ಕರ್ನಾಟಕ

karnataka

ETV Bharat / entertainment

ಎರಡು ಭಾಗಗಳಲ್ಲಿ ಮೂಡಿ ಬರಲಿದೆ ಜಾನ್ವಿ, ಜೂ.ಎನ್‌ಟಿಆರ್ ಅಭಿನಯದ 'ದೇವರ' - ದೇವರ ಲೇಟೆಸ್ಟ್ ನ್ಯೂಸ್

ಬಹುನಿರೀಕ್ಷಿತ 'ದೇವರ' ಸಿನಿಮಾ ಭಾಗ 1 2024ರ ಏಪ್ರಿಲ್​ನಲ್ಲಿ ತೆರೆಗಪ್ಪಳಿಸಲಿದೆ.

Devara Movie
ದೇವರ ಸಿನಿಮಾ

By ETV Bharat Karnataka Team

Published : Oct 4, 2023, 8:07 PM IST

'ಆರ್‌ಆರ್‌ಆರ್' ನಟ ಜೂನಿಯರ್ ಎನ್‌ಟಿಆರ್ ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ದೇವರ'. ಮೋಸ್ಟ್ ಎಕ್ಟ್​​ಪೆಕ್ಟೆಡ್​ ಸಿನಿಮಾ ಎರಡು ಭಾಗಗಳಲ್ಲಿ ಮೂಡಿ ಬರಲಿದೆ ಎಂದು ಚಿತ್ರತಂಡ ಇಂದು ಘೋಷಿಸಿದೆ. 'ದೇವರ' ಮೂಲಕ ತೆಲುಗು ಚಿತ್ರರಂಗಕ್ಕೆ ಬಾಲಿವುಡ್​ ಬೆಡಗಿ ಜಾನ್ವಿ ಕಪೂರ್ ಎಂಟ್ರಿ ಕೊಡಲಿದ್ದಾರೆ. ನಿರ್ದೇಶಕ ಕೊರಟಾಲ ಶಿವ ಚಿತ್ರದ ಅಪ್​ಡೇಟ್ಸ್ ಅನ್ನು ವಿಡಿಯೋ ಸಂದೇಶದ ಮೂಲಕ ಹಂಚಿಕೊಂಡಿದ್ದಾರೆ.

ಆರ್​ಆರ್​ಆರ್​ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ಟಾಲಿವುಡ್​ ನಟ ಜೂ.ಎನ್‌ಟಿಆರ್ ಮತ್ತು ಬಾಲಿವುಡ್​ನಲ್ಲಿ ಬೆಳೆಯುತ್ತಿರುವ ಜಾನ್ವಿ ಕಪೂರ್​ ಕಾಂಬಿನೇಶನ್​ನ ಚೊಚ್ಚಲ ಚಿತ್ರ ಮುಂದಿನ ವರ್ಷ ತೆರೆಕಾಣಲಿರುವ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಈಗಾಗಲೇ ದೇವರ ಕುರಿತು ಪ್ರೇಕ್ಷಕರು ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದಾರೆ. ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇರುವ ಈ ಹೊತ್ತಿನಲ್ಲಿ ಚಿತ್ರ ತಯಾರಕರು ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದರು. ದೇವರ ಮೊದಲ ಭಾಗ ಮುಂದಿನ ವರ್ಷ ಏಪ್ರಿಲ್‌ನಲ್ಲಿ ತೆರೆಗಪ್ಪಳಿಸಲಿದೆ ಎಂದು ಘೋಷಿಸಿದರು.

ದೇವರ ಚಿತ್ರದ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ದೇವರ ಹೆಸರಿನ ಅಧಿಕೃತ ಟ್ವಿಟರ್​ ಖಾತೆ ವಿಡಿಯೋ ಸಂದೇಶ ಹಂಚಿಕೊಂಡಿದ್ದು, "ದೇವರ ನಿಮ್ಮನ್ನು ಮನರಂಜಿಸಲು 2 ಭಾಗಗಳಲ್ಲಿ ಮೂಡಿ ಬರಲಿದೆ. ಮೊದಲ ಭಾಗವು 2024ರ ಏಪ್ರಿಲ್ 5ರಂದು ಬಿಡುಗಡೆ ಆಗುತ್ತಿದೆ" ಎಂದು ಬರೆದುಕೊಂಡಿದೆ. ಈ ವಿಷಯವನ್ನು ಘೋಷಿಸಲು ನಿರ್ದೇಶಕ ಕೊರಟಾಲ ಶಿವ ಅವರನ್ನು ಒಳಗೊಂಡಿರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ತಂಡಕ್ಕೆ ಸಿಕ್ಕ ಸ್ಫೂರ್ತಿ ಏನು ಎಂಬುದನ್ನು ನಿರ್ದೇಶಕರು ತೆಲುಗಿನಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ:'ಟೈಗರ್​ 3' ಟ್ರೇಲರ್​​ ರಿಲೀಸ್​ ಡೇಟ್ ಫಿಕ್ಸ್‌; ದೀಪಾವಳಿಗೆ ಸಿನಿಮಾ ತೆರೆಗೆ

ನಿರ್ದೇಶಕ ಕೊರಟಾಲ ಶಿವ ಮಾಹಿತಿ ಪ್ರಕಾರ, ದೇವರ ಜಗತ್ತು ಒಂದು ಹೊಸ ಅನುಭವ. ನಿರೂಪಣೆ ಬೃಹತ್ ಪ್ರಮಾಣದಲ್ಲಿದ್ದು, ಹಲವು ಪಾತ್ರವರ್ಗಗಳನ್ನು ಆಹ್ವಾನಿಸಿತು. ಒಂದೆರಡು ಶೆಡ್ಯೂಲ್‌ಗಳ ನಂತರ, ಎಡಿಟ್ ಸೂಟ್​ನಲ್ಲಿ ಯಾವ ದೃಶ್ಯ ಕತ್ತರಿಸಬೇಕೆಂದು ನಿರ್ಧರಿಸುವುದು ಕಷ್ಟಕರವಾಗಿತ್ತು. ಚಿತ್ರೀಕರಿಸಿದ ಎಲ್ಲಾ ದೃಶ್ಯಗಳು ಮಹತ್ವವಾದದ್ದೇ. ಹಾಗಾಗಿ ಚಿತ್ರತಂಡ ಸಿನಿಮಾವನ್ನು ವಿಸ್ತರಿಸಲು ನಿರ್ಧಾರ ಕೈಗೊಂಡಿತು. ಈ ಹಿನ್ನೆಲೆಯಲ್ಲಿ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರಲಿದೆ.

ಇದನ್ನೂ ಓದಿ:'ರಾಮಾಯಣ'ದಲ್ಲಿ ಯಶ್​​, ಸಾಯಿ ಪಲ್ಲವಿ, ರಣ್​ಬೀರ್​ ಕಪೂರ್​: 2024ರ ಫೆಬ್ರವರಿಯಲ್ಲಿ ಸೆಟ್ಟೇರಲಿದೆ ಸಿನಿಮಾ

ಯುವಸುಧಾ ಆರ್ಟ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್‌ ಸಂಸ್ಥೆ ಈ ಬಹುನಿರೀಕ್ಷಿತ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಅನಿರುಧ್​ ರವಿಚಂದರ್ ಸಂಗೀತ ಒದಗಿಸಿದ್ದಾರೆ. ಸೈಫ್ ಅಲಿ ಖಾನ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ABOUT THE AUTHOR

...view details