದ್ದರು. ಉಮೇಶ್ ಕೆ ಕೃಪ ನಿರ್ದೇಶನದ ಚಿತ್ರದಲ್ಲಿ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಮತ್ತು ನಾಗಭೂಷಣ್ ತೆರೆ ಹಂಚಿಕೊಂಡಿದ್ದರು. ಅಕ್ಟೋಬರ್ 27ರಂದು ತೆರೆಕಂಡ ಚಿತ್ರ ಸಿನಿಪ್ರಿಯರನ್ನು ಸೆಳೆಯುವಲ್ಲಿ ಯಶಸ್ಸು ಕಂಡಿದೆ. ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಅವರ ಚೊಚ್ಚಲ ಚಿತ್ರ ಇದಾಗಿದ್ದು, ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಗಳಿಸಿದ್ದಾರೆ. ಕನ್ನಡ ಸಿನಿಪ್ರಿಯರನ್ನು ಮನರಂಜಿಸುವಲ್ಲಿ ಯಶ ಕಂಡಿದ್ದಾರೆ. ನಿರ್ಮಾಣದ ಜೊತೆಗೆ ಡಾಲಿ ಕೆಲ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಕನ್ನಡದ ಜೊತೆಗೆ ತೆಲುಗಿನ ಪುಷ್ಪ- 2 ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಡಾಲಿ ಮುಂದಿನ ಸಿನಿಮಾಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ:ಗ್ಲ್ಯಾಮರಸ್ ಲುಕ್ನಲ್ಲಿ ರಾಕುಲ್ ಪ್ರೀತ್ ಸಿಂಗ್: ಸೌಂದರ್ಯಕ್ಕೆ ಫ್ಯಾನ್ಸ್ ಕೊಟ್ರು ಫುಲ್ ಮಾರ್ಕ್ಸ್-ಫೋಟೋ ಗ್ಯಾಲರಿ