ನಿರ್ದೇಶಕ ರಾಜಮೌಳಿ ಆವರು ತಮ್ಮ ಅಮೋಘ ಪ್ರತಿಭೆಯಿಂದ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿ ಇಡೀ ಚಿತ್ರರಂಗದಲ್ಲಿ ಭದ್ರ ಸ್ಥಾನ ಪಡೆದುಕೊಂಡಿದ್ದಾರೆ. ಬಾಹುಬಲಿ ಮತ್ತು ಆರ್ಆರ್ಆರ್ ನಂತಹ ಸಿನಿಮಾಗಳ ಮೂಲಕ ಇಡೀ ಜಗತ್ತೇ ತೆಲುಗು ಇಂಡಸ್ಟ್ರಿಯತ್ತ ನೋಡುವಂತೆ ಮಾಡಿದ್ದಾರೆ ಜಕಣ್ಣ. ಆರ್ಆರ್ಆರ್, ನಾಟು ನಾಟು ಮೂಲಕ ತೆಲುಗು ಸಿನಿಮಾ ಖ್ಯಾತಿಯನ್ನು ಆಸ್ಕರ್ಗೆ ಕೊಂಡೊಯ್ದ ಈ ಸ್ಟಾರ್ ಡೈರೆಕ್ಟರ್ ಇದೀಗ ಮತ್ತೊಂದು ಮಾಸ್ಟರ್ ಪೀಸ್ ಮಾಡಲು ಸಿದ್ಧರಾಗಿದ್ದಾರೆ. ಸೌತ್ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಸಾಹಸ ಸಿನಿಮಾ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದಾರೆ. ಈ ವೇಳೆ ಜಕಣ್ಣನಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ.
Rajamouli in Ad : ತೆರೆಮರೆಯಲ್ಲಿ ನಿರ್ದೇಶಕರು ಕಥೆಯನ್ನು ನಿರ್ದೇಶಿಸುವುದನ್ನು ನಾವು ನೋಡುತ್ತೇವೆ. ಆಗಾಗ್ಗೆ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡು ಮಿಂಚುತ್ತಾರೆ. ಆದರೆ ಅವರನ್ನು ಪೂರ್ಣ ಪ್ರಮಾಣದಲ್ಲಿ ತೆರೆಯ ಮೇಲೆ ಕಾಣುವುದು ಅಪರೂಪ. ಆದರೆ ಆರ್ಆರ್ಆರ್ ಡೈರೆಕ್ಟರ್ ರಾಜಮೌಳಿ ಅವರು ಇದೀಗ ಜಾಹೀರಾತಿನ ಚಿತ್ರೀಕರಣದಲ್ಲಿ ನಟಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಖಾಸಗಿ ಮೊಬೈಲ್ ತಯಾರಿಕಾ ಕಂಪನಿಯ ಜಾಹೀರಾತಿನಲ್ಲಿ ಡೈರೆಕ್ಟರ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಪ್ರಮುಖ ಮೊಬೈಲ್ ಕಂಪನಿಯೊಂದು ಭಾರತೀಯ ಪ್ರತಿಭಾನ್ವಿತ ನಿರ್ದೇಶಕ ರಾಜಮೌಳಿ ಅವರನ್ನು ತಮ್ಮ ಬ್ರ್ಯಾಂಡ್ ಅಂಬಾಸಿಡರ್ ಆಗಿ ಮಾಡಿಕೊಂಡಿದೆ. ಈ ಕ್ರಮದಲ್ಲಿ ತಮ್ಮ ಹೊಸ ಫೋನ್ ಪ್ರಚಾರಕ್ಕಾಗಿ ಹೊಸ ಜಾಹೀರಾತೊಂದನ್ನು ಚಿತ್ರೀಕರಿಸಿದ್ದಾರೆ. ರಾಜಮೌಳಿ ಅವರು ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಜಕ್ಕಣ್ಣ ಸಹಜವಾಗಿ ಯಾವಾಗಲೂ ಬಹಳ ಸಿಂಪಲ್ ಆಗಿ ಕಾಣ್ತಾರೆ. ಆದ್ರೆ ಈ ಜಾಹೀರಾತಿನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರ ನೋಟಕ್ಕೆ ಯುವಕರೂ ಕೂಡ ಹುಬ್ಬೇರಿಸಿದ್ದು, ಜಕಣ್ಣ ಸೂಪರ್ ಎಂಬ ಕಾಮೆಂಟ್ಗಳು ಬರುತ್ತಿವೆ.