ಕರ್ನಾಟಕ

karnataka

ETV Bharat / entertainment

ಪ್ರಶಾಂತ್ ನೀಲ್ ಹಾಗೂ ಯಶ್‌ ಜೋಡಿಯನ್ನು ಕೊಂಡಾಡಿದ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ! - upendra new movie R title launch

ಕನ್ನಡ ಸಿನಿಮಾಗಳ ತಾಕತ್ ಏನು ಅನ್ನೋದನ್ನು ಕೆಜಿಎಫ್ ಚಾಪ್ಟರ್ 2 ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಟ ಯಶ್ ಇಡೀ ಜಗತ್ತಿಗೆ ತೋರ್ಪಡಿಸಿದ್ದಾರೆ. ಅವರು ಪಟ್ಟಿರುವ ಶ್ರಮ‌ದ ಬಗ್ಗೆ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಕೊಂಡಾಡಿದ್ದಾರೆ. ಇದು ಕನ್ನಡ ಸಿನಿಮಾದ ತಾಕತ್ತು ಎಂದು ಆರ್‌ಜಿವಿ‌ ಹೇಳಿದ್ದಾರೆ..

director-ram-gopal-varma-talks-about-prashant-neel-and-yash
ಪ್ರಶಾಂತ್ ನೀಲ್ ಹಾಗು ಯಶ್ ನ್ನು ಕೊಂಡಾಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ!

By

Published : Apr 24, 2022, 6:55 AM IST

ಭಾರತೀಯ ಚಿತ್ರರಂಗದಲ್ಲಿ ನೈಜ ಘಟನೆಗಳು ಹಾಗೂ ಅಂಡರ್ ವರ್ಲ್ಡ್‌ ಜೊತೆಗೆ ಲವ್ ಸ್ಟೋರಿ ಸಿನಿಮಾಗಳನ್ನು ಮಾಡಿ‌ ಸೈ ಎನಿಸಿಕೊಂಡವರು ಖ್ಯಾತ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ. ಸದ್ಯ ಖಾತ್ರ (ಡೇಂಜರಸ್) ಸಿನಿಮಾ ಬಳಿಕ ಆರ್‌ಜಿವಿ, ಮತ್ತೆ ಕನ್ನಡ ಸಿನೆಮಾದತ್ತ ಮುಖ ಮಾಡಿದ್ದಾರೆ. ಕನ್ನಡದ ಕಿಲ್ಲಿಂಗ್ ವೀರಪ್ಪನ್ ಸಿನಿಮಾ ನಂತರ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಗ್ಯಾಂಗ್‌ಸ್ಟಾರ್ ಸಿನಿಮಾ ಮಾಡುತ್ತಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ತಮ್ಮ "ಆರ್" ಸಿನಿಮಾದ ಟೈಟಲ್ ಅನಾವರಣ ಕಾರ್ಯಕ್ರಮವನ್ನು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಸಿದ್ದಾರೆ. ಕಿಚ್ಚ ಸುದೀಪ್ ಚಿತ್ರದ ಟೈಟಲ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, 70 ಮತ್ತು 80ರ ಸಮಯದಲ್ಲಿ ಬಾಲಿವುಡ್ ಕೆಲ ನಿರ್ಮಾಪಕರು ಹಾಗೂ ವಿತರಕರು, ಕನ್ನಡ ಕನ್ನಡ ಹೈದರಾಬಾದ್ ಎಷ್ಟು ದೂರ ಅಂತಾ ಕೇಳುವ ಮೂಲಕ ತಮ್ಮ ದರ್ಪವನ್ನು ತೋರುತ್ತಿದ್ದರು. ಆದರೆ, ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಿನಿಮಾಗಳ ಅಬ್ಬರ ಹಾಗೂ ಕನ್ನಡ ಸಿನಿಮಾಗಳ ತಾಕತ್ ಏನು ಅನ್ನೋದನ್ನು ಕೆಜಿಎಫ್ ಚಾಪ್ಟರ್ 2 ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಟ ಯಶ್ ಇಡೀ ಜಗತ್ತಿಗೆ ತೋರ್ಪಡಿಸಿದ್ದಾರೆ. ಅವರು ಪಟ್ಟಿರುವ ಶ್ರಮ‌ದ ಬಗ್ಗೆ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಕೊಂಡಾಡಿದ್ದು, ಇದು ಕನ್ನಡ ಸಿನಿಮಾದ ತಾಕತ್ತು ಎಂದು ಆರ್‌ಜಿವಿ‌ ಹೇಳಿದ್ದಾರೆ.

ಪ್ರಶಾಂತ್ ನೀಲ್ ಹಾಗೂ ಯಶ್ ಜೋಡಿಯನ್ನು ಕೊಂಡಾಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ಓದಿ :ಹೀರೋಯಿನ್​ ಆಗುವ ಮುನ್ನ ನೆಲ ಗುಡಿಸುತ್ತಿದ್ದ 'ಕೆಜಿಎಫ್'​ ನಟಿ!

ABOUT THE AUTHOR

...view details