ಕರ್ನಾಟಕ

karnataka

ETV Bharat / entertainment

'ದಸರಾ' ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ: ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ಮತ್ತೊಬ್ಬ ಕನ್ನಡ ನಟ - dasara film

'ದಿಯಾ' ಸಿನಿಮ ಖ್ಯಾತಿಯ ದೀಕ್ಷಿತ್​ ಶೆಟ್ಟಿ, ಇದೀಗ ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ಮಿಂಚಲು ಸಿದ್ಧರಾಗಿದ್ದಾರೆ.

Diya Fame Actor Dikshit Shetty share screen with Tollywood Actor
Diya Fame Actor Dikshit Shetty share screen with Tollywood Actor

By

Published : Mar 24, 2023, 3:36 PM IST

'ದಿಯಾ' ಸಿನಿಮಾದಲ್ಲಿ ಲವರ್​ ಬಾಯ್​ ಆಗಿ ಮಿಂಚಿದ್ದ ದೀಕ್ಷಿತ್​ ಶೆಟ್ಟಿ ಇದೀಗ ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ನ್ಯಾಚುರಲ್​ ಸ್ಟಾರ್​ ನಾನಿ ಅಭಿನಯದ ಬಹು ನಿರೀಕ್ಷಿತ ಚಿತ್ರ 'ದಸರಾ'ದಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಈ ಮೂಲಕ ತೆಲುಗು ಚಿತ್ರರಂಗದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮೂಲಗಳ ಪ್ರಕಾರ ದೀಕ್ಷಿತ್​ ಶೆಟ್ಟಿ ದಸರಾ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

ಸೂರಿ ಪಾತ್ರದಲ್ಲಿ ದಿಯಾ ನಟ: ವಿಭಿನ್ನ ರೀತಿಯ ಸಿನಿಮಾ, ಸಹಜ ನಟನೆ ಮೂಲಕ ಮನೆ ಮಾತಾಗಿರುವ ನಾನಿ ಅಭಿಯನದ 'ದಸರಾ' ಮೇಲೆ ಈಗಾಗಲೇ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಟ್ರೈಲರ್​ ಮೂಲಕವೇ ಈ ಚಿತ್ರ ಸದ್ದು ಮಾಡಿದ್ದು, ಇದು ನಾನಿಯ ಮೊದಲ ಪ್ಯಾನ್​ ಇಂಡಿಯಾ ಸಿನಿಮಾ ಆಗಿದೆ. ಇದೇ ಮೊದಲ ಬಾರಿ ಅವರು ರಗಡ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಇದೀಗ ದೀಕ್ಷಿತ್​ ಶೆಟ್ಟಿ, ನಾನಿ ಜೊತೆ ತೆರೆ ಹಂಚಿಕೊಳ್ಳುತ್ತಿದ್ದು, ಸೂರಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಈಗಾಗಲೇ ಭಾರೀ ಬಜೆಟ್​ನಲ್ಲಿ ಚಿತ್ರದ ಕ್ಲೈಮಾಕ್ಸ್​ ಮುಗಿಸಿರುವ ಚಿತ್ರತಂಡ, ಸಿನಿಮಾವನ್ನು ಮಾರ್ಚ್​ 30ರಂದು ಬೆಳ್ಳಿ ಪರದೆ ಮೇಲೆ ತರಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ನಾನಿಗೆ ನಾಯಕಿಯಾಗಿ ಕೀರ್ತಿ ಸುರೇಶ್​ ಕಾಣಿಸಿಕೊಂಡಿದ್ದಾರೆ.

'ದಸರಾ' ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ​

ಅವಕಾಶ ಸಿಕ್ಕಿದ್ದೇಗೆ: ನಟ ದೀಕ್ಷಿತ್​ ಶೆಟ್ಟಿ ಈಗಾಗಲೇ ನಾನಿ ಅವರ ಪ್ರೊಡಕ್ಷನ್​ ಚಿತ್ರದಲ್ಲಿ ಕೆಲಸ ಮಾಡಿದ್ದರು. ನಾನು ಅವರ ರ್ ಪ್ರೊಡಕ್ಷನ್ ಹೌಸ್ ನಡಿ ನಿರ್ಮಾಣವಾದ ‘ಮೀಟ್ ಕ್ಯೂಟ್’ ವೆಬ್ ಸೀರೀಸ್​ನಲ್ಲಿ ನಟಿಸಿದ್ದೆ. ಈ ವೆಬ್ ಸೀರೀಸ್​ನಲ್ಲಿ ನನ್ನ ಪಾತ್ರ ಗಮನಿಸಿ ಸಹ ನಿರ್ದೇಶಕರಾದ ವಿನಯ್ ನನ್ನ ಅಭಿನಯ ನೋಡಿ ದಸರಾ ಸಿನಿಮಾಗೆ ರೆಫರ್ ಮಾಡಿದ್ದರು. ನಾನಿ ಅವರು ಕೂಡ ನನ್ನ ಪಾತ್ರ ಮೆಚ್ಚಿದರು. ಇದರಿಂದಾಗಿ ದಸರಾ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎಂದಿದ್ದಾರೆ ನಟ ದೀಕ್ಷಿತ್ ಶೆಟ್ಟಿ.

ಚಿತ್ರದಲ್ಲಿ ಸೂರಿ ಎಂಬ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ. ಇಡೀ ಸಿನಿಮಾದಲ್ಲಿ ಈ ಪಾತ್ರ ಕ್ಯಾರಿಯಾಗುತ್ತೆ. ಹತ್ತು ತಿಂಗಳು ‘ದಸರಾ’ ಸಿನಿಮಾ ತಂಡದೊಂದಿಗೆ ಕೆಲಸ ಮಾಡಿದ್ದೇನೆ. ಈ ಚಿತ್ರ ಅದ್ಭುತ ಅನುಭವ ನೀಡಿದೆ. ನಿರ್ದೇಶಕರ ಜೊತೆಗೆ ನಾನಿ ಸರ್ ಕೂಡ ನನ್ನ ಪಾತ್ರ ನಿರ್ವಹಿಸಲು ಒಂದಿಷ್ಟು ಸಲಹೆ ನೀಡುತ್ತಿದ್ದರು ಎಂದು ತಮ್ಮ ಪಾತ್ರ ಹಾಗೂ ‘ದಸರಾ’ ತಂಡದ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ ದೀಕ್ಷಿತ್ ಶೆಟ್ಟಿ.

ಕನ್ನಡದಲ್ಲಿಯೂ ಬ್ಯುಸಿಯಾಗಿರುವ ನಟ: ‘ದಿಯಾ’ ನಂತರ ಬೇಡಿಕೆ ಪಡೆದಿದ್ದ ದೀಕ್ಷಿತ್ ಶೆಟ್ಟಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಒಂದೇ ರೀತಿಯ ಕಥೆ, ಪಾತ್ರಕ್ಕೆ ಸೀಮಿತವಾಗದೇ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಅವರು ಗಮನ ಸೆಳೆದಿದ್ದರು. ಇತ್ತ ತೆಲುಗಿನಲ್ಲಿ ಅವರ ದಸಾರಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ, ಕನ್ನಡದಲ್ಲಿ ‘ಕೆಟಿಎಂ’ ಹಾಗೂ ‘ಬ್ಲಿಂಕ್’ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ.

ಇದನ್ನೂ ಓದಿ: ನರೇಶ್​, ಪವಿತ್ರ ಅಭಿನಯದ 'ಮತ್ತೆ ಮದುವೆ' ಚಿತ್ರದ ಫಸ್ಟ್​ಲುಕ್​ ರಿಲೀಸ್

ABOUT THE AUTHOR

...view details