ಕಳೆದ ವಾರಾಂತ್ಯ ಮುಂಬೈನಲ್ಲಿ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನ ಗ್ರ್ಯಾಂಡ್ ಲಾಂಚ್ ಪ್ರೋಗ್ರಾಮ್ ನಡೆದಿದೆ. ಈ ಅದ್ದೂರಿ ಸಮಾರಂಭದಕ್ಕೆ ದೇಶ ವಿದೇಶಗಳ ಸ್ಟಾರ್ ಸೆಲೆಬ್ರಿಟಿಗಳು ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ಭಾಗಿ ಆಗಿದ್ದರು. ಕಾರ್ಯಕ್ರಮದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋ ಜಾಕಿ, ನಟಿ, ನಿರೂಪಕಿ, ಗಾಯಕಿ ಅನುಷಾ ದಾಂಡೇಕರ್ ಅವರು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಮತ್ತು ಪುತ್ರಿ ಸುಹಾನಾ ಖಾನ್ ಅವರನ್ನು ಭೇಟಿಯಾದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅನುಷಾ ಅವರು ಬೈಟ್‌ಗಾಗಿ ತಾಯಿ ಮಗಳನ್ನು ಒಪ್ಪಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಆದರೆ, ಗೌರಿ ಖಾನ್ ಅವರು ಪುತ್ತಿ ಸುಹಾನಾ ಅವರ ಸಂದರ್ಶನವನ್ನು ತೆಗೆದುಕೊಳ್ಳಲು ಅನುಷಾರಿಗೆ ನಿರಾಕರಿಸಿದರು. ಈ ಒಂದು ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗೌರಿ ಮತ್ತು ಸುಹಾನಾ ಅವರು ಅನುಷಾರನ್ನು ನಿರ್ಲಕ್ಷಿಸಿದ್ದಾರೆ ಎಂದು ಭಾವಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ಗುಂಪು ಅನುಷಾ ಅವರನ್ನು ಟ್ರೋಲ್ ಮಾಡಿದ್ದಾರೆ. ಗೌರಿ ಮತ್ತು ಸುಹಾನಾರ ಸಂದರ್ಶನಕ್ಕೆ ಒತ್ತಾಯಿಸಿದ್ದಕ್ಕಾಗಿ ಕೆಲವರು ಅನುಷಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಎಂತಹ ಅವಮಾನ' ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಮತ್ತೋರ್ವರು 'ತಾವು ಶೈನ್ ಆಗಲು ಎಸ್ಆರ್ಕೆ ಫ್ಯಾಮಿಯನ್ನು ಬಳಸಿಕೊಳ್ಳಲು ಅನುಷಾ ಪ್ರಯತ್ನಿಸಿದ್ದರು' ಎಂದು ಟ್ರೋಲ್ ಮಾಡಲಾಗಿದೆ.
ಭಾರೀ ಟೀಕೆ ಎದುರಿಸಿದ ವಿಡಿಯೋ ಜಾಕಿ ಅನುಷಾ ದಾಂಡೇಕರ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಟ್ರೋಲ್‌ಗಳಿಗೆ ತಿರುಗೇಟು ಕೊಟ್ಟಿದ್ದಾರೆ. ''ನೀವು ನನ್ನ ಶತ್ರುವಾಗಲು ಬಯಸಿ ಈ ರೀತಿಯ ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿದ್ದೀರಿ, ಏಕೆಂದರೆ ಈ ಸಮಾರಂಭಕ್ಕೆ ಆಹ್ವಾನಿಸಲ್ಪಡದ ಜನರ ಫ್ಯಾನ್ಸ್ ನೀವು. ನನ್ನನ್ನು ಕೆಟ್ಟದಾಗಿ ತೋರಿಸಲು ಪ್ರಯತ್ನಿಸುತ್ತಿದ್ದೀರಿ. ಆದ್ರೆ ಕ್ಷಮಿಸಿ ನಿಮ್ಮ ಯೋಜನೆಯ ಭಾಗವಾಗಲು ಸಾಧ್ಯವಿಲ್ಲ" ಎಂದು ಬರೆದುಕೊಂಡಿದ್ದಾರೆ.