ಕರ್ನಾಟಕ

karnataka

ETV Bharat / entertainment

ವೀರ ಕಂಬಳ ಚಿತ್ರಕ್ಕಾಗಿ 16 ಸಾವಿರ ಪುಟಗಳ ಸ್ಕ್ರಿಪ್ಟ್​ ಚರ್ಚೆಯಾಗಿವೆ; ರಾಜೇಂದ್ರ ಸಿಂಗ್​ ಬಾಬು

ಕಂಬಳದ ಕಥೆ ಆಧಾರಿತ ವೀರ ಕಂಬಳ ಚಿತ್ರದ ನಿರ್ಮಾಣಕ್ಕಾಗಿ 16 ಸಾವಿರ ಪುಟಗಳ ಸ್ಕ್ರಿಪ್ಟ್​ಗಳ ಚರ್ಚೆಯಾಗಿದ್ದು, ಮುಖ್ಯ ಪಾತ್ರದಲ್ಲಿ ಪ್ರಕಾಶ್​ ರೈ, ಮತ್ತು ರವಿಶಂಕರ್​ ಕಾಣಿಸಿಕೊಂಡಿದ್ದಾರೆ. ಇವರು ಚಿತ್ರಕ್ಕೆ ಮತ್ತಷ್ಟು ಮೆರುಗು ತಂಬಿದ್ದಾರೆ ಎಂದು ನಿದೇರ್ಶಕ ರಾಜೇಂದ್ರ ಬಾಬು ಸಿಂಗ್​ ಹೇಳಿದ್ದಾರೆ. ​

veera kambala
ವೀರ ಕಂಬಳ

By

Published : Jun 20, 2022, 4:18 PM IST

ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಕ್ರೀಡೆ ಎಂದಾಕ್ಷಣ ನೆನಪಿಗೆ ಬರುವುದು ಕಂಬಳ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕಂಬಳ ತುಳುನಾಡಿನ ಸಾಂಸ್ಕೃತಿಕ ಕ್ರೀಡೆಗಳಲ್ಲಿ ಒಂದು. ಇದೀಗ ಕಂಬಳದ ಕಥೆ ಆಧಾರಿತ ಚಲನಚಿತ್ರ ನಿರ್ಮಾಣವಾಗಿದ್ದು, ಇದನ್ನು ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಬಹುಬಾಷೆ ನಟ ಪ್ರಕಾಶ ರೈ ನಟಿಸುವ ಮೂಲಕ ಪಾತ್ರಕ್ಕೆ ಮತ್ತಷ್ಟು ಜೀವ ತುಂಬಿದ್ದಾರೆ. ಇಗಾಗಲೇ ಹಲವಾರು ಸಿನಿಮಾ ಮಾಡಿರುವ ರೈ, ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರದಲ್ಲಿ, ಪ್ರಾಂಶುಪಾಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದೀಗ ಚಿತ್ರದಲ್ಲಿ ಕಂಬಳದ ಪರ ವಕೀಲರಾಗಿ ಪ್ರಕಾಶ್ ರೈ ನಟಿಸಿದ್ದು, ಪ್ರತಿವಾದಿಯಾಗಿ ರವಿಶಂಕರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕೋರ್ಟ್ ಸನ್ನಿವೇಶವನ್ನು ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಿಸಿಲಾಗಿದ್ದು, ನಿರ್ದೇಶಜ ರಾಜೇಂದ್ರ ಸಿಂಗ್​ ಬಾಬು, ವಿಜಯ್​ ಕುಮಾರ್​ ಕೊಡಿಯಾಲ್​ ಬೈಲ್​, ಆದಿತ್ಯ, ವೀಣಾ ಪೊನ್ನಪ್ಪ, ಪ್ರಕಾಶ್ ರೈ, ರವಿಶಂಕರ್, ಇಡೀ ಚಿತ್ರತಂಡ ಚಿತ್ರಕರಣದ ವೇಳೆ ಕಂಠಿರವ ಸ್ಟುಡಿಯೋದಲ್ಲಿ ಹಾಜರಾಗಿತ್ತು.

ವೀರ ಕಂಬಳ ಸಿನಿಮಾ ಕುರಿತು ಮಾತನಾಡಿರುವ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು, ಸಿನಿಮಾದ ಸ್ಕ್ರಿಪ್ಟ್​ ಸಿದ್ಧ ಮಾಡಲು ಎರಡು ವರ್ಷ ಸಮಯ ತೆಗೆದಕೊಂಡಿದ್ದು, 16 ಸಾವಿರ ಪುಟಗಳ ಸ್ಕ್ರಿಪ್ಟ್​ ಕುರಿತು ತುಂಬ ಚರ್ಚೆಯಾಗಿವೆ. ಕೋರ್ಟಿನಿಂದ ತರಿಸಿ, ಈ ವಾದಗಳನ್ನು ಯಾವ ರೀತಿ ತೆರೆಗೆ ತರಬೇಕು ಎಂಬುದು ಮುಖ್ಯ. ಏಕೆಂದರೆ ಚಿತ್ರ ಕಾಮೆಂಟರಿ ಅಥವಾ ಸಾಕ್ಷ್ಯಚಿತ್ರ ಆಗಬಾರದು ಎಂಬುದು ದೊಡ್ಡ ಸವಾಲಿತ್ತು.

ಚಿತ್ರಕ್ಕಾಗಿ ತುಂಬಾ ಜನರ ಸಲಹೆ ಪಡೆದಿದ್ದೇವೆ. ಟಿ.ಎನ್​. ಸೀತಾರಾಮ್ ಅವರಿಂದ ಬೇಕಾದಷ್ಟು ವಿಷಯ ಕಲೆ ಹಾಕಿದೆವು. 9 ತಿಂಗಳಿನಿಂದ ಇದೊಂದು ಸೀನ್​ ಮೇಲೆ ನಾನು ಮತ್ತು ವಿಜಯ್​ ಕುಮಾರ್​ ಕೊಡಿಯಾಲ್ ​ಬೈಲ್​ ಕೆಲಸ ಮಾಡುತ್ತಿದ್ದೇವೆ. ಅದೇ ಕಾರಣಕ್ಕೆ ಚಿತ್ರೀಕರಣ ಕೊನೆಯಲ್ಲಿಟ್ಟುಕೊಂಡೆವು. ಇದನ್ನು ಹೇಗೆ ಹೇಳಬೇಕು ಎಂದು ಯೋಚಿಸಿ, ಇವತ್ತು ಚಿತ್ರೀಕರಣ ಮಾಡುತ್ತಿದ್ದೇವೆ. ನಾವೇನೇ ಬರೆದಿಟ್ಟುಕೊಂಡರೂ ಪ್ರಕಾಶ್​ ರೈ ಮತ್ತು ರವಿ ಶಂಕರ್ ಅವರ ಅಭಿನಯ, ಚಿತ್ರದ ಮತ್ತು ದೃಶ್ಯದ ಮೌಲ್ಯ ಹೆಚ್ಚಿಸಿದೆ. ಇಬ್ಬರೂ ಅಪ್ಪಟ ಪ್ರತಿಭಾವಂತರು ಎಂದು ಬಣ್ಣಿಸಿದರು.

ಪ್ರಕಾಶ್ ರೈ ಈ ಹಿಂದೆ ಮುತ್ತಿನ ಹಾರ ಚಿತ್ರದಲ್ಲಿ ನಟಿಸಿದ್ದರು. ಅವರೊಂದಿಗೆ ಒಳ್ಳೆಯ ಕ್ಷಣ ಕಳೆದಿದ್ದೇವೆ. ಅದನ್ನು ನೆನಪಿಟ್ಟುಕೊಂಡು ಅವರು ಚಿತ್ರದಲ್ಲಿ ಬಂದು ನಟಿಸುತ್ತಿದ್ದಾರೆ. ಸಿನಿಮಾದ ಕುರಿತು ಕರೆ ಮಾಡಿದ್ದೇ ತಡ, ಅವರು ಯಾವದೇ ಮರು ಮಾತನಾಡದೆ ಒಪ್ಪಿ ಚಿತ್ರದಲ್ಲಿ ನಟಿಸಿದರು. ಹೈದರಾಬಾದ್​ನಿಂದ ನೇರವಾಗಿ ಚಿತ್ರೀಕರಣ ಸ್ಥಳಕ್ಕೆ ಬಂದರು. ರೈ ಭಾರತ ಮಾತ್ರವಲ್ಲದೆ, ಪ್ರಪಂಚದ ಯಾವುದೇ ಭಾಷೆಗಳಲ್ಲೂ ನಟಿಸಿದರು, ಅದರಲ್ಲಿ ಯಶಸ್ಸು ಕಾಣುವಂತಹ ಪ್ರತಿಭೆ ಅವರದ್ದು. ಅವರಿಗೆ ಕನ್ನಡಿಗರ ಆಶೀರ್ವಾದವಿದೆ ಎಂದು ರಾಜೇಂದ್ರ ಸಿಂಗ್​ ಹೇಳಿದರು.

ಮೊದಲಿನಿಂದಲೂ ರವಿಶಂಕರ್​ ಬಹಳ ಒಳ್ಳೆಯ ಪಾತ್ರಗಳಲ್ಲಿ ಮಿಂಚುತ್ತ ಬಂದಿದ್ದಾರೆ. ಇದೀಗ ಈ ಚಿತ್ರದಲ್ಲೂ ಒಂದೊಳ್ಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಂಬಳ ಎಂದರೇನು ಮತ್ತು ಅದರ ವಿಶೇಷತೆ ಏನೂ ಎಂದು ತಿಳಿಯಲು​ 10 ರಿಂದ 15 ಕಂಬಳ ಕ್ರೀಡೆಗಳಿಗೆ ಹಾಜರಾಗಿ ವೀಕ್ಷಿಸಿದ್ದು, ಅಲ್ಲಿಯ ತಜ್ಞರು, ಮಾಲೀಕರು ಮತ್ತು ಜಾಕಿಗಳನ್ನು ಮಾತಾಡಿಸಿ ಚಿತ್ರಕ್ಕೆ ಬೇಕಾಗಿರುವ ಮಾಹಿತಿಗಳನ್ನು ಕಲೆಹಾಕಿದ್ದೇವೆ. ಇದೇ ಕಾರಣಕ್ಕಾಗಿ ಸ್ಕ್ರಿಪ್ಟ್​ಗೆ 2 ವರ್ಷ ಸಮಯ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. 800 ವರ್ಷಗಳ ಇತಿಹಾಸವಿರುವ ಕಂಬಳಕ್ಕೆ ಯಾವದೇ ಚ್ಯುತಿ ಬರದಂತೆ ಪ್ರತಿಯೊಂದು ವಿಷಯವನ್ನು ಗಮನದಲ್ಲಿಟ್ಟುಕ್ಕೊಂಡು ಬಹಳ ಎಚ್ಚರಿಕೆಯಿಂದ ಚಿತ್ರಿಕರಿಸಿದ್ದೇವೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್​ ಬಾಬು ಹೇಳಿದ್ದಾರೆ.

ಇದನ್ನೂ ಓದಿ:ಮಧ್ಯೆದಲ್ಲೇ ಸಿಲುಕಿತು 11 ಪ್ರವಾಸಿಗರಿದ್ದ ಕೇಬಲ್ ಕಾರ್​ : ರಕ್ಷಣಾ ಕಾರ್ಯಾಚರಣೆ ಚುರುಕು

ABOUT THE AUTHOR

...view details