ಕರ್ನಾಟಕ

karnataka

ETV Bharat / entertainment

ಸ್ಯಾಂಡಲ್​ವುಡ್ ಕ್ವೀನ್​ಗೆ ಆ್ಯಕ್ಷನ್ ಕಟ್ ಹೇಳ್ತಾರಾ ಡೈರೆಕ್ಟರ್ ರಾಜ್ ಬಿ ಶೆಟ್ಟಿ? - ಒಂದು ಮೊಟ್ಟೆಯ ಕಥೆ

ಕನ್ನಡ ಚಿತ್ರರಂಗದಲ್ಲಿ ಒಂದು ದಶಕಗಳ‌‌‌ ಕಾಲ ಸ್ಯಾಂಡಲ್ ವುಡ್ ಕ್ವೀನ್ ಆಗಿ ಸಿಲ್ವರ್ ಸ್ಕ್ರೀನ್ ಮೇಲೆ ವಿಜೃಂಭಿಸಿದ ನಟಿ ರಮ್ಯಾ. ನಾಗರಹಾವು ಸಿನಿಮಾ ಬಳಿಕ ಸಂಪೂರ್ಣವಾಗಿ ಚಿತ್ರರಂಗದಿಂದ‌ ದೂರ ಉಳಿದಿರುವ ಮೋಹಕ ತಾರೆ ರಮ್ಯಾ, ಇದೀಗ ಮತ್ತೆ ಚಿತ್ರರಂಗಕ್ಕೆ ಕಮ್‌ ಬ್ಯಾಕ್ ಮಾಡುತ್ತಿದ್ದಾರೆ.

Director Raj B Shetty will say action cut to Ramya
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

By

Published : Aug 10, 2022, 4:22 PM IST

ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಮೋಹಕತಾರೆ ರಮ್ಯಾ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಟ ಕಮ್ ನಿರ್ದೇಶಕ ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ಮೋಹಕ ತಾರೆ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಇಂತಹದೊಂದು ಸುದ್ದಿ ಗಾಂಧಿನಗರದ ಅಂಗಳದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇದೀಗ ಸ್ಯಾಂಡಲ್‌ವುಡ್ ಪದ್ಮಾವತಿ, ಸೆಕೆಂಡ್ ಇನ್ನಿಂಗ್ಸ್​ಗೆ ಕೌಂಟ್‌ಡೌನ್ ಶುರುವಾಗಿದೆ ಎನ್ನಲಾಗ್ತಿದೆ.

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

ಒಂದು ಮೊಟ್ಟೆಯ ಕಥೆ ಹಾಗೂ ಗರುಡ ಗಮನ ವೃಷಭ ವಾಹನ ಚಿತ್ರಗಳನ್ನ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿರುವ ರಾಜ್ ಬಿ ಶೆಟ್ಟಿ, ರಮ್ಯಾ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ರಾಜ್ ಬಿ ಶೆಟ್ಟಿ, ರಮ್ಯಾ ಅವರನ್ನು ಭೇಟಿ ಮಾಡಿ ಕಥೆಯನ್ನು ಹೇಳಿದ್ದಾರಂತೆ. ರಾಜ್ ಬಿ ಶೆಟ್ಟಿ ಕಥೆಯನ್ನು ಕೇಳಿರುವ ಮೋಹಕ ತಾರೆ, ಈ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಅಷ್ಟೇ ಅಲ್ಲ, ಈ ಚಿತ್ರವನ್ನು ರಮ್ಯಾ ಅವರೇ ಸ್ವತಃ ನಿರ್ಮಾಣ ಮಾಡಲಿದ್ದಾರಂತೆ.

ಡೈರೆಕ್ಟರ್ ರಾಜ್ ಬಿ ಶೆಟ್ಟಿ

ಕಥೆ ಕೇಳಿ ಥ್ರೀಲ್ ಆಗಿರುವ ರಮ್ಯಾ, ಸಿನಿಮಾ ನಿರ್ಮಾಣಕ್ಕೂ ಮುಂದಾಗಿದ್ದಾರಂತೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಅಂತಾ ರಮ್ಯಾ ಆಪ್ತರನ್ನ ಕೇಳಿದಾಗ ರಾಜ್ ಬಿ ಶೆಟ್ಟಿ ರಮ್ಯಾ ಅವ್ರನ್ನ ಭೇಟಿ ಮಾಡಿದ್ದಾರೆ. ಆದರೆ ಸಿನಿಮಾ ವಿಚಾರಕ್ಕೆ ಅಲ್ಲಾ, ಬೇರೆ ವಿಷಯವಾಗಿ ಎಂದು ಹೇಳುತ್ತಿದ್ದಾರೆ. ರಾಜ್ ಬಿ ಶೆಟ್ಟಿ ಜೊತೆ ರಮ್ಯಾ ಸಿನಿಮಾ‌ ಮಾಡ್ತಾ ಇರೋದು ಎಷ್ಟು ನಿಜ ಅನ್ನೋದನ್ನು ಅವರೇ ಹೇಳಬೇಕಿದೆ.

ಇದನ್ನೂ ಓದಿ:ರಘು ಪಿಂಜ್ರಿಯಾತ್ ಅಲಾ ಹಾಡಿಗೆ ಸಖತ್ ಹೆಜ್ಜೆ ಹಾಕಿದ ಡೈಸಿ ಶಾ

ABOUT THE AUTHOR

...view details