ಬೆಂಗಳೂರ: ನಗರ ಅಥವಾ ಹಳ್ಳಿಗಳಲ್ಲಿ ಗಣೇಶನ ಹಬ್ಬ, ಕನ್ನಡ ರಾಜ್ಯೋತ್ಸವ ಸೇರಿದಂತೆ ಮದುವೆ ಸಮಾರಂಭಗಳಲ್ಲಿ ಆರ್ಕೆಸ್ಟ್ರಾ ಇರುವುದು ಸಾಮಾನ್ಯ ಸಂಗತಿಯಾಗಿದೆ. ಇದೀಗ ಆರ್ಕೆಸ್ಟ್ರಾ ಮೈಸೂರು ಎಂಬ ಹೆಸರಿನಲ್ಲಿ ಚಿತ್ರವೊಂದು ನಿರ್ಮಾಣವಾಗಿದ್ದು, ಚಿತ್ರಕ್ಕೆ ಡಾಲಿ ಧನಂಜಯ್ 8 ಹಾಡುಗಳನ್ನು ರಚನೆ ಮಾಡಿದ್ದಾರೆ. ನಟನೆ ಮಾತ್ರವಲ್ಲದೆ ಹಾಡು ರಚನೆಕಾರರಾಗಿದ್ದಾರೆ ಡಾಲಿ.
ಮೈಸೂರಿನಲ್ಲಿ ಆರ್ಕೆಸ್ಟ್ರಾ ತುಂಬ ಜನಪ್ರಿಯವಾದ ಕಾರಣ, ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದ್ದು, ಆರ್ಕೆಸ್ಟ್ರಾ ಹಾಡುಗಾರನಾಗಬೇಕೆಂಬ ಆಸೆಹೊತ್ತ ಹುಡುಗನ ಕಥೆ ಸಿನಿಮಾದ ತಿರುಳು ಎಂದು ಚಿತ್ರತಂಡ ಹೇಳಿದೆ. ನಾಯಕ ನಟನಾಗಿ ಯುವ ನಟ ಪೂರ್ಣ, ಚಿತ್ರದಲ್ಲಿ ನಟಿಸಿದ್ದು, ನಾಯಕಿ ಪಾತ್ರದಲ್ಲಿ ರಾಜಲಕ್ಷ್ಮೀ ಸಾಥ್ ನೀಡಿದ್ದಾರೆ.