ಭಾರತೀಯ ಚಿತ್ರರಂಗಕ್ಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಕೊಡುಗೆ ಅಪಾರ. ಜಾಗತಿಕ ಮಟ್ಟದಲ್ಲಿ ದೇಶವನ್ನು ಹಲವು ಬಾರಿ ಪ್ರತಿನಿಧಿಸಿರುವ ನಟಿ ಇದೀಗ ಮತ್ತೊಮ್ಮೆ ಭಾರತದ ಕೀರ್ತಿ ಹೆಚ್ಚಿಸಲು ಮುಂದಾಗಿದ್ದಾರೆ. ಹೌದು, ಅಂತಾರಾಷ್ಟ್ರೀಯ ಮಟ್ಟದ ಗೌರವಕ್ಕೆ ಪಾತ್ರರಾಗಲಿದ್ದಾರೆ 'ವಿಶ್ವದ 9ನೇ ಸುಂದರಿ' ಖ್ಯಾತಿಯ ದೀಪಿಕಾ ಪಡುಕೋಣೆ.
ಮೂಲಗಳ ಪ್ರಕಾರ, ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಫಿಫಾ 2022 ಕ್ರೀಡಾಕೂಟದ ಭಾಗವಾಗಲು ದೀಪಿಕಾ ಕತಾರ್‌ಗೆ ಹಾರಲಿದ್ದಾರೆ. ಡಿಸೆಂಬರ್ 18ಕ್ಕೆ ಆಯೋಜನೆಗೊಂಡಿರುವ ಫೈನಲ್ ಪಂದ್ಯಕ್ಕೂ ಮೊದಲು ಲುಸೈಲ್ ಐಕಾನಿಕ್ ಸ್ಟೇಡಿಯಂನಲ್ಲಿ ಫಿಫಾ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಲಿದ್ದಾರೆ.
ಚಿತ್ರದ ವಿಚಾರ ಗಮನಿಸುವುದಾದರೆ, ದೀಪಿಕಾ ಅವರು ಶಾರುಖ್ ಖಾನ್ ಮತ್ತು ಜಾನ್ ಅಬ್ರಹಮ್ ಅವರೊಂದಿಗೆ 'ಪಠಾನ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜನವರಿ 25, 2023ರಂದು ಚಿತ್ರ ಬಿಡುಗಡೆಯಾಗಲಿದೆ.
ಇದನ್ನೂ ಓದಿ:ಫಿಫಾ ಫ್ಯಾನ್ ಫೆಸ್ಟ್‌ನಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ ರಂಗು
ಇನ್ನೂ ಬಾಲಿವುಡಡ್ನ ನಟಿ, ನೃತ್ಯಗಾರ್ತಿ ನೋರಾ ಫತೇಹಿ ಇತ್ತೀಚೆಗೆ ನಡೆದ ಫಿಫಾ ವರ್ಲ್ಡ್ ಫ್ಯಾನ್ ಫೆಸ್ಟಿವಲ್‌ನಲ್ಲಿ 'ಲೈಟ್ ದಿ ಸ್ಕೈ' ಸಾಂಗ್ಗೆ ಹೆಜ್ಜೆ ಹಾಕಿದ್ದರು. ಕತಾರ್ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಭಾರತೀಯರನ್ನು ಹೆಮ್ಮೆ ಪಡುವಂತೆ ಮಾಡಿದ್ದರು. ಪ್ರದರ್ಶನದ ವೇಳೆ ನೋರಾ ಫತೇಹಿ ಹೆಮ್ಮೆಯಿಂದ ದೇಶದ ತ್ರಿವರ್ಣ ಧ್ವಜವನ್ನು ಜೈ ಹಿಂದ್ ಎಂದು ಘೋಷಣೆ ಕೂಗಿದ್ದು, ಪ್ರೇಕ್ಷಕರು ಸಹ ಜೈ ಹಿಂದ್ ಘೋಷಣೆಗಳನ್ನು ಮೊಳಗಿಸಿದ್ದರು. ಇದೀಗ ಮತ್ತೊಮ್ಮೆ ಕತಾರ್ನಲ್ಲಿ ನಡೆಯುತ್ತಿರುವ ಈ ಮ್ಯಾಚ್ನಲ್ಲಿ ಭಾರತೀಯರಾದ ದೀಪಿಕಾ ಪಡುಕೋಣೆ ದೇಶವನ್ನು ಪ್ರತಿನಿಧಿಸಲಿದ್ದಾರೆ.