ಕರ್ನಾಟಕ

karnataka

ETV Bharat / entertainment

ಹಾಸ್ಟೆಲ್ ಹುಡುಗರ ತಂಡಕ್ಕೆ ದೂದ್ ಪೇಡಾ ದಿಗಂತ್ ಸಾಥ್​ - ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾಗೆ ಸ್ಯಾಂಡಲ್​ವುಡ್​ನ ದೂದ್ ಪೇಡಾ ಖ್ಯಾತಿಯ ದಿಗಂತ್ ಬೆಂಬಲ ಸೂಚಿಸಿದ್ದಾರೆ.

Diganth
ದೂದ್ ಪೇಡಾ ದಿಗಂತ್

By

Published : Jun 28, 2023, 4:21 PM IST

ದಿನೇ ದಿನೆ ಹೊಸತನ ಕಾಣುತ್ತಿರುವ ಬಣ್ಣದ ಲೋಕದಲ್ಲಿ ಸಿನಿಮಾ ಮಾಡುವುದೇ ಒಂದು ಸಾಹಸದ ಕೆಲಸ. ಸಿನಿಮಾ ಮಾಡಿ ಅದನ್ನು ದೊಡ್ಡ ಸಂಖ್ಯೆಯ ಪ್ರೇಕ್ಷಕರಿಗೆ ತಲುಪಿಸುವುದಕ್ಕೆ ಬೇಕು ಭಗೀರಥ ಪ್ರಯತ್ನ. ಏಕೆಂದರೆ, ಅದಕ್ಕೆ ಸರಿಯಾದ ರೀತಿಯ ಪ್ರಚಾರ ಕೂಡ ಅಗತ್ಯ. ವಿಶೇಷ ರೀತಿಯ ಚಿತ್ರಕ್ಕೆ ವಿಶಿಷ್ಟ ಪ್ರಕಾರದ ಪ್ರಚಾರ‌ದ ಅವಶ್ಯಕತೆ ಇದೆ. ಅದರಂತೆ ವಿಭಿನ್ನ ರೀತಿಯಲ್ಲಿ ಪ್ರಚಾರ ನಡೆಸುತ್ತಿದೆ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡ.

ಸ್ಯಾಂಡಲ್​ವುಡ್​​ ಸ್ಟಾರ್ಸ್ ಸಾಥ್: ಆರಂಭದ ದಿನದಿಂದಲೂ ನಾನಾ ಬಗೆಯಲ್ಲಿ ಸಿನಿಪ್ರಿಯರನ್ನು ಸೆಳೆಯುತ್ತಿರುವ ಚಿತ್ರಕ್ಕೀಗ ಮತ್ತೋರ್ವ ಸ್ಯಾಂಡಲ್​ವುಡ್​​ ಸ್ಟಾರ್ ಸಾಥ್ ಕೊಟ್ಟಿದ್ದಾರೆ. ಹೌದು, ಹಾಸ್ಟೆಲ್ ಹುಡುಗರಿಗೆ ದೂದ್ ಪೇಡಾ ಸಿಹಿ ಸಿಕ್ಕಿದೆ. ಸ್ಯಾಂಡಲ್​ವುಡ್​ನ ದೂದ್ ಪೇಡಾ ಖ್ಯಾತಿಯ ದಿಗಂತ್ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಜುಲೈ 7ಕ್ಕೆ ದಿಗಂತ್ ಲುಕ್ ರಿವೀಲ್: ದಿ. ಪುನೀತ್ ರಾಜ್‌ಕುಮಾರ್, ರಮ್ಯಾ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಶೈನ್​ ಶೆಟ್ಟಿ, ಪವನ್ ಕುಮಾರ್ ಬೆಂಬಲ ಕೊಟ್ಟಿರುವ ಚಿತ್ರದಲ್ಲಿ ದಿಗಂತ್​​ ಬಣ್ಣ ಹಚ್ಚಿದ್ದಾರೆ. ಆದರೆ ಅವರ ಪಾತ್ರವೇನೆಂಬುದನ್ನು ಚಿತ್ರತಂಡ ಸಸ್ಪೆನ್ಸ್ ಆಗಿಟ್ಟಿದೆ. ಜುಲೈ 7ಕ್ಕೆ ದಿಗಂತ್ ಲುಕ್ ರಿವೀಲ್ ಮಾಡಲು ಚಿತ್ರತಂಡ ಪ್ಲ್ಯಾನ್​​​​ ಹಾಕಿಕೊಂಡಿದೆ.

ದೂದ್ ಪೇಡಾ ದಿಗಂತ್

ಯೂತ್ ಸಬ್ಜೆಕ್ಟ್ ಕಥೆಯನ್ನೊಳಗೊಂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶಿಸಿದ್ದಾರೆ. ಬಹುತೇಕ ರಂಗಭೂಮಿ ಪ್ರತಿಭೆಗಳು ನಟಿಸಿರುವ ಚಿತ್ರವನ್ನು ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲ್ಮ್ಸ್ ಬ್ಯಾನರ್ ಅಡಿ ಪ್ರಜ್ವಲ್ ಬಿ.ಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ. ಕಶ್ಯಪ್ ಬಂಡವಾಳ ಹೂಡಿದ್ದಾರೆ. ಪ್ರತಿ ಬಾರಿ ಯೂನಿಕ್ ಕಾನ್ಸೆಪ್ಟ್​​ ಮೂಲಕ ಪ್ರಚಾರ ಮಾಡುತ್ತಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಛಾಯಾಗ್ರಹಣ, ಸುರೇಶ್ ಸಂಕಲನವಿರುವ ಸಿನಿಮಾ ಜುಲೈನಲ್ಲಿ ತೆರೆಗೆ ಬರಲಿದೆ.

ಇದನ್ನೂ ಓದಿ:Julian Sands Death: ಕಣ್ಮರೆಯಾಗಿ ಐದು ತಿಂಗಳ ನಂತರ ಆಸ್ಕರ್ ನಾಮನಿರ್ದೇಶಿತ ಸಿನಿಮಾ ನಟನ ಶವ ಪತ್ತೆ!

ಸೆಟ್ಟೇರಿದಾಗಿಂದಲೂ ಒಂದಲ್ಲೊಂದು ವಿಚಾರವಾಗಿ ಸಿನಿಮಾ ಸುದ್ದಿಯಲ್ಲಿದೆ. ಶೀರ್ಷಿಕೆಯೇ ಇಷ್ಟೊಂದು ಕ್ರಿಯೇಟಿವ್​ ಆಗಿರಬೇಕಾದರೆ ಪ್ರೇಕ್ಷಕರು ಗಮನಿಸದೇ ಇರುತ್ತಾರೇಯೇ?. ಚಿತ್ರದ ಮೊದಲ ಹಾಡನ್ನು ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಧನಂಜಯ, ಧ್ರುವ ಸರ್ಜಾ ಅವರು ಬಿಡುಗಡೆ ಮಾಡುವ ಮೂಲಕ ಹೊಸ ಚಿತ್ರತಂಡಕ್ಕೆ ಬೆಂಬಲ ಸೂಚಿಸಿದ್ದರು. ಪ್ರೊಟೆಸ್ಟ್ ಸಾಂಗ್​ನಲ್ಲಿ ಹಾಸ್ಟೆಲ್​ನಲ್ಲಿರುವ ಹುಡುಗರ ಕಥೆ, ವ್ಯಥೆ ಅನಾವರಣಗೊಂಡಿತ್ತು. ಇನ್ನೂ ಸ್ಯಾಂಡಲ್​ವುಡ್​ನ ಮೋಹಕ ತಾರೆ ರಮ್ಯಾ ಕೂಡ ಈ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:Satyaprem Ki Katha: ಮೊದಲ ದಿನ 8 ಕೋಟಿ ರೂ. ಕಲೆಕ್ಷನ್ ಸಾಧ್ಯತೆ​ ​ - ಕಿಲ್ಲಿಂಗ್​​ ಲುಕ್​​ ಕೊಟ್ಟ ಕಿಯಾರಾ

ABOUT THE AUTHOR

...view details