ಕರ್ನಾಟಕ

karnataka

ETV Bharat / entertainment

ಗಾಡ್​ ಫಾದರ್ ಇಲ್ಲದೇ ಚಿತ್ರರಂಗದಲ್ಲಿ ಸೈ ಎನಿಸಿಕೊಂಡ ಸ್ಟಾರ್​ ನಿರ್ದೇಶಕನಿಗೆ ಹುಟ್ಟುಹಬ್ಬದ ಸಂಭ್ರಮ - prashant neel journey in film industry

ಸರಳ ಹಾಗು ಪ್ರತಿಭಾನ್ವಿತ ನಿರ್ದೇಶಕ ಪ್ರಶಾಂತ್‌ ನೀಲ್​ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಶ್ರೀಮಂತ ಕುಟುಂಬದಲ್ಲಿ ಜನಿಸಿದ ಪ್ರಶಾಂತ್ ನೀಲ್ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ದೇ ಬಹಳ ಇಂಟ್ರೆಸ್ಟ್ರಿಂಗ್.

director prashant neel journey in film industry
ನಿರ್ದೇಶಕ ಪ್ರಶಾಂತ್‌ ನೀಲ್

By

Published : Jun 4, 2022, 2:48 PM IST

''ನೀನು ಗೆದ್ದರೆ ಜಗತ್ತಿಗೆ ನಿನ್ನ ಪರಿಚಯವಾಗುತ್ತದೆ''- ಭಾರತೀಯ ಚಿತ್ರರಂಗದಲ್ಲಿ ಮೈಲಿಗಲ್ಲು ಸೃಷ್ಟಿಸಿದ ಕೆಜಿಎಫ್ ಸಿನಿಮಾದ ಡೈಲಾಗ್​ ಇದು. ಈ ಮಾತಿನಂತೆ ಯಶಸ್ಸಿನ ಮೂಲಕವೇ ಸಿನಿಮಾ ಜಗತ್ತಿಗೆ ಪರಿಚಯವಾದ ಬಹಳ ಸರಳ ಹಾಗು ಪ್ರತಿಭಾನ್ವಿತ ನಿರ್ದೇಶಕ ಪ್ರಶಾಂತ್‌ ನೀಲ್​ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ಹುಟ್ಟುಹಬ್ಬ ಆಚರಣೆ: ಮೂಲತಃ ಬೆಂಗಳೂರಿನವರಾದ ಪ್ರಶಾಂತ್ ನೀಲ್ ಜೂನ್ 4, 1980ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. 43ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಶಾಂತ್ ನೀಲ್​ ಸದ್ಯ ರಾಕಿಂಗ್ ಸ್ಟಾರ್ ಯಶ್, ಡಾರ್ಲಿಂಗ್ ಪ್ರಭಾಸ್ ಹಾಗೂ ನಿರ್ಮಾಪಕ ವಿಜಯ್ ಕಿರಂಗದೂರ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಸ್ಟಾರ್ ನಟರೊಂದಿಗೆ ಸ್ಟಾರ್ ನಿರ್ದೇಶಕ

ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ:ಬೆಂಗಳೂರಿನ ಪ್ರತಿಷ್ಠಿತ ಮೋತಿ ಮಹಲ್ ಹೋಟೆಲ್ ಮಾಲೀಕ ಸುಭಾಷ್ ಅವ್ರ ಪುತ್ರನೇ ಪ್ರಶಾಂತ್ ನೀಲ್. ಶ್ರೀಮಂತ ಕುಟುಂಬದಲ್ಲಿ ಜನಿಸಿದ ಪ್ರಶಾಂತ್ ನೀಲ್ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ದೇ ಬಹಳ ಇಂಟ್ರೆಸ್ಟ್ರಿಂಗ್ ವಿಚಾರ. ಪದವಿ ಮುಗಿಸಿರೋ ಪ್ರಶಾಂತ್ ನೀಲ್, ಸಿನಿಮಾ ಕ್ಷೇತ್ರಕ್ಕೆ ಬರಲು ಕಾರಣ ಸಂಬಂಧಿಯಾಗಿರೋ ನಟ ಶ್ರೀಮುರುಳಿ ಅಂತಾ ಹೇಳಬಹುದು.

ಶ್ರೀಮುರುಳಿ - ಪ್ರಶಾಂತ್ ನೀಲ್

ಉಗ್ರಂ ತಂದ ಯಶಸ್ಸು: ನಟ ಶ್ರೀಮುರುಳಿ ಹಾಗೂ ಪ್ರಶಾಂತ್‌ ಅವರು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿಗಳು. ಕಾಲೇಜು ದಿನಗಳಿಂದಲೂ ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತಿದ್ದರು. ಪ್ರಶಾಂತ್ ನೀಲ್ ನಿರ್ದೇಶಕರಾಗುವುದಕ್ಕೂ ಮೊದಲು ಶ್ರೀಮುರಳಿ ಅವರ ನಟನೆಯ ಚಿತ್ರಗಳ ಶೂಟಿಂಗ್‌ ಸೆಟ್‌ಗೆ ಹೋಗಿ ಬಂದಿದ್ದರು. ಅಲ್ಲಿಂದ ಪ್ರಶಾಂತ್ ನೀಲ್, ತನಗೆ ತಾನೇ ಶಿಷ್ಯ, ತಾನೇ ಗುರುವಾಗಿ ಸಿನಿಮಾ ಕಟ್ಟುವುದನ್ನು ಕಲಿತರು. ನಂತರ ಪ್ರಶಾಂತ್ ನೀಲ್ ಶ್ರೀಮುರುಳಿಗೆ ನಂದೇ ಎಂಬ ಸಿನಿಮಾ ಟೈಟಲ್ ಇಟ್ಟು ನಿರ್ದೇಶನಕ್ಕೆ ಇಳಿಯುತ್ತಾರೆ. ನಾಲ್ಕು ವರ್ಷ ಸಮಯ ತೆಗೆದುಕೊಂಡು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ ಚಿತ್ರ ಉಗ್ರಂ. ಆರಂಭದಲ್ಲಿ ನಂದೇ ಎನ್ನುವ ಟೈಟಲ್‌ ಇತ್ತು. ಸಿನಿಮಾ ಅರ್ಧಕ್ಕೂ ಹೆಚ್ಚು ಚಿತ್ರೀಕರಣ ಮಾಡಿಕೊಂಡ ಮೇಲೆ ಉಗ್ರಂ ಎಂದು ಬದಲಾಯಿತು. ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಬರೆಯುತ್ತೆ ಅಂತಾ ಯಾರೂ ಅಂದುಕೊಂಡಿರಲಿಲ್ಲ. ಉಗ್ರಂ ಚಿತ್ರ ಯಶಸ್ಸು ಕಂಡು ಪ್ರಶಾಂತ್​ ನೀಲ್​ ಅವರ ನಿರ್ದೇಶನ ಬದುಕು ಆರಂಭವಾಯಿತು.

ಸ್ಟಾರ್ ನಟರೊಂದಿಗೆ ಸ್ಟಾರ್ ನಿರ್ದೇಶಕ

ಕೆಲಸ ಮಾಡುತ್ತಲೇ ಕಲಿಕೆ:ಪ್ರಶಾಂತ್‌ ನೀಲ್‌ ಅವರು ನಿರ್ದೇಶಕರಾಗುವ ಮುನ್ನ ಬೇರೆ ನಿರ್ದೇಶಕರ ಚಿತ್ರಗಳಿಗೆ ಅಸಿಸ್ಟೆಂಟ್‌, ಅಸೋಸಿಯೇಟ್‌ ನಿರ್ದೇಶಕ, ಕ್ಲಾಪ್‌ ಬಾಯ್‌ ಕೆಲಸ ಕೂಡ ಮಾಡಿದವರಲ್ಲ. ಯಾವ ತರಬೇತಿ ಸಂಸ್ಥೆಯಲ್ಲೂ ತರಬೇತಿ ಪಡೆದಿಲ್ಲ. ಕೆಲಸ ಮಾಡುತ್ತಲೇ ಕಲಿಯುತ್ತೇನೆ ಎನ್ನುವವರ ಪೈಕಿ ಪ್ರಶಾಂತ್‌ ನೀಲ್‌ ಕೂಡ ಒಬ್ಬರು. ಹೌದು, ಪ್ರಶಾಂತ್ ನೀಲ್ ಉಗ್ರಂ ಚಿತ್ರ ನಿರ್ದೇಶನ ಮಾಡುವಾಗ ಸಿನಿಮಾ ವ್ಯಾಕರಣ ಸಹ ಗೊತ್ತಿರಲಿಲ್ಲ. ಆದರೆ ಆ ಚಿತ್ರ ಮುಗಿಸುವ ಹೊತ್ತಿಗೆ ನಿರ್ದೇಶನ ಸೇರಿದಂತೆ ಸಿನಿಮಾದ ಎಲ್ಲಾ ವಿಭಾಗಗಳಲ್ಲಿ ಪ್ರಶಾಂತ್ ಪರಿಣಿತರಾಗುತ್ತಾರೆ. ಕ್ಯಾಮರಾ ಮುಂದೆ ನಿಂತು ಮಾತನಾಡುವುದು, ನಟಿಸುವುದು ಅಂದರೆ ಪ್ರಶಾಂತ್ ನೀಲ್ ಗೆ ಭಯ ಅನ್ನೋದು ಅವರ ಆಪ್ತರ ಬಳಗದಲ್ಲಿ ಕೇಳಿ ಬಂದ ಮಾತು.

ಕೆಜಿಎಫ್​​ ದಾಖಲೆ: ಕೆಜಿಎಫ್​​ ಚಾಪ್ಟರ್​ 1&2 ಭಾರತೀಯ ಚಿತ್ರರಂಗವಲ್ಲದೇ ಇಡೀ ವಿಶ್ವದೆಲ್ಲಡೆ ಹೊಸ ದಾಖಲೆ ಬರೆದು ಪ್ರಶಾಂತ್ ನೀಲ್ ಇಡೀ ಜಗತ್ತಿಗೆ ಪರಿಚಯವಾದರು. ಸದ್ಯ ತೆಲುಗಿನ ಜೂ. ಎನ್‌ಟಿಆರ್‌, ಪ್ರಭಾಸ್‌ ಸೇರಿ ಸ್ಟಾರ್‌ ಹೀರೋಗಳ ಸಿನಿಮಾಗಳಿಗೆ ನಿರ್ದೇಶನದ ಮಾಡುತ್ತಿರುವುದು ಹೆಮ್ಮೆಯ ವಿಷಯ. ಸಿನಿಮಾ ಗಾಡ್ ಫಾದರ್ ಇಲ್ಲದೇ ಪ್ರಶಾಂತ್ ನೀಲ್ ದೊಡ್ಡ ಮಟ್ಟಕ್ಕೆ ಬೆಳೆದಿರೋದು ಇತರರಿಗೂ ಮಾದರಿ.

ಇದನ್ನೂ ಓದಿ:ಕಿರಗಂದೂರು​, ಯಶ್​, ಪ್ರಭಾಸ್​ರಿಂದ ಪ್ರಶಾಂತ್​ ನೀಲ್​ ಜನ್ಮದಿನಾಚರಣೆ... ಪಾರ್ಟಿ ವಿಡಿಯೋ ವೈರಲ್​!

ABOUT THE AUTHOR

...view details