ಕರ್ನಾಟಕ

karnataka

ETV Bharat / entertainment

5 ವರ್ಷದ ಬಳಿಕ ಆ್ಯಕ್ಷನ್‌, ಕಟ್‌ ಹೇಳಲು ಸಜ್ಜಾದ 'ಅಂಬಿ ನಿಂಗ್​​ ವಯಸ್ಸಾಯ್ತೋ' ನಿರ್ದೇಶಕ - Gurudath Ganiga upcoming movie

'ಅಂಬಿ ನಿಂಗ್​​ ವಯಸ್ಸಾಯ್ತೋ' ಸಿನಿಮಾ ಮೂಲಕ ಗಮನ ಸೆಳೆದ ಗುರುದತ್ ಗಾಣಿಗ ಇದೀಗ ತಮ್ಮ ಎರಡನೇ ಸಿನಿಮಾಗೆ ರೆಡಿಯಾಗುತ್ತಿದ್ದಾರೆ.

Gurudath Ganiga
ಗುರುದತ್ ಗಾಣಿಗ

By ETV Bharat Karnataka Team

Published : Oct 11, 2023, 3:41 PM IST

'ಅಂಬಿ ನಿಂಗ್​​ ವಯಸ್ಸಾಯ್ತೋ' ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ?. ರೆಬೆಲ್ ಸ್ಟಾರ್ ಅಂಬರೀಶ್​​​ ಹೀರೋ ಆಗಿ ಬೆಳ್ಳಿ ತೆರೆಯ ಮೇಲೆ ಮಿಂಚಿದ್ದ ಕೊನೆ ಸಿನಿಮಾವಿದು. 2018 ರಲ್ಲಿ ಚಿತ್ರ ರಿಲೀಸ್ ಆಗಿ ಪ್ರೇಕ್ಷಕರನ್ನು ರಂಜಿಸಿತ್ತು. ಕಿಚ್ಚ ಸುದೀಪ್ ಕೂಡ ನಟಿಸಿದ್ದರು. ಅಂಬರೀಶ್​​ ಅವರ ಯೌವ್ವನದ ಪಾತ್ರಕ್ಕೆ ಸುದೀಪ್ ಬಣ್ಣ ಹಚ್ಚಿದ್ದರು. ಸುಹಾಸಿನಿ, ಶ್ರುತಿ ಹರಿಹರನ್ ಸೇರಿದಂತೆ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇತ್ತು.

ಗುರುದತ್ ಗಾಣಿಗ:ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದವರು ಬೇರಾರು ಅಲ್ಲ ಅವರೇ ಗುರುದತ್ ಗಾಣಿಗ. ಕಿರಿಯ ವಯಸ್ಸಿನಲ್ಲೇ ದೊಡ್ಡ ತಾರೆಗಳನ್ನು​ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು ಗುರುದತ್. ಚೊಚ್ಚಲ ನಿರ್ದೇಶನದ ಸಿನಿಮಾದಲ್ಲೇ ಗಾಣಿಗ ಕನ್ನಡ ಸಿನಿಮಾ ಅಭಿಮಾನಿಗಳ ಹೃದಯ ಗೆದ್ದಿದ್ದರು. ಈ ಮೂಲಕ ಸ್ಯಾಂಡಲ್‌ವುಡ್‌ನ ಭರವಸೆಯ ನಿರ್ದೇಶಕರಾಗಿ ಹೊರಹೊಮ್ಮಿದ್ದರು.

ಮತ್ತೆ ಡೈರೆಕ್ಟರ್ ಕ್ಯಾಪ್:ಗುರುದತ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಚಿತ್ರಾಭಿಮಾನಿಗಳಲ್ಲಿತ್ತು. ಆ ಕುತೂಹಲಕ್ಕೆ ತೆರೆಬೀಳುವ ಸಮಯ ಸಮೀಪಿಸುತ್ತಿದೆ. ಸಣ್ಣ ಬ್ರೇಕ್ ಬಳಿಕ ಗುರುದತ್ ಮತ್ತೆ ಡೈರೆಕ್ಟರ್ ಕ್ಯಾಪ್ ಧರಿಸಲು ನಿರ್ಧರಿಸಿದ್ದಾರೆ. ಸುಮಾರು 5 ವರ್ಷಗಳ ತರುವಾಯ ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳೆದುರು ಬರಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಬಾರಿ ಗುರು ಯಾವ ಸ್ಟಾರ್‌ಗೆ ಆ್ಯಕ್ಷನ್ ಕಟ್ ಹೇಳುತ್ತಾರೆ ಎನ್ನುವ ಕುತೂಹಲವಿದೆ. ಮೂಲಗಳ ಪ್ರಕಾರ, ಗುರು, ಸ್ಟಾರ್ ಹೀರೋಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ.

ಎರಡನೇ ಸಿನಿಮಾಗೆ ರೆಡಿಯಾಗುತ್ತಿದ್ದಾರೆ 'ಅಂಬಿ ನಿಂಗ್​​ ವಯಸ್ಸಾಯ್ತೋ' ಸಿನಿಮಾ ನಿರ್ದೇಶಕ

ಶೀಘ್ರದಲ್ಲೇ ಸಿನಿಮಾ ಘೋಷಣೆ: ಈಗಾಗಲೇ ಹೊಸ ಸಿನಿಮಾದ ಎಲ್ಲಾ ತಯಾರಿಗಳು ನಡೆದಿದ್ದು, ಸದ್ಯದಲ್ಲೇ ಟೈಟಲ್ ಮತ್ತು ನಾಯಕ ನಟನ ಹೆಸರು ಅನೌನ್ಸ್ ಮಾಡಲು ಪ್ಲಾನ್ ಮಾಡಿದ್ದಾರೆ ನಿರ್ದೇಶಕ ಗುರುದತ್​ ಗಾಣಿಗ. ಇವರ 2ನೇ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿಯೇ ಮೂಡಿ ಬರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. 'ಅಂಬಿ ನಿಂಗ್​​ ವಯಸ್ಸಾಯ್ತೋ' ಸಿನಿಮಾ ಬಳಿಕ ಗುರು ಎಲ್ಲೋಗಿದ್ದಾರೆ? ಏನು ಮಾಡುತ್ತಿದ್ದಾರೆ? ಎನ್ನುವ ಪ್ರಶ್ನೆ ಕೂಡ ಅನೇಕರಲ್ಲಿತ್ತು. ಆದರೆ ಇತ್ತೀಚೆಗಷ್ಟೇ 'ಎಡಗೈ ಅಪಘಾತಕ್ಕೆ ಕಾರಣ' ಸಿನಿಮಾದ ನಿರ್ಮಾಪಕರಾಗಿ ಸ್ಯಾಂಡಲ್​ವುಡ್​ಗೆ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ:'ಯುವ ಪೀಳಿಗೆಯನ್ನು ಪ್ರೋತ್ಸಾಹಿಸಲು ಬಿಗ್ ಬಾಸ್​ಗೆ ಹೋಗಿದ್ದೆ': ಶಾಸಕ‌ ಪ್ರದೀಪ್ ಈಶ್ವರ್

ಈಗಾಗಲೇ ಟೀಸರ್ ಮೂಲಕ ಸದ್ದು ಮಾಡುತ್ತಿರುವ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಬಂಡವಾಳ ಹೂಡುವ ಮೂಲಕ ಚೊಚ್ಚಲ ನಿರ್ಮಾಣದ ಪ್ರಯತ್ನಕ್ಕೂ ಕೈ ಹಾಕಿದ್ದಾರೆ ಗುರುದತ್. ಈ ನಡುವೆ ತಮ್ಮ ನಿರ್ದೇಶನದ ಎರಡನೇ ಚಿತ್ರದ ತಯಾರಿಯಲ್ಲಿಯೂ ತೊಡಗಿದ್ದಾರೆ. ಮೊದಲ ಸಿನಿಮಾದಲ್ಲೇ ಮೋಡಿ ಮಾಡಿದ್ದ ಗುರು ಅವರ ಎರಡನೇ ಸಿನಿಮಾ ಕುರಿತು ಶೀಘ್ರದಲ್ಲೇ ಮಾಹಿತಿ ಹೊರ ಬೀಳಲಿದೆ.

ಇದನ್ನೂ ಓದಿ:ಒಂದು ವರ್ಷದ ಬಳಿಕ ಭಾರತಕ್ಕೆ ಆಗಮಿಸಿದ ರಿಷಬ್ ಶೆಟ್ಟಿ ನಿರ್ಮಾಣದ 'ಶಿವಮ್ಮ' ಸಿನಿಮಾ: ಟೀಸರ್​ ರಿಲೀಸ್

ABOUT THE AUTHOR

...view details