ಬಾಲಿವುಡ್‌ನ ಬಾರ್ಬಿ ಡಾಲ್ ಕತ್ರಿನಾ ಕೈಫ್ ಇತ್ತೀಚಿನ ದಿನಗಳಲ್ಲಿ 'ಮೇರಿ ಕ್ರಿಸ್ಮಸ್' ಸಲುವಾಗಿ ಸುದ್ದಿಯಲ್ಲಿದ್ದಾರೆ. ದಕ್ಷಿಣದ ಜನಪ್ರಿಯ ನಟ ವಿಜಯ್ ಸೇತುಪತಿ ಅವರೊಂದಿಗೆ ತೆರೆ ಹಂಚಿಕೊಂಡಿರುವ ಈ ಸಿನಿಮಾ 2024ರ ಆರಂಭದಲ್ಲಿ ತೆರೆಗಪ್ಪಳಿಸಲಿದೆ. ಈ ಬಹುನಿರೀಕ್ಷಿತ ಚಿತ್ರ ಇದೇ ಸಾಲಿನಲ್ಲಿ ತೆರೆಕಾಣಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಕೆಲವು ಬಾರಿ ಮುಂದೂಡಿಕೆಯಾಗಿದ್ದು, ಇದೀಗ 2024ರ ಜನವರಿಯಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ.
ಟೈಗರ್ ಸಿನಿಮಾ ಖ್ಯಾತಿಯ ನಟಿ ಕತ್ರಿನಾ ಕೈಫ್ ಈಗಾಗಲೇ ತಮ್ಮ ಮುಂದಿನ ಬಹುನಿರೀಕ್ಷಿತ ಸಿನಿಮಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಚಾರದ ಭಾಗವಾಗಿ ಸಂದರ್ಶನವೊಂದರಲ್ಲಿ ನಟಿ ಕತ್ರಿನಾ ಕೈಫ್ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ಮಾಡೆಲಿಂಗ್ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಅಂದಿನ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕತ್ರಿನಾ ಕೈಫ್ ರೋಲ್ ಮಾಡೆಲ್ ಯಾರು? ಕತ್ರಿನಾ ಕೈಫ್ ಸಂದರ್ಶನದಲ್ಲಿ ತಮ್ಮ ರೋಲ್ ಮಾಡೆಲ್ ಯಾರು ಎಂಬುದನ್ನು ಬಹಿರಂಗಪಡಿಸಿದರು. ಫಿಟ್ನೆಸ್ ಕ್ವೀನ್ ಮಲೈಕಾ ಅರೋರಾ ಅವರನ್ನು ಬಹಳ ಇಷ್ಟಪಡುವುದಾಗಿ ಬಹಿರಂಗಪಡಿಸಿದರು. ತಮ್ಮ ಮಾಡೆಲಿಂಗ್ ದಿನಗಳಲ್ಲಿ ಮಲೈಕಾ ಅರೋರಾ, ಮಧು ಸಪ್ರೆ ಮತ್ತು ಲಕ್ಷ್ಮಿ ಮೆನನ್ ಅವರನ್ನು ತಮ್ಮ ರೋಲ್ ಮಾಡೆಲ್ ಆಗಿ ಪರಿಗಣಿಸಿದ್ದೆ ಎಂಬುದನ್ನು ಕತ್ರಿನಾ ಬಹಿರಂಗಪಡಿಸಿದ್ದಾರೆ. ಇವರನ್ನು ಅನುಸರಿಸುತ್ತಿದ್ದೆ, ಸೂಪರ್ ಮಾಡೆಲ್ ಆಗಲು ಬಯಸಿದ್ದೆ ಎಂದು ಕತ್ರಿನಾ ಸಂದರ್ಶನದಲ್ಲಿ ತಿಳಿಸಿದ್ದಾರೆ.