ಟ್ರೈಲರ್, ಹಾಡುಗಳಿಂದಲೇ ಸಖತ್ ಸುದ್ದಿಯಾಗುತ್ತಿರುವ ಪೌರಾಣಿಕ ಫ್ಯಾಂಟಸಿ ಸಾಹಸ ಚಿತ್ರ 'ಬ್ರಹ್ಮಾಸ್ತ್ರ ಭಾಗ 1 ಶಿವ' ಸಿನಿಮಾ ಮುಂದಿನ ಭಾಗದ ಬಗ್ಗೆ ಚರ್ಚೆ ಶುರುವಾಗಿದೆ. ಬ್ರಹ್ಮಾಸ್ತ್ರ ಭಾಗ 2 ರಲ್ಲಿ ಭಾಗ 1ರಲ್ಲಿರುವ ನಟ ರಣ್ಬೀರ್ ಕಪೂರ್, ನಟಿ ಆಲಿಯಾ ಭಟ್ ಜೊತೆಗೆ ನಟ ರಣ್ವೀರ್ ಸಿಂಗ್, ನಟಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎನ್ನುವ ಸುದ್ದಿಯಿದೆ.
ಬ್ರಹ್ಮಾಸ್ತ್ರ ಭಾಗ 1 ತೆರೆಗೆ ಬರುವ ಮೊದಲೇ ಚಿತ್ರದ ಎರಡನೇ ಭಾಗದಲ್ಲಿ ತಾರಾ ದಂಪತಿ ನಟ ರಣ್ವೀರ್ ಸಿಂಗ್ ಮತ್ತು ಅವರ ಪತ್ನಿ, ನಟಿ ದೀಪಿಕಾ ಪಡುಕೋಣೆ ಪಾತ್ರವರ್ಗವಿರಲಿದೆ ಎಂದು ಬಲ್ಲಮೂಲಗಳು ತಿಳಿಸಿವೆ. ಬ್ರಹ್ಮಾಸ್ತ್ರ ಭಾಗ 2 ದೀಪ್‌ವೀರ್ ಮತ್ತು ರಾಲಿಯಾ ಅವರನ್ನು ಒಟ್ಟಿಗೆ ತರುತ್ತದೆ ಎಂದು ಈ ಯೋಜನೆಯ ಬಗ್ಗೆ ಬಲ್ಲ ಮೂಲವೊಂದು ತಿಳಿಸಿದೆ. ಈ ನಾಲ್ವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಲಿಯಾ ಮತ್ತು ರಣಬೀರ್ ಭಾಗ 1 ರಲ್ಲಿರುವ ಪಾತ್ರಗಳಲ್ಲೇ ಮುಂದುವರಿಯುತ್ತಾರೆ. ದೀಪ್ವೀರ್ಗೂ ಸಹ ಪ್ರಮುಖ ಪಾತ್ರವಿರಲಿದೆ ಎಂದು ಮೂಲಗಳು ತಿಳಿಸಿವೆ.