ಟಾಪ್ ಹೀರೋಗಳಾದ ಮೋಹನ್ ಲಾಲ್ ಮತ್ತು ವೆಂಕಟೇಶ್ ಉತ್ತಮ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಾರೆ. ಹೌದು, ಅಜಯ್ ದೇವಗನ್ ಅವರಿಗೆ ಅದೃಷ್ಟ ಒಲಿದಿದೆ. ಲಾಲ್ ಮತ್ತು ವೆಂಕಿ ಕಳೆದುಕೊಂಡ ಉತ್ತಮ ಅವಕಾಶವನ್ನು ಅಜಯ್ ದೇವಗನ್ ಪಡೆದಿದ್ದಾರೆ.
ಮಲಯಾಳಂ ಬ್ಲಾಕ್ಬಸ್ಟರ್ ಚಿತ್ರ 'ದೃಶ್ಯಂ' ಹಲವು ಭಾಷೆಗಳಲ್ಲಿ ರೀಮೇಕ್ ಆಗಿದೆ. ಕಳೆದ ವರ್ಷ 'ದೃಶ್ಯಂ 2' ತೆರೆಕಂಡಿತ್ತು. ಕೋವಿಡ್ನಿಂದಾಗಿ, ಮೋಹನ್ಲಾಲ್ ಅಭಿನಯದ ಮಲಯಾಳಂ ಚಲನಚಿತ್ರವು ನೇರವಾಗಿ ಒಟಿಟಿ ಅಲ್ಲಿ ಬಿಡುಗಡೆಯಾಯಿತು. ಇತರೆ ಭಾಷೆಗಳಿಗೆ ರೀಮೇಕ್ ಹಕ್ಕುಗಳು ಮಾರಾಟವಾಯಿತು. ನಂತರ, ವೆಂಕಟೇಶ್ ಅವರ ಮುಖ್ಯ ಪಾತ್ರದಲ್ಲಿ ಜೀತು ಜೋಸೆಫ್ ಅವರು ತೆಲುಗಿನಲ್ಲಿ ಅದೇ ಚಿತ್ರವನ್ನು ನಿರ್ದೇಶನ ಮಾಡಿದರು. ಈ ಸಿನಿಮಾವನ್ನು ಥಿಯೇಟರ್ಗೆ ತರಲು ಶತಾಯಗತಾಯ ಪ್ರಯತ್ನ ಮಾಡಲಾಗಿತ್ತು. ಕೋವಿಡ್ ಕಡಿಮೆಯಾಗದ ಪರಿಸ್ಥಿತಿಯಲ್ಲಿ, ಅವರು OTT ಮಾರ್ಗವನ್ನು ಕಂಡುಕೊಳ್ಳಬೇಕಾಯಿತು.
ಇದೀಗ ಅದೇ ಚಿತ್ರ ಹಿಂದಿಯಲ್ಲಿ ರೀಮೇಕ್ ಆಗಿದ್ದು, ಇತ್ತೀಚೆಗಷ್ಟೇ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಅಭಿಷೇಕ್ ಪಾಠಕ್ ಹಿಂದಿ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಸಣ್ಣ ಪುಟ್ಟ ಬದಲಾವಣೆ ಮಾಡಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಜಯ್ ಜೊತೆಗೆ ಅಕ್ಷಯ್ ಖನ್ನಾ, ಟಬು ಮತ್ತು ಶ್ರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.