'ಪಠಾಣ್' ಚಿತ್ರ ಬಿಡುಗಡೆಯಾಗಿ ಒಂದು ತಿಂಗಳಾಗಿದೆ. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಾವಿರ ಕೋಟಿ ಕ್ಲಬ್ ಸೇರುವ ಮೂಲಕ ದಾಖಲೆ ಸೃಷ್ಟಿಸಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಚಿತ್ರವು ಹಿಂದಿ ಭಾಷೆಯಲ್ಲಿ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ವಿಶ್ವಾದ್ಯಂತ ಈವರೆಗೆ 1,000 ಕೋಟಿ ರೂ. ಬಾಚಿಕೊಂಡಿದೆ. ಯಶಸ್ಸಿಗೆ ಹರ್ಷ ವ್ಯಕ್ತಪಡಿಸಿರುವ ನಿರ್ದೇಶಕ ಸಿದ್ಧಾರ್ಥ್ ಆನಂದ್ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದರು.
ಸದ್ಯದ ಪರಿಸ್ಥಿತಿಯಲ್ಲಿ ಬಾಲಿವುಡ್‌ಗೆ ದೊಡ್ಡ ಮಟ್ಟಿನ ಯಶಸ್ಸು ಸಿಗುವುದು ಬಹಳ ಮುಖ್ಯವಾಗಿತ್ತು. ಕೋವಿಡ್‌ನಿಂದಾಗಿ ಚಿತ್ರರಂಗದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಆದ್ರೆ ಇತ್ತೀಚೆಗೆ ಬಿಡುಗಡೆಯಾದ ಬಹುತೇಕ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮುನ್ನಡೆ ಸಾಧಿಸಿವೆ. ಇದರಿಂದಾಗಿ ಪ್ರೇಕ್ಷಕರು ಬಾಲಿವುಡ್ ಚಿತ್ರಗಳತ್ತ ಮುಖ ಮಾಡುತ್ತಿದ್ದಾರೆ. ಸದ್ಯ ಪಠಾಣ್ ಗಳಿಸಿದ ಯಶಸ್ಸು ಅಭೂತಪೂರ್ವ, ಅತ್ಯಮೂಲ್ಯವಾದದ್ದು.
ಪಠಾಣ್ ಯಶಸ್ಸಿನ ನಂತರ ನಿರ್ದೇಶಕ ಸಿದ್ಧಾರ್ಥ್ ಆನಂದ್, "ಪಠಾಣ್ ಜಾಗತಿಕವಾಗಿ ಜನರನ್ನು ರಂಜಿಸುತ್ತಿರುವುದಕ್ಕೆ ಬಹಳ ಸಂತೋಷವಾಗಿದೆ ಮತ್ತು ನಾನು ಕೃತಜ್ಞ. ವಿಶ್ವಾದ್ಯಂತ ಚಿತ್ರ 1,000 ಕೋಟಿ ರೂಪಾಯಿ ಗಳಿಸಿದ್ದು ಮತ್ತು ಹಿಂದಿ ಆವೃತ್ತಿಯಲ್ಲಿ 500 ಕೋಟಿ ರೂ. ಕಲೆ ಹಾಕಿದ್ದು ಐತಿಹಾಸಿಕ ಸಾಧನೆ. ಆ ಪ್ರೀತಿಗಾಗಿ ಪ್ರೇಕ್ಷಕರಿಗೆ ಧನ್ಯವಾದಗಳು. ಪಠಾಣ್ ಬಗ್ಗೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಒಬ್ಬ ನಿರ್ದೇಶಕನಾಗಿ ಜಾಗತಿಕ ಮಟ್ಟದಲ್ಲಿ ಹಲವಾರು ಜನರಿಗೆ ಖುಷಿ ಕೊಡುವ ಸಿನಿಮಾ ಮಾಡಿದ್ದಕ್ಕೆ ನನಗೆ ಹೆಮ್ಮೆ ಇದೆ" ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
'ಪಠಾಣ್' ಮೂಲಕ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಸಿನಿಮಾ ಮಾಡಲು ಬಯಸಿದ್ದರ ಬಗ್ಗೆ ಸಿದ್ಧಾರ್ಥ್ ಒಪ್ಪಿಕೊಂಡಿದ್ದಾರೆ. "ನಾವು ನಮ್ಮಲ್ಲಿರುವ ಸ್ಟಾರ್ ಕಾಸ್ಟ್‌ನೊಂದಿಗೆ ಪಠಾಣ್ ನಿರ್ಮಿಸಲು ಪ್ರಾರಂಭಿಸಿದ ವೇಳೆ ನಾವು ದೊಡ್ಡ ಸಂಖ್ಯೆಯನ್ನು (ಕಲೆಕ್ಷನ್ ವಿಚಾರ) ಬೆನ್ನಟ್ಟುತ್ತಿದ್ದೇವೆ ಎಂದು ನನಗೆ ತಿಳಿದಿತ್ತು. ಆದರೆ ನನ್ನ ಕನಸಿನಲ್ಲೂ ಸಹ ಪಠಾಣ್ 400 ಕೋಟಿ ರೂಪಾಯಿ ದಾಟುವ ಹಿಂದಿ ಚಿತ್ರವಾಗಲಿದೆ ಎಂದು ನಾನು ಊಹಿಸಿರಲಿಲ್ಲ. ಇದು ನಂಬಲಾಗದ ಸಾಧನೆ. ಇದು ಯಶ್ ರಾಜ್ ಫಿಲ್ಮ್ಸ್ ಮತ್ತು ನಮ್ಮೆಲ್ಲರನ್ನು ಉತ್ತಮವಾದದ್ದನ್ನು ಮಾಡಲು ಮತ್ತಷ್ಟು ಪ್ರೇರೇಪಿಸುತ್ತದೆ" ಎಂದು ಹೇಳಿದರು.