ಕರ್ನಾಟಕ

karnataka

ETV Bharat / entertainment

ಆಸ್ಕರ್ ಅವಾರ್ಡ್ 2022.. ನಿರ್ದೇಶಕ ಪವನ್ ಒಡೆಯರ್​ಗೆ ಜ್ಯೂರಿ ಸ್ಥಾನ

ಕನ್ನಡದ ಪ್ರತಿಭಾವಂತ ನಿರ್ದೇಶಕ ಹಾಗೂ ನಿರ್ಮಾಪಕ ಪವನ್ ಒಡೆಯರ್ ಆಸ್ಕರ್ ಅವಾರ್ಡ್ ಸೆಲೆಕ್ಷನ್ ಕಮಿಟಿ ಸದಸ್ಯರಾಗಿ ಭಾಗಿಯಾಗಿದ್ದಾರೆ.

Director Pawan Wodeyar as Oscar Award 2022 Jury
ಆಸ್ಕರ್ ಅವಾರ್ಡ್ 2022 ಜ್ಯೂರಿಯಾಗಿ ನಿರ್ದೇಶಕ ಪವನ್ ಒಡೆಯರ್

By

Published : Sep 27, 2022, 12:52 PM IST

ಪ್ರತಿಷ್ಠಿತ ಆಸ್ಕರ್ ಅವಾರ್ಡ್ 2022 ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಬಾರಿ ಆಸ್ಕರ್ ಪ್ರಶಸ್ತಿಗಳು ಯಾರ ಯಾರ ಪಾಲಾಗುತ್ತವೆ ಎಂಬ ಲೆಕ್ಕಾಚಾರಗಳು ಜೋರಾಗಿದೆ. ಭಾರತದಿಂದ ಬೇರೆ ಬೇರೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ಹಲವಾರು ಸಿನಿಮಾಗಳು ನಾಮ ನಿರ್ದೇಶನವಾಗಿ ಗಮನ ಸೆಳೆಯುತ್ತಿವೆ.

ಸದ್ಯ ಹೊಸ ಸಮಾಚಾರವೇನಪ್ಪ ಅಂದ್ರೆ.. ಆಸ್ಕರ್ ಅವಾರ್ಡ್ ಜ್ಯೂರಿ ಸದಸ್ಯರಾಗಿ ಕನ್ನಡದ ನಿರ್ದೇಶಕರು ಪಾಲ್ಗೊಂಡಿರೋದು. ಹೌದು, ಕನ್ನಡದ ಪ್ರತಿಭಾವಂತ ನಿರ್ದೇಶಕ ಹಾಗೂ ನಿರ್ಮಾಪಕ ಪವನ್ ಒಡೆಯರ್ ಆಸ್ಕರ್ ಅವಾರ್ಡ್ ಸೆಲೆಕ್ಷನ್ ಕಮಿಟಿ ಸದಸ್ಯರಾಗಿ ಭಾಗಿಯಾಗಿದ್ದಾರೆ. ಈ ಖುಷಿಯ ಕ್ಷಣವನ್ನು ಪವನ್ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆಸ್ಕರ್ ಅವಾರ್ಡ್ 2022 ಜ್ಯೂರಿಯಾಗಿ ನಿರ್ದೇಶಕ ಪವನ್ ಒಡೆಯರ್

ಈ ಬಗ್ಗೆ ಮಾತನಾಡಿರುವ ಪವನ್ ಒಡೆಯರ್, ಆಸ್ಕರ್ ಕಮಿಟಿಯಿಂದ ನನಗೆ ಕರೆ ಬರುತ್ತದೆ ಎಂದು ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ. ಆರಂಭದಲ್ಲಿ ನನಗೆ ನಂಬಲೂ ಸಾಧ್ಯವಾಗಲಿಲ್ಲ. ನನ್ನ ಸಿನಿಮಾ ಕೆಲಸಗಳನ್ನು ಗುರುತಿಸಿ ಜ್ಯೂರಿಯಾಗಿ ಭಾಗವಹಿಸಲು ಆಹ್ವಾನ ನೀಡಿದ್ದು, ಬಹಳ ಸಾರ್ಥಕತೆ ನೀಡಿದೆ. ನನ್ನ ನಿರ್ಮಾಣದ 'ಡೊಳ್ಳು' ಸಿನಿಮಾ ಇಂತಹದ್ದೊಂದು ಪ್ರತಿಷ್ಠಿತ ವೇದಿಕೆಯನ್ನು ನನಗೆ ಕಲ್ಪಿಸಿಕೊಟ್ಟಿದೆ. ಇದು ಬಹಳ ದೊಡ್ಡ ಗೌರವ ಎಂದೇ ನಾನು ಭಾವಿಸುತ್ತೇನೆ. 17 ಜನರ ತಂಡದಲ್ಲಿ ಕನ್ನಡ ಚಿತ್ರರಂಗದಿಂದ ನಾನೂ ಒಬ್ಬ ಜ್ಯೂರಿಯಾಗಿ ಭಾಗವಹಿಸಿದ್ದು ಬಹಳ ಸಂತಸ ತಂದಿದೆ ಎಂದು ಪವನ್ ಒಡೆಯರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಹಿಂದಿ, ಬೆಂಗಾಲಿ, ತೆಲುಗು, ತಮಿಳು, ಗುಜರಾತಿ, ಮಲಯಾಳಂ ಭಾಷೆಗಳಿಂದ ಸಿನಿಮಾಗಳು ಆಸ್ಕರ್​ಗೆ ಆಯ್ಕೆಯಾಗಿವೆ. ನಮ್ಮ ಭಾಷೆಯಿಂದ ಯಾವ ಸಿನಿಮಾಗಳೂ ಆಸ್ಕರ್​ಗೆ ಆಯ್ಕೆ ಆಗಿಲ್ಲದಿರುವುದು ಬೇಸರದ ಸಂಗತಿ. ಮುಂದಿನ ದಿನಗಳಲ್ಲಿ ಖಂಡಿತ ನಮ್ಮ ಸಿನಿಮಾಗಳು ಆಸ್ಕರ್​ಗೆ ನಾಮ ನಿರ್ದೇಶನವಾಗಲಿವೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ ಪವನ್ ಒಡೆಯರ್.

ಇದನ್ನೂ ಓದಿ:ಬಿಗ್​​ ಬಾಸ್ ಮನೆಯಲ್ಲಿ ಹೊಸಬರು ಹಳಬರ ನಡುವೆ ಪಿರಮಿಡ್ ಆಟ.. ಗೆಲುವು ಯಾರಿಗೆ?

ಪವನ್ ಒಡೆಯರ್ ನಿರ್ಮಾಣದಲ್ಲಿ ಮೂಡಿ ಬಂದಿರುವ 'ಡೊಳ್ಳು' ಸಿನಿಮಾ ಜನ ಮೆಚ್ಚುಗೆ ಗಳಿಸಿದ್ದು, ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ. ಅವರ ನಿರ್ದೇಶನದ 'ರೇಮೋ' ಸಿನಿಮಾ ಇನ್ನೇನು ಬಿಡುಗಡೆಯಾಗಬೇಕಿದೆ.

ABOUT THE AUTHOR

...view details