ಕರ್ನಾಟಕ

karnataka

ETV Bharat / entertainment

'ಕಾಂತಾರವೆಂಬ ಅದ್ಭುತ ಪಾಠ ಮಾಡಿದ ರಿಷಬ್ ಶೆಟ್ಟಿಗೆ ಫೀಸ್​ ಪಾವತಿಸಬೇಕಾಗುತ್ತದೆ' - ಆರ್​ಜಿವಿ ಟ್ವೀಟ್ - Kantara movie updates

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸರಣಿ ಟ್ವೀಟ್ ಮೂಲಕ ಕಾಂತಾರ ತಂಡ, ವಿಶೇಷವಾಗಿ ರಿಷಬ್​ ಶೆಟ್ಟಿಗೆ ಧನ್ಯವಾದ ತಿಳಿಸಿದ್ದಾರೆ.

director ram gopal varma tweets on Kantara movie
ಕಾಂತಾರ ಬಗ್ಗೆ ಆರ್​ಜಿವಿ ಟ್ವೀಟ್

By

Published : Oct 18, 2022, 3:46 PM IST

ಚಿತ್ರರಂಗದ ಮೂಲೆ ಮೂಲೆಗಳಿಂದಲೂ ಕೇಳಿಬರುತ್ತಿರೋದು ಒಂದೇ ಒಂದು ಪದ, ಅದು 'ಕಾಂತಾರ'. ಈ ಮಟ್ಟಿಗೆ ಧೂಳೆಬ್ಬಿಸುತ್ತದೆ ಎಂದು ಚಿತ್ರತಂಡವೇ ಊಹಿಸಿರಕ್ಕಿಲ್ಲ. ದಿನೇ ದಿನೇ 'ಕಾಂತಾರ' ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸುವವರ ಸಂಖ್ಯೆ ಹೆಚ್ಚುತ್ತಿದೆ. ನಟ ರಿಷಬ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನಕ್ಕೆ ಎಲ್ಲೆಡೆ​ ಜೈಕಾರ ಕೂಗಲಾಗುತ್ತಿದೆ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪರಭಾಷೆಯ ಸ್ಟಾರ್​ ನಟರು ಈ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಸರಣಿ ಟ್ವೀಟ್ ಮೂಲಕ ಕಾಂತಾರ ತಂಡ, ವಿಶೇಷವಾಗಿ ರಿಷಬ್​ ಶೆಟ್ಟಿಗೆ ಧನ್ಯವಾದ ತಿಳಿಸಿದ್ದಾರೆ. ಹೇ ರಿಷಬ್​ ಶೆಟ್ಟಿ, ಕಾಂತಾರ ಎಂಬ ಅದ್ಭುತವಾದ ಪಾಠಕ್ಕಾಗಿ ಧನ್ಯವಾದಗಳು. ಎಲ್ಲಾ ಚಲನಚಿತ್ರೋದ್ಯಮದ ಮಂದಿ ನಿಮಗೆ ಟ್ಯೂಷನ್​ ಫೀಸ್​ ಪಾವತಿಸಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಬಿಗ್ ಬಜೆಟ್ ಚಿತ್ರಗಳಿಗೆ ಮಾತ್ರ ಸಿನಿ ಪ್ರಿಯರು ಬರುತ್ತಾರೆಂಬ ವಿಚಾರವನ್ನು ನಟ ರಿಷಬ್ ಶೆಟ್ಟಿ ಅವರು ನಾಶಮಾಡಿದ್ದಾರೆ. ಮುಂದಿನ ದಶಕದವರೆಗೂ ಕಾಂತಾರ ಚಿತ್ರ ಚಲನಚಿತ್ರೋದ್ಯಮಕ್ಕೆ ಅತಿ ದೊಡ್ಡ ಪಾಠವಾದಲಿದೆ ಎಂದು ಹೇಳಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ 300, 400, 500 ಕೋಟಿ ಸಿನಿಮಾ ಮೇಕರ್ಸ್‌ಗೆ ಕಾಂತಾರ ಕಲೆಕ್ಷನ್​ನಿಂದ ಹೃದಯಾಘಾತವಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ನಿರ್ದೇಶಕ ರಾಜಮೌಳಿ ಮುಂದಿನ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ-ಮಹೇಶ್ ಬಾಬು

ಶಿವ ಹೇಗೆ ದೈವ ಗುಳಿಗಗೆ ಎಚ್ಚೆತ್ತುಕೊಳ್ಳುತ್ತಿದ್ದನೋ ಹಾಗೆ ಈಗ ಕಾಂತಾರ ಕಲೆಕ್ಷನ್‌ನಿಂದ ಎಲ್ಲಾ ಬಿಗ್​ ಬಜೆಟ್ ಚಿತ್ರ ತಯಾರಕರು ಎಚ್ಚರಗೊಳ್ಳುತ್ತಿದ್ದಾರೆ' ಎಂದು ಬಿಗ್ ಬಜೆಟ್ ಸಿನಿಮಾ ಮೇಕರ್ಸ್‌ಗೆ ಟಾಂಗ್ ನೀಡಿದ್ದಾರೆ.

ABOUT THE AUTHOR

...view details