ಸ್ಯಾಂಡಲ್ವುಡ್ನಲ್ಲಿ ಪ್ರಿಮಿಯರ್ ಪದ್ಮಿನಿ ಹಾಗೂ ರತ್ನನ್ ಪ್ರಪಂಚ ಸಿನಿಮಾ ಮೂಲಕ ಭರವಸೆ ಹುಟ್ಟಿಸಿರುವ ನಟ ಪ್ರಮೋದ್. ಇದೀಗ ಬಾಂಡ್ ರವಿ ಸಿನಿಮಾದಲ್ಲಿ ಪ್ರಮೋದ್ ಅಭಿನಯಿಸುತ್ತಿದ್ದಾರೆ. ಈ ಸಿನಿಮಾಗೆ ಪೊಗರು ಧ್ರುವ ಹಾಗೂ ಯಂಗ್ ಟೈಗರ್ ವಿನೋದ್ ಪ್ರಭಾಕರ್ ಸಾಥ್ ಕೊಟ್ಟಿದ್ದಾರೆ. ಇವತ್ತು ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ ಧ್ರುವ ಸರ್ಜಾ ಹಾಗು ವಿನೋದ್ ಪ್ರಭಾಕರ್ ಪ್ರಮೋದ್ ಬೆನ್ನು ತಟ್ಟಿದ್ದಾರೆ.
ಸಿನಿಮಾಗೆ ವಿನೋದ್ ಪ್ರಭಾಕರ್ ಕ್ಲ್ಯಾಪ್ ಮಾಡಿದ್ರೆ, ಧ್ರುವ ಸರ್ಜಾ ಕ್ಯಾಮೆರಾಗೆ ಚಾಲನೆ ನೀಡಿದರು. ಬಳಿಕ ಮಾತಿಗಿಳಿದ ವಿನೋದ್, ಧ್ರುವ ನನ್ನ ತಮ್ಮ. ನನ್ನ ಕಡೆಯಿಂದ ಕ್ಲ್ಯಾಪ್ ಮಾಡಿಸಿದ್ದಕ್ಕೆ ಧನ್ಯವಾದ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು. ಬಳಿಕ ಧ್ರುವ ಸರ್ಜಾ, ವಿನೋದ್ ಪ್ರಭಾಕರ್ ನಮ್ಮಣ್ಣ ಎನ್ನುತ್ತಾ ಸಿನಿಮಾದ ಟೈಟಲ್ ಕೇಳಿದ್ರಿ. ಫೀಲ್ಡ್ ಸಿನಿಮಾ ಅನಿಸುತ್ತದೆ. ಇದು ಪ್ರಾಮಿಸಿಂಗ್ ಸಿನಿಮಾ. ಪ್ರತಿಯೊಬ್ಬರಿಗೂ ಪ್ರೋತ್ಸಾಹ ಮಾಡಬೇಕು ಎಂದು ನೆಗೆಟಿವ್ ಕಮೆಂಟ್ ಮಾಡುವವರಿಗೆ ವಾರ್ನಿಂಗ್ ಕೊಟ್ಟರು.
ಪ್ರಮೋದ್, ನಾನು ಅಪ್ಪು ಸರ್ ಅಭಿಮಾನಿಯಾಗಿ ಬಾಂಡ್ ರವಿ ಸಿನಿಮಾದಲ್ಲಿ ನಟಿಸ್ತಿದ್ದೇನೆ. ಅಣ್ಣಾ ಬಾಂಡ್ ಸಿನಿಮಾದಲ್ಲಿ ಅಪ್ಪು ಸರ್ ಮಿಂಚಿದ್ದ ಬಾಂಡ್ ರವಿ ಪಾತ್ರದ ರೀತಿ ಇರುತ್ತದೆ. ಹೀಗಾಗಿ, ಅಪ್ಪು ಸರ್ ಮ್ಯಾನರಿಸಂ, ಆಕ್ಟಿಂಗ್ ಖದರ್ ನೋಡಿ ಕಲಿಯುತ್ತಿದ್ದೇನೆ. ಒಳ್ಳೆ ಪ್ರೊಡಕ್ಷನ್ ಹೌಸ್, ಒಳ್ಳೆ ಫ್ಯಾಷನ್ ಪ್ರೊಡ್ಯೂಸರ್ ಎಂದರು.