ಬಾಲಿವುಡ್ನ ದಿ ಬೆಸ್ಟ್ ಜೋಡಿ ಎಂದೇ ಫೇಮಸ್ ಆಗಿದ್ದ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಬ್ರೇಕಪ್ ವದಂತಿಗಳ ನಂತರ ಇತ್ತೀಚೆಗೆ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ಸಹೋದರಿ ಕೃಷ್ಣ ಶ್ರಾಫ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಇಬ್ಬರು ಸ್ನೇಹಿತೆಯರು ಮುಂಬೈನ ರೆಸ್ಟೋರೆಂಟ್ನಿಂದ ಹೊರಬರುತ್ತಿರುವ ವೇಳೆ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ರಾತ್ರಿ ಊಟ ಮುಗಿಸಿ ಉಪಹಾರ ಗೃಹದಿಂದ ಕೈ ಕೈ ಹಿಡಿದುಕೊಂಡು ಇಬ್ಬರು ಬರುತ್ತಿರುವುದನ್ನು ಸೆರೆ ಹಿಡಿಯಲಾಗಿದೆ.
ಸುಂದರ ಸಂಜೆಗಾಗಿ ದಿಶಾ ಪಟಾನಿ ಡಿಸ್ಟ್ರೆಸ್ಡ್ ಡೆನಿಮ್ ಶಾರ್ಟ್ಸ್ ಮತ್ತು ಮೈಗಂಟುವ ಬ್ಲ್ಯಾಕ್ ಡ್ರೆಸ್ ಧರಿಸಿದ್ದರು. ಬ್ಲ್ಯಾಕ್ ಸ್ನೀಕರ್ಸ್, ಕನಿಷ್ಟ ಮೇಕಪ್ ಮತ್ತು ಫ್ರೀ ಹೇರ್ಸ್ನೊಂದಿಗೆ ತಮ್ಮ ನೋಟವನ್ನು ಪೂರ್ಣಗೊಳಿಸಿದರು. ಮತ್ತೊಂದೆಡೆ, ಜಾಕಿ ಶ್ರಾಫ್ ಪುತ್ರಿ, ರೂಪದರ್ಶಿ ಕೃಷ್ಣ ಶ್ರಾಫ್ ಗ್ರೀನ್ ಚೆಕರ್ಡ್ ಪ್ಯಾಂಟ್ ಮತ್ತು ವೈಟ್ ಆಫ್ ಶೋಲ್ಡರ್ ಕ್ರಾಪ್ ಟಾಪ್ ಆರಿಸಿಕೊಂಡಿದ್ದರು. ಕೂದಲನ್ನು ಮೇಲಕ್ಕೆ ಎತ್ತಿ ಕಟ್ಟಿದ್ದರು. ಇಬ್ಬರು ಕೈ ಹಿಡಿದುಕೊಂಡು ರೆಸ್ಟೋರೆಂಟ್ನಿಂದ ಹೊರಬಂದು ತಮ್ಮ ಐಷರಾಮಿ ಕಾರು ಏರಿ ಹೊರಟರು.
ಮೊದಲಿನಿಂದಲೂ ಟೈಗರ್ ಶ್ರಾಫ್ ಜೊತೆ ದಿಶಾ ಪಟಾನಿ ಹೆಸರು ಕೇಳಿ ಬಂದಿತ್ತು. ಆದರೆ, ಬ್ರೇಕಪ್ ವದಂತಿ ಬಗ್ಗೆ ಊಹಾಪೋಹಗಳಿದೆಯೇ ಹೊರತು ಅಧಿಕೃತವಾಗಿ ಯಾವುದೇ ಹೇಳಿಕೆಗಳಿಲ್ಲ. ಈ ಬಗ್ಗೆ ಟೈಗರ್ ಶ್ರಾಫ್ ಆಗಲಿ, ದಿಶಾ ಪಟಾನಿ ಆಗಲಿ ಯಾರೂ ಸ್ಪಷ್ಟಪಡಿಸಿಲ್ಲ. ಇನ್ನು ತಾವು ಡೇಟಿಂಗ್ ನಡೆಸುತ್ತಿರುವುದಾಗಿಯೂ ಈ ತಾರಾ ಜೋಡಿ ಯಾವತ್ತೂ ಹೇಳಿಕೊಂಡಿರಲಿಲ್ಲ. ಹೀಗಾಗಿ ಬ್ರೇಕಪ್ ವದಂತಿ ಎಷ್ಟರ ಮಟ್ಟಿಗೆ ಸರಿ ಅನ್ನುವುದಕ್ಕೆ ಸ್ಪಷ್ಟತೆಯಿಲ್ಲ.