ಕರ್ನಾಟಕ

karnataka

ETV Bharat / entertainment

ಸೂಪರ್​ಸ್ಟಾರ್​ಗಳೊಂದಿಗೆ ನಿರ್ದೇಶಕ ಅಟ್ಲೀ.. ಶಾರುಖ್​​ ಅಭಿನಯದ 'ಜವಾನ್‌' ಸಿನಿಮಾದಲ್ಲಿದ್ದಾರಾ ವಿಜಯ್‌? - filmmaker atlee birthday celebration photos

ನಿರ್ದೇಶಕ ಅಟ್ಲೀ‌ ಶಾರುಖ್‌ ಖಾನ್‌ ಮತ್ತು ವಿಜಯ್‌ ಜೊತೆ ಇರುವ ಚಿತ್ರವನ್ನು ಗುರುವಾರ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಈ ಹಲವು ಊಹಾಪೋಹಗಳಿಗೆ ಪುಷ್ಟಿ ನೀಡಿದೆ.

Director Atlee latest post leaves fans curious
ಸೂಪರ್​ಸ್ಟಾರ್​ಗಳೊಂದಿಗೆ ನಿರ್ದೇಶ ಅಟ್ಲೀ

By

Published : Sep 23, 2022, 4:50 PM IST

ಖ್ಯಾತ ನಿರ್ದೇಶಕ ಅಟ್ಲೀ ಅವರು ಎರಡು ದಿನಗಳ ಹಿಂದೆ ಅಂದರೆ ಸೆಪ್ಟೆಂಬರ್ 21ರಂದು 36ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅಭಿಮಾನಿಗಳು ಸೇರಿದಂತೆ ಚಿತ್ರರಂಗದವರು ಶುಭಾಶಯ ಕೋರಿದ್ದಾರೆ. ಬಾಲಿವುಡ್‌ ಸೂಪರ್‌ಸ್ಟಾರ್‌, ಕಿಂಗ್​ಖಾನ್​​ ಶಾರುಖ್‌ ಖಾನ್‌ ಹಾಗೂ ತಮಿಳು ಸಿನಿಮಾರಂಗದ ಸೂಪರ್‌ಸ್ಟಾರ್‌ ವಿಜಯ್‌ ಅವರೊಂದಿಗೆ ತಮ್ಮ ಬರ್ತ್​​ಡೇ ಸೆಲೆಬ್ರೇಟ್​ ಮಾಡಿದ್ದು, ಅವರೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೋ ಶೇರ್ ಮಾಡಿದ್ದಾರೆ..

ನಿರ್ದೇಶಕ ಅಟ್ಲೀ‌ (ಅರುಣ್​​ಕುಮಾರ್/ಅಟ್ಲಿಕುಮಾರ್) ಶಾರುಖ್‌ ಮತ್ತು ವಿಜಯ್‌ ಜೊತೆ ಇರುವ ಚಿತ್ರವನ್ನು ಗುರುವಾರ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಇದಕ್ಕಿಂತ ಇನ್ನೇನು ಕೇಳಲಿ. ನನ್ನ ಆಧಾರ ಸ್ಥಂಭಗಳಾದ ಶಾರುಖ್‌ ಖಾನ್ ಸರ್‌ ಹಾಗೂ ನನ್ನ ಅಣ್ಣ, ನನ್ನ ದಳಪತಿ ವಿಜಯ್‌ ಅವರೊಂದಿಗೆ ಇದುವರೆಗಿನ ಅತ್ಯುತ್ತಮ ಜನ್ಮದಿನ ಆಚರಿಸಿಕೊಂಡಿದ್ದೇನೆ' ಎಂದು ಟ್ವೀಟ್ ಮಾಡಿದ್ದಾರೆ.

ಅಟ್ಲೀ - ವಿಜಯ್‌ ಕಾಂಬೋದಲ್ಲಿ ಬಂದ ಥೇರಿ, ಮೆರ್ಸಲ್‌ ಮತ್ತು ಬಿಗಿಲ್‌ ಸಿನಿಮಾಗಳು ಭಾರೀ ಯಶಸ್ಸು ಕಂಡಿವೆ. ಇದೀಗ 'ಜವಾನ್‌' ಸಿನಿಮಾದಲ್ಲಿ ಶಾರುಖ್‌ ಖಾನ್‌ ಅವರಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಅಟ್ಲೀ, ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.

ಇನ್ನೂ ಜನ್ಮದಿನದ ಪ್ರಯುಕ್ತ ಅಟ್ಲೀ ಅವರಿಗೆ ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಶುಭಾಶಯಗಳನ್ನು ತಿಳಿಸಿ ಪ್ರೀತಿ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ, ಅಭಿಮಾನಿಗಳನ್ನು ಉದ್ದೇಶಿಸಿ ಗುರುವಾರ ಸಂಜೆ ಟ್ವೀಟ್ ಮಾಡಿದ್ದ ಅವರು, 'ನನಗೆ ಹಾರೈಸಲು ಸಮಯ ಮೀಸಲಿಟ್ಟ ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬದವರಿಗೆ ಧನ್ಯವಾದಗಳು. ನನ್ನ ಜನ್ಮದಿನವನ್ನು ಸ್ಮರಣೀಯವಾಗಿಸಿದ ಪ್ರತಿಯೊಬ್ಬರಿಗೂ ನಮನಗಳು' ಎಂದು ತಿಳಿಸಿದ್ದರು.

ಶಾರುಖ್‌ ಖಾನ್‌ ಅಭಿನಯದ 'ಜವಾನ್‌' ಬಹುನಿರೀಕ್ಷಿತ ಸಿನಿಮಾ. ದಳಪತಿ ವಿಜಯ್ ಈ ಚಿತ್ರದ ಒಂದು ಭಾಗವಾಗಲಿದ್ದಾರೆ ಎಂಬ ವದಂತಿಗಳಿವೆ. ನಿರ್ದೇಶಕ ಅಟ್ಲೀ ಶಾರುಖ್​​ ಮತ್ತು ವಿಜಯ್ ಅವರೊಂದಿಗಿನ ಈ ಫೋಟೋ ಹಂಚಿಕೊಂಡ ಬಳಿಕ ಈ ರೀತಿಯ ಗುಸುಗುಸು ಆರಂಭವಾಗಿದೆ.

ಅಭಿಮಾನಿಗಳು ಈ ಚಿತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಏನಾದರೂ ಸರ್ಪ್ರೈಸ್​ ಇದ್ದರೆ ಈಗಲೇ ಹೇಳಿ ಎಂದು ತಿಳಿಸಿದ್ದಾರೆ. ಅದ್ಭುತ ಚಿತ್ರ # ದಳಪತಿ ವಿಜಯ್ ಮತ್ತು ಶಾರುಖ್​ಖಾನ್​​ ಭಾರತೀಯ ಚಿತ್ರರಂಗದ ಇತಿಹಾಸದ ಇಬ್ಬರು ದೊಡ್ಡ ಸೂಪರ್‌ಸ್ಟಾರ್‌ಗಳು. ಬ್ಲಾಕ್‌ಬಸ್ಟರ್ ನಂತರ ಬ್ಲಾಕ್‌ಬಸ್ಟರ್. ಸಾಟಿಯಿಲ್ಲದ ಸೂಪರ್‌ ಸ್ಟಾರ್‌ಡಮ್, ಎಂದಿಗೂ ಮುಗಿಯದ ಕ್ರೇಜ್. ವಿಜಯ್ ಅತಿಥಿ ಪಾತ್ರವನ್ನು ಒಪ್ಪಿಕೊಂಡಿದ್ದಾರೆಯೇ. ನನಗೆ ಇದನ್ನು ನಂಬಲಾಗುತ್ತಿಲ್ಲ. ಇದು ನಿಜವೇ? ದಯವಿಟ್ಟು ಖಚಿತಪಡಿಸಿ" ಎಂದು ಅಭಿಮಾನಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:'ಬ್ರಹ್ಮಾಸ್ತ್ರ ಚಿತ್ರಕ್ಕಾಗಿ ಯಾವುದೇ ಸಂಭಾವನೆ ಪಡೆದಿಲ್ಲ': ಸ್ಪಷ್ಟನೆ ನೀಡಿದ ರಣಬೀರ್​ ಕಪೂರ್​

ಶಾರುಖ್ ಖಾನ್ ತಮ್ಮ ಮುಂಬರುವ ಚಿತ್ರ 'ಜವಾನ್' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಅಟ್ಲೀ ಕುಮಾರ್ ನಿರ್ದೇಶನದ 'ಜವಾನ್' ಚಿತ್ರವನ್ನು ಗೌರಿ ಖಾನ್ ನಿರ್ಮಿಸಿದ್ದಾರೆ ಮತ್ತು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಪ್ರಸ್ತುತಪಡಿಸಲಿದೆ. ಶಾರುಖ್ ಹಂಚಿಕೊಂಡಿರುವ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಸಾಕಷ್ಟು ಮೆಚ್ಚುಗೆ ಪಡೆದಿದೆ. ಈ ಸಿನಿಮಾ ಜೂನ್ 2, 2023ರಂದು ಐದು ಭಾಷೆಗಳಲ್ಲಿ - ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.

ABOUT THE AUTHOR

...view details