ಕರ್ನಾಟಕ

karnataka

ETV Bharat / entertainment

'ಲೈಫ್ Today' ತಂಡಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್ - Life Today

ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿಂದು 'ಲೈಫ್ Today' ಸಿನಿಮಾದ ಮುಹೂರ್ತ ನೆರವೇರಿದೆ.

Dhruva Sarja supports Life Today Movie
'ಲೈಫ್ Today' ತಂಡಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್

By ETV Bharat Karnataka Team

Published : Jan 4, 2024, 8:53 PM IST

ಕನ್ನಡ ಚಿತ್ರರಂಗದಲ್ಲಿ 'ಇರುವುದೆಲ್ಲವ ಬಿಟ್ಟು' ಕಥೆ ಹೇಳಿ ಗೆದ್ದಿರುವ ಕಾಂತ ಕನ್ನಳ್ಳಿ ಅವರೀಗ ಮತ್ತೊಂದು ಫ್ರೆಶ್ ಕಂಟೆಂಟ್ ಮೂಲಕ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ತಮ್ಮ ಮುಂದಿನ ಪ್ರಾಜೆಕ್ಟ್​ಗೆ 'ಲೈಫ್ Today' ಎಂಬ ವಿಭಿನ್ನ ಶೀರ್ಷಿಕೆ ಇಟ್ಟಿದ್ದಾರೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿಂದು 'ಲೈಫ್ Today' ಮುಹೂರ್ತ ನೆರವೇರಿದೆ. ನಿರ್ದೇಶಕ ಮಹೇಂದರ್ ಕ್ಲ್ಯಾಪ್ ಮಾಡಿ ಶುಭ ಹಾರೈಸಿದ್ರೆ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟೈಟಲ್ ಹಾಗೂ ಫಸ್ಟ್ ಲುಕ್ ರಿವೀಲ್ ಮಾಡಿ ಚಿತ್ರತಂಡಕ್ಕೆ ಬೆಸ್ಟ್ ವಿಶಸ್ ತಿಳಿಸಿದರು.

ನಟ ಧ್ರುವ ಸರ್ಜಾ ಮಾತನಾಡಿ, ''ಟೈಟಲ್ ಸಿನಿಮಾ ನೋಡಬೇಕು ಎಂಬ ನಿರೀಕ್ಷೆ ಹುಟ್ಟಿಸುತ್ತದೆ. ಈ ಮೊದಲು ಇರುವುದೆಲ್ಲವ ಬಿಟ್ಟು ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆ ಚಿತ್ರ ಚೆನ್ನಾಗಿತ್ತು. ಈಗ 'ಲೈಫ್ Today'ಗೆ ಆ್ಯಕ್ಷನ್​ ಕಟ್​​ ಹೇಳಲು ಸಜ್ಜಾಗಿದ್ದಾರೆ. ಸಿನಿಮಾದಲ್ಲಿ ಹೊಸಬರು, ಹಳೆಬರು ಇದ್ದಾರೆ. ಇಡೀ ತಂಡಕ್ಕೆ ಶುಭವಾಗಲಿ'' ಎಂದು ಹಾರೈಸಿದರು.

'ಲೈಫ್ Today'

ನಿರ್ದೇಶಕ ಕಾಂತ ಕನ್ನಳ್ಳಿ ಮಾತನಾಡಿ, ಇರುವುದೆಲ್ಲವ ಬಿಟ್ಟು ಸಿನಿಮಾಗೆ ನೀವು ತೋರಿದ ಪ್ರೀತಿ, ಪ್ರೋತ್ಸಾಹ, ಸಹಕಾರವನ್ನು ಎಂದು ಮರೆಯಲಾಗುವುದಿಲ್ಲ. ಆ ಸಹಕಾರವೇ ನನ್ನ ಇನ್ನೊಂದು ಸಿನಿಮಾ ಮಾಡಲು ವೇದಿಕೆ ಸೃಷ್ಟಿಸಿದೆ. ಲೈಫ್ Today ಸಿನಿಮಾಗೆ ಬೆಂಬಲ ಕೊಡಲು ಆಗಮಿಸಿರುವ ಧ್ರುವ ಸರ್, ಶ್ರೀಧರ್ ಸರ್, ಮಹೇಂದರ್ ಸರ್​ಗೆ ಧನ್ಯವಾದಗಳು ಎಂದು ತಿಳಿಸಿದರು.

ನಾಯಕ ಕಿರಣ್ ಆನಂದ್ ಮಾತನಾಡಿ, ನನ್ನ ಮೊದಲ ಸಿನಿಮಾವಿದು. ಕನ್ನಲ್ಲಿ ಸರ್ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ನಮ್ಮ ಡಿಒಪಿ ನನ್ನ ಅಣ್ಣನ ತರ. ಶ್ರೀಧರ್ ಸರ್ ನಮ್ಮ ಸಿನಿಮಾಗೆ ಮ್ಯೂಸಿಕ್ ಕೊಡುತ್ತಿರೋದು ನಮ್ಮ ಅದೃಷ್ಟ. ನಾಯಕಿ ಲೇಖಾ ಅವರಿಂದ ಕಲಿಯುವುದು ತುಂಬಾನೇ ಇದೆ. ನಿರ್ಮಾಪಕರು ನನಗೆ ಅಣ್ಣನಿಗಿಂತ ಹೆಚ್ಚು ಎಂದು ತಿಳಿಸಿದರು.

ಇದನ್ನೂ ಓದಿ:ಮಾಳವಿಕ ನಾಯರ್ ಜನ್ಮದಿನಕ್ಕೆ 'ಕೃಷ್ಣಂ ಪ್ರಣಯ ಸಖಿ' ಪೋಸ್ಟರ್ ಬಿಡುಗಡೆ

ನಿರ್ದೇಶಕ ಮಹೇಂದರ್ ಮಾತನಾಡಿ, ಈ ಚಿತ್ರದ ಶೀರ್ಷಿಕೆಯನ್ನು ಧ್ರುವ ಸರ್ಜಾ ಪ್ರೇಕ್ಷಕರಿಗೆ ಅರ್ಪಿಸಿದ್ದಾರೆ. ಯುವ ತಂಡ ಈ ಚಿತ್ರದಲ್ಲಿ ಕೆಲಸ ಮಾಡುತ್ತಿದೆ. ತೆರೆಹಿಂದೆ ಇರುವವರೆಲ್ಲ ನನ್ನ ಅಚ್ಚುಮೆಚ್ಚಿನವರು. ಶಿಷ್ಯಂದಿರೇ ಎನ್ನಬಹುದು. ಕಲೆ ಎನ್ನುವುದು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಎಲ್ಲರನ್ನೂ ಅಪ್ಪಿಕೊಳ್ಳುತ್ತದೆ. ಇದು ಸತ್ಯವಾದ ಮಾತು. ಬಹಳಷ್ಟು ಹೊಸಬರು ಇದ್ದೀರಾ. ನಮ್ಮನ್ನು ಕಲೆ ಕೈಬೀಸಿ ಕರೆದಿದೆ. ಅದು ನಿಮ್ಮನ್ನೇ ಅಪ್ಪಿಕೊಳ್ಳಲಿ ಎಂದು ಶುಭ ಹಾರೈಸಿದರು.

ನಿರ್ದೇಶಕ ಶಶಾಂಕ್ ಮಾತನಾಡಿ 'ಲೈಫ್ Today' ಟೈಟಲ್ ಬಹಳ ಟ್ರೆಂಡಿಯಾಗಿದೆ. ಸಿನಿಮಾಗೆ ಒಳ್ಳೆದಾಗಲಿ. ಇಂತಹ ಹೊಸಬರ ತಂಡಕ್ಕೆ ಧ್ರುವ ಸರ್ಜಾ ಪ್ರೋತ್ಸಾಹ ಕೊಟ್ಟಿದ್ದಾರೆ. ಈ ಸಿನಿಮಾದಿಂದ ಎಲ್ಲರ ಬದುಕಲ್ಲೂ ಗೋಲ್ಡನ್ ಡೇಸ್ ಬರಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಮಾಫಿಯಾ: ಪ್ರಜ್ವಲ್ ದೇವರಾಜ್-ಅದಿತಿ ಪ್ರಭುದೇವ ಜೋಡಿಯ ಸಾಂಗ್​ ರಿಲೀಸ್

'ಲೈಫ್ Today' ಲವ್ ಫ್ಯಾಮಿಲಿ ಕಥಾಹಂದರ ಹೊಂದಿದೆ. ಈ ಚಿತ್ರದ ಮೂಲಕ ಕಿರಣ್ ಆನಂದ್ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದು, ಲೇಖಾ ಚಂದ್ರ ನಾಯಕಿಯಾಗಿ ನಟಿಸುತ್ತಿದ್ದಾರೆ. ಜನವರಿ ತಿಂಗಳಾಂತ್ಯಕ್ಕೆ ಶೂಟಿಂಗ್​ಗೆ ಕಿಕ್ ಸ್ಟಾರ್ಟ್ ಸಿಗಲಿದ್ದು, ಬೆಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಈ ಸಿನಿಮಾಗೆ ಶ್ರೀಧರ್ ವಿ ಸಂಭ್ರಮ ಅವರ ಸಂಗೀತ ನಿರ್ದೇಶನವಿದ್ದು, ಸತೀಶ್ ಕುಮಾರ್ ಕ್ಯಾಮರಾ ಹಿಡಿಯಲಿದ್ದಾರೆ. ಮೇಘನಾ ಪ್ರೊಡಕ್ಷನ್ ಅಡಿ ಮೇಘನಾ ಪ್ರದೀಪ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ABOUT THE AUTHOR

...view details