ಇಂದು ಪ್ರಕಟವಾದ 2020ನೇ ಸಾಲಿನ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡದ ಸಿನಿಮಾಗಳು ಕಮಾಲ್ ಮಾಡಿದ್ದು, ಕನ್ನಡ ಚಿತ್ರರಂಗಕ್ಕೆ ಮೂರು ಗಳು ಸಿಕ್ಕಿವೆ. 'ಡೊಳ್ಳು', 'ತಲೆದಂಡ' ಹಾಗೂ 'ನಾದದ ನವನೀತ' ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಯ ಗರಿ ಮುಡಿಗೇರಿದೆ.
ಸಾಗರ್ ಪುರಾಣಿಕ್ ನಿರ್ದೇಶನ ಮತ್ತು ಪವನ್ ಒಡೆಯರ್ ನಿರ್ಮಾಣದ 'ಡೊಳ್ಳು' ಸಿನಿಮಾ ಕನ್ನಡ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂಬ ಪ್ರಶಸ್ತಿಗೆ ಭಾಜನವಾಗಿದೆ. ದಿ.ಸಂಚಾರಿ ವಿಜಯ್ ನಟನೆಯ 'ತಲೆದಂಡ' ಸಿನಿಮಾಗೂ ರಾಷ್ಟ್ರ ಪ್ರಶಸ್ತಿ ಸಂದಿದ್ದು, ಪ್ರವೀಣ್ ಕೃಪಾಕರ್ ನಿರ್ದೇಶನದ 'ತಲೆದಂಡ' ಚಿತ್ರಕ್ಕೆ ಅತ್ಯುತ್ತಮ ಪರಿಸರ ಕಾಳಜಿ ಪ್ರಶಸ್ತಿ ಲಭಿಸಿದೆ. ಅಲ್ಲದೇ, ಗಿರೀಶ್ ಕಾಸರವಳ್ಳಿ ನಿರ್ದೇಶನದ 'ನಾದದ ನವನೀತ' ಚಿತ್ರಕ್ಕೂ ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿ ಚಿತ್ರದ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದೆ.
ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾದ 'ಡೊಳ್ಳು' ಸಿನಿಮಾದ ನಿರ್ದೇಶಕ ಸಾಗರ್ ಪುರಾಣಿಕ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಪ್ರಶಸ್ತಿಗೆ ಬಂದಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಒಂದು ಒಳ್ಳೆಯ ತಂಡ ಸೇರಿದರೆ ಆ ತಂಡ ಗುರಿಯನ್ನು ಬೇಕಾದರೂ ತಲುಪಬಹುದು ಎಂದು 'ಡೊಳ್ಳು' ಸಿನಿಮಾದಿಂದ ಸಾಬೀತಾಗಿದೆ ಎಂದು ಹೇಳಿದ್ದಾರೆ.
ಮುಖ್ಯವಾಗಿ ಚಿತ್ರಕ್ಕೆ ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್ ಅಂತಹ ಉತ್ತಮವಾದ ನಿರ್ಮಾಪಕರು ಸಿಕ್ಕರು. ದೊಡ್ಡ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಪವನ್ ಒಡೆಯರ್ ಮತ್ತೊಬ್ಬ ನಿರ್ದೇಶಕನ ಮೇಲೆ ನಂಬಿಕೆ ಇಟ್ಟು, ಪ್ರೋತ್ಸಾಹಿಸಿದರು. ಬರಹಗಾರರು ಸೇರಿ ಇಡೀ ಚಿತ್ರತಂಡ ಒಂದೊಳ್ಳೆ ಸಿನಿಮಾದ ಖುಷಿ ಇದೆ ಎಂದು ಎಂದು ಸಾಗರ್ ಪುರಾಣಿಕ್ ಹೇಳಿದರು.