ಸ್ಯಾಂಡಲ್ವುಡ್ನಲ್ಲಿ ಟೀಸರ್, ಹಾಡುಗಳ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದ ಟ್ರೈಲರ್ ಅನ್ನು ವರ್ಚುವಲ್ ವೇದಿಕೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್, ವೇದಿಕೆಯಲ್ಲಿ ನಟ ವಸಿಷ್ಠ ಸಿಂಹ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಟ್ರೈಲರ್ ಪ್ರಾಮಿಸಿಂಗ್ ಆಗಿದ್ದು ಚಿತ್ರದ ಬಗ್ಗೆ ಭರವಸೆ ಮೂಡಿಸಿದೆ.
ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ನಟ ವಸಿಷ್ಠ ಸಿಂಹ, ಚಿತ್ರದಲ್ಲಿ ಪ್ರತಿಯೊಂದು ಅಂಶಗಳು ಕೂಡ ಗಮನ ಸೆಳೆಯುತ್ತಿದೆ. ಯಂಗ್ ಟೀಂ ಸೇರಿಕೊಂಡು ಇಷ್ಟು ಒಳ್ಳೆಯ ಸಿನಿಮಾವನ್ನು ಕಟ್ಟಿಕೊಟ್ಟಿದೆ ಅಂದ್ರೆ ತುಂಬಾ ಖುಷಿಯ ವಿಚಾರ. ಟ್ರೈಲರ್ ಬಹಳಾನೇ ಖುಷಿ ಕೊಡ್ತು. ಮ್ಯೂಸಿಕ್, ಡೈಲಾಗ್, ಕ್ಯಾಮರಾವರ್ಕ್ ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು.
ನಟ ನವೀನ್ ಶಂಕರ್ ಮಾತನಾಡಿ, ಗುಳ್ಟು ನಂತರ ಕೇಳಿದ ಇಂಟ್ರೆಸ್ಟಿಂಗ್ ಸಬ್ಜೆಕ್ಟ್ ಇರುವ ಕಥೆ ಇದು. ಚಿತ್ರದಲ್ಲಿ ಆದಿ ಪಾತ್ರವನ್ನು ನಿರ್ವಹಿಸಿದ್ದೇನೆ. ಬಾಕ್ಸಿಂಗ್ನಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿರುವ ಹುಡುಗನ ಪಾತ್ರ. ಗುಳ್ಟು ಸಿನಿಮಾಗಿಂತ ಡಿಫ್ರೆಂಟ್ ಆದ ಪಾತ್ರವನ್ನು ಇಲ್ಲಿ ನಿರ್ವಹಿಸಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿದರು.
ನಾಯಕಿ ಐಶಾನಿ ಶೆಟ್ಟಿ ಮಾತನಾಡಿ, ನಿರ್ದೇಶಕರು ಕ್ರೈಂ ಡ್ರಾಮಾ ಸಿನಿಮಾ ಎಂದಾಗ ನಾನು ಸ್ವಲ್ಪ ಯೋಚನೆ ಮಾಡಿದೆ. ಆದ್ರೆ ಕಥೆ ಕೇಳಿ ತುಂಬಾ ಖುಷಿ ಆಯ್ತು. ಈವರೆಗೂ ನಾನು ಮಾಡಿರುವ ಪಾತ್ರಕ್ಕಿಂತ ಕಂಪ್ಲೀಟ್ ಡಿಫ್ರೆಂಟ್ ಆಗಿರುವ ಪಾತ್ರ ನಿರ್ವಹಿಸಿದ್ದೇನೆ. ಶ್ರೇಯ ಎನ್ನುವ ಪಾತ್ರವನ್ನು ನಿರ್ವಹಿಸಿದ್ದೇನೆ. ಡೋಂಟ್ ಕೇರ್ ಆಟಿಟ್ಯೂಡ್ ಇರುವ ಬೋಲ್ಡ್ ಹುಡುಗಿ ಪಾತ್ರ. ಈ ಚಿತ್ರದ ಭಾಗವಾಗಿರೋದಕ್ಕೆ ತುಂಬಾ ಖುಷಿ ಇದೆ. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದರು.