ಕರ್ನಾಟಕ

karnataka

ETV Bharat / entertainment

ಲವ್ ಮಾಕ್ಟೇಲ್ ಹೀರೊಗೆ ದಿಲ್‌ ಪಸಂದ್ ಚಿತ್ರತಂಡದಿಂದ ಸಿಗಲಿದೆ‌ ಜನುಮದಿನದ ಉಡುಗೊರೆ - darling krishna birthday

ದಿಲ್‌ ಪಸಂದ್ ಸಿನಿಮಾದ ಗುಂಗಿನಲ್ಲಿರೋ ಡಾರ್ಲಿಂಗ್ ಕೃಷ್ಣ ಅವರಿಗೆ ಜೂನ್ 12ರಂದು ಹುಟ್ಟುಹಬ್ಬದ ಸಂಭ್ರಮ.

dilpasandh-movie-first-glimpse-song-release-on-darling-krishna-birthday
ಲವ್ ಮೋಕ್ಟೈಲ್ ಹೀರೊಗೆ ದಿಲ್‌ ಪಸಂದ್ ಚಿತ್ರತಂಡದಿಂದ ಸಿಗಲಿದೆ‌ ಜನುಮದಿನದ ಉಡುಗೊರೆ !

By

Published : Jun 9, 2022, 10:11 PM IST

ಮೊದಲು ಸಹಾಯಕ ನಿರ್ದೇಶಕನಾಗಿ, ಬಳಿಕ ಸಣ್ಣಪುಟ್ಟ ಪಾತ್ರಗಳನ್ನು ಮಾಡ್ತಾ ಹೀರೋ ಆದ ನಟ‌ ಡಾರ್ಲಿಂಗ್ ಕೃಷ್ಣ. ಇವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ದಿಲ್ ಪಸಂದ್ ಚಿತ್ರತಂಡ ಸಿನಿಮಾದ ಫಸ್ಟ್ ಗ್ಲಿಂಪ್ಸ್ ಹಾಡನ್ನು ಬಿಡುಗಡೆ ಮಾಡಲಿದೆ. ಈ ಹಾಡು ‌ಜೂನ್ 12ರಂದು ಬೆಳಗ್ಗೆ 11.14ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಲಿದೆ.

ದಿಲ್ ಪಸಂದ್ ಚಿತ್ರದ ಪೋಸ್ಟರ್

ಡಾರ್ಲಿಂಗ್ ಕೃಷ್ಣ ಜೊತೆಗೆ ನಿಶ್ವಿಕಾ ನಾಯ್ಡು ರೊಮ್ಯಾನ್ಸ್ ಮಾಡಿದ್ದು, ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ಮೇಘಾ ಶೆಟ್ಟಿ ಕೂಡ ನಟಿಸಿದ್ದಾರೆ. ‌ಇವರೊಂದಿಗೆ ಸಾಧುಕೋಕಿಲ, ರಂಗಾಯಣ ರಘು, ತಬಲ ನಾಣಿ, ಗಿರಿ, ಹರೀಶ್ ದೇವಿತಂದ್ರೆ, ಚಿತ್ಕಲ ಬಿರಾದಾರ್, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದಾರೆ.

ಡಾರ್ಲಿಂಗ್ ಕೃಷ್ಣ ಜೊತೆಗೆ ನಿಶ್ವಿಕಾ ನಾಯ್ಡು

ಈ ಹಿಂದೆ ಮಳೆ, ಶಿವಾರ್ಜುನಾ ಸಿನಿಮಾಗಳನ್ನು ನಿರ್ದೇಶನ ಮಾಡಿ ಅನುಭವ ಇರುವ ‌ಶಿವ ತೇಜಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಲವ್ ಸ್ಟೋರಿ ಜೊತೆಗೆ, ವಿಭಿನ್ನ ಕಥಾಹಂದರ ಹೊಂದಿರುವ ದಿಲ್ ಪಸಂದ್ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಹಾಡುಗಳ ಚಿತ್ರೀಕರಣ ಇನ್ನೂ ಬಾಕಿಯಿದೆ. ರಶ್ಮಿ ಫಿಲಂಸ್ ಮೂಲಕ ಸುಮಂತ್ ಕ್ರಾಂತಿ ಅವರು ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಕೆ.ಆರ್.ರಂಗಸ್ವಾಮಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ.

ಇದನ್ನೂ ಓದಿ:ಹೊಸ ಪ್ರತಿಭೆಗಳ 'ಅಬ್ಬಬ್ಬ' ಸಿನಿಮಾಗೆ ಸಾಥ್‌ ಕೊಟ್ಟ ನಟ ಕಿಚ್ಚ ಸುದೀಪ್​

ABOUT THE AUTHOR

...view details