ಕನ್ನಡದ ಕೆಲ ಚಿತ್ರಗಳು ಭಾರತೀಯ ಚಿತ್ರರಂಗ ಮಾತ್ರವಲ್ಲದೇ ವಿಶ್ವಾದ್ಯಂತ ಸಿನಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಕೆಲ ನಟರು ಹಾಗೂ ತಂತ್ರಜ್ಞಾನರಿಗೆ ಪರಭಾಷೆಯ ಸಿನಿಮಾಗಳಿಂದ ಭರ್ಜರಿ ಆಫರ್ಗಳು ಬರ್ತಾ ಇವೆ. ಕಾಂತಾರ ಸಿನಿಮಾದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮಂಗಳಾವರಂ ಎಂಬ ಸಿನಿಮಾ ಮುಖಾಂತರ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಆರ್ ಎಕ್ಸ್ 100 ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ ನಿರ್ದೇಶಕ ಅಜಯ್ ಭೂಪತಿ ಅವರ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇತ್ತು. ಅದಕ್ಕೆ ಉತ್ತರವಾಗಿ, 'ಮಂಗಳಾವರಂ' ಎಂಬ ಹೊಸ ಚಿತ್ರವನ್ನು ಅವರು ಘೋಷಿಸಿದ್ದು, ಚಿತ್ರದ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದೆ.
'ಮಂಗಳಾವರಂ' ಸಿನಿಮಾವನ್ನು ಸ್ವಾತಿ ಗುಣಪತಿ ಮತ್ತು ಸುರೇಶ್ ವರ್ಮಾ ಒಡೆತನದ ಮುದ್ರಾ ಮೀಡಿಯಾ ವರ್ಕ್ಸ್ ಹಾಗೂ ಅಜಯ್ ಭೂಪತಿ ಅವರ ಎ ಕ್ರಿಯೇಟಿವ್ ವರ್ಕ್ಸ್ ಸೇರಿಕೊಂಡು ನಿರ್ಮಿಸುತ್ತಿವೆ. ಇಲ್ಲಿಯ ತನಕ ನಿರ್ದೇಶಕರಾಗಿದ್ದ ಅಜಯ್ ಭೂಪತಿ ಅವರು ಈ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ಅವರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರ ಬರೀ ತೆಲುಗು ಭಾಷೆಗಷ್ಟೇ ಸೀಮಿತವಲ್ಲ. ತೆಲುಗು ಭಾಷೆಯಲ್ಲಿ ನಿರ್ಮಾಣವಾಗಿ ಕನ್ನಡ ಮತ್ತು ತಮಿಳು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ಆಗಲಿದೆ.
ಇದನ್ನೂ ಓದಿ:ಈ ದಿನಾಂಕದಂದೇ ಅನಾವರಣಗೊಳ್ಳಲಿದೆ 'ಪುಷ್ಪ: ದಿ ರೂಲ್' ಮೊದಲ ನೋಟ