ಮುಂಬೈ: 'ಲಾಲ್ ಸಿಂಗ್ ಚಡ್ಡಾ' ಸಿನಿಮಾವು ನಟಿ ಕರೀನಾ ಕಪೂರ್ ಖಾನ್ ಅವರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ. ಕಾರಣ ನಟಿ ತಮ್ಮ 2ನೇ ಗರ್ಭಾವಸ್ಥೆಯಲ್ಲಿ ಈ ಸಿನಿಮಾದಲ್ಲಿ ನಟಿಸಿರುವುದೇ ಕಾರಣವಾಗಿದೆ. ಭಾನುವಾರ ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಿನಿಮಾದ ಟ್ರೇಲರ್ ಅನ್ನು ತಮ್ಮ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.
ತನಗೆ ಮತ್ತು ತನ್ನ ಕಿರಿಯ ಮಗ ಜೆಗೆ ಲಾಲ್ ಸಿಂಗ್ಗೆ ಚಡ್ಡಾದ ಭಾಗವಾಗಲು ಅವಕಾಶ ನೀಡಿದ ತನ್ನ ಸಹನಟ ಅಮೀರ್ ಖಾನ್ ಮತ್ತು ನಿರ್ದೇಶಕ ಅದ್ವೈತ್ ಚಂದನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ''ಎ ಪ್ಯಾಂಡಮಿಕ್, ಟೂ ಲಾಕ್ಡೌನ್ಸ್, ಅಂಡ್ ಎ ಬೇಬಿ ಲೇಟರ್..ಒನ್ ಆಫ್ ಮೈ ಮೋಸ್ಟ್ ಸ್ಪೇಷಲ್ ಫಿಲ್ಮ್ಸ್..ಆಲ್ಸೋ ಬೀಕಾಸ್ ಮೈ ಜೇ ಬಾಬಾ ಈಸ್ ವೇರಿ ಮಚ್ ಪಾರ್ಟ್ ಆಫ್ ಇಟ್. ಥ್ಯಾಂಕ್ಯೂ ಅದ್ವೈತ್ ಅಂಡ್ ಅಮೀರ್ ಫಾರ್ ಹ್ಯಾವಿಂಗ್ ನಾಟ್ ಜಸ್ಟ್ ಮೀ ಬಟ್ ದಿ ಮೋಸ್ಟ್ ಆಫ್ ಅಸ್ ಇನ್ ಇಟ್..ಇಟ್ಸ್ ಸಮ್ಥಿಂಗ್ ಇ ವಿಲ್ ಚೆರಿಷ್ ಫಾರೆವರ್. ಓವರ್ ಟು ಯು ಗಾಯ್ಸ್, ಫೈನಲಿ...# ಲಾಲ್ಸಿಂಗ್ಚಡ್ಡ," ಎಂದು ಬರೆದುಕೊಂಡಿದ್ದಾರೆ.