ಕಿರುತೆರೆ ನಟಿ ದೇವೊಲೀನಾ ಭಟ್ಟಾಚಾರ್ಜಿ ಅವರು ಗೆಳೆಯ, ನಟ ವಿಶಾಲ್ ಸಿಂಗ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ವರದಿಯಾಗಿದೆ. ಅಂತಿಮವಾಗಿ ತಮ್ಮ ಪ್ರೀತಿಯ ಪಯಣಕ್ಕೆ ವಿವಾಹದ ಮುದ್ರೆ ಒತ್ತಿದ್ದಾರೆ.
ಕಳೆದ ದಿನ ಮದುವೆಗೂ ಮುನ್ನದ ಶಾಸ್ತ್ರಗಳ ಫೋಟೋ ಹಂಚಿಕೊಂಡಿದ್ದರು. ಇಂದು ಕೂಡ ವಧುವಿನಂತೆ ತಯಾರಾದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಒಂದಾದರ ಮೇಲೊಂದರಂತೆ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದು, ಚಿತ್ರವೊಂದರಲ್ಲಿ ಅವರು ಮಾಂಗಲ್ಯ ಸರ ಧರಿಸಿರೋದನ್ನು ನಾವು ಕಾಣಬಹುದು. ಮಾಂಗಲ್ಯ ಅವರ ಮದುವೆಗೆ ಸಾಕ್ಷಿಯಾಗಿದ್ದು, ಈ ಬಗ್ಗೆ ಸ್ವತಃ ಅವರೇ ಖಚಿತಪಡಿಸಬೇಕಿದೆ.
ದೇವೋಲೀನಾ ಭಟ್ಟಾಚಾರ್ಜಿ - ವಿಶಾಲ್ ಸಿಂಗ್ ಮದುವೆ
37 ವರ್ಷದ ಈ ಇಬ್ಬರೂ ಸ್ಟಾರ್ ಪ್ಲಸ್ನಲ್ಲಿ ಸೂಪರ್ ಹಿಟ್ ಅಗಿದ್ದ ಸಾಥ್ ನಿಭಾನಾ ಸಾಥಿಯಾ ಸೀರಿಯಲ್ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ದೇವೊಲೀನಾ ಗೋಪಿ ಅಹೆಮ್ ಮೋದಿ ಪಾತ್ರದಲ್ಲಿ(ಮುಖ್ಯಭೂಮಿಕೆ) ಮತ್ತು ವಿಶಾಲ್ ಸಿಂಗ್ ಜಿಗರ್ ಚಿರಾಗ್ ಮೋದಿ ಪಾತ್ರದಲ್ಲಿ ನಟಿಸಿದ್ದರು.
ಇದನ್ನೂ ಓದಿ:ಪ್ರಜಾರಾಜ್ಯ ಟೀಸರ್ ರಿಲೀಸ್: ಶೀಘ್ರದಲ್ಲೇ ಸಿನಿಮಾ ಬಿಡುಗಡೆ
ಕೆಲಸದ ಭಾಗ ನೋಡುವುದಾದರೆ, ಪ್ರಣಬ್ ಜೆ ದೇಕಾ ನಿರ್ದೇಶನದ ಮುಂಬರುವ ಚಿತ್ರ ಕೂಕಿಯಲ್ಲಿ ದೇವೊಲೀನಾ ಪತ್ರಕರ್ತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕೂಕಿಯಲ್ಲಿ ದೀಪನ್ನಿತಾ ಶರ್ಮಾ, ರಾಜೇಶ್ ತೈಲಾಂಗ್, ಸ್ವಸ್ತಿಕಾ ಮುಖರ್ಜಿ, ಉದಯನ್ ದುವಾರಾ ಸೇರಿ ಮುಂತಾದವರಿದ್ದಾರೆ. ಅಸ್ಸಾಂನ ತೇಜ್‌ಪುರ ಮತ್ತು ಗುವಾಹಟಿಯಲ್ಲಿ ಚಿತ್ರೀಕರಣ ನಡೆಯಲಿದೆ.