ಮುಂಬೈ: ಶಾರುಖ್ ಖಾನ್ ಅಭಿನಯದ 'ಓಂ ಶಾಂತಿ ಓಂ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ದೀಪಿಕಾ ಪಡುಕೋಣೆ, ಕಿಂಗ್ ಖಾನ್ ತಮ್ಮ ಫೇವರಿಟ್ ಕೋ ಸ್ಟಾರ್ (ನೆಚ್ಚಿನ ಸಹ ಕಲಾವಿದ) ಎಂದಿದ್ದಾರೆ. ಈ ಇಬ್ಬರ ನಟನೆಯ ಪಠಾಣ್ ಚಿತ್ರ ಇದೀಗ ತೆರೆ ಮೇಲೆ ಬರಲು ಸಜ್ಜಾಗಿದ್ದು, ಇದು ಇವರಿಬ್ಬರು ಒಟ್ಟಾಗಿ ನಟಿಸುತ್ತಿರುವ ನಾಲ್ಕನೇ ಚಿತ್ರವಾಗಿದೆ. ಇದಕ್ಕಿಂತ ಮುಂದೆ ಇವರಿಬ್ಬರು 'ಓಂ ಶಾಂತಿ ಓಂ', 'ಹ್ಯಾಪಿ ನ್ಯೂ ಇಯರ್' ಮತ್ತು 'ಚೆನ್ನೈ ಎಕ್ಸ್ಪ್ರೆಸ್'ನಲ್ಲಿ ಒಟ್ಟಿಗೆ ನಟಿಸಿದ್ದರು.
2007ರಲ್ಲಿ 'ಓಂ ಶಾಂತಿ ಓಂ' ನಲ್ಲಿ ಒಟ್ಟಿಗೆ ನಟಿಸಿದ್ದ ಇವರಿಬ್ಬರ ಜೋಡಿ ಪ್ರೇಕ್ಷಕರನ್ನು ಸೆಳೆದಿತ್ತು. ಈ ಇಬ್ಬರ ಜೋಡಿ ಒಟ್ಟಿಗೆ ನಟಿಸಿದ್ದ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿದೆ. ಇದೀಗ ಮತ್ತೊಮ್ಮೆ ಈ ಜೋಡಿ ತೆರೆ ಮೇಲೆ ಮೋಡಿ ಮಾಡಲು ಸಜ್ಜಾಗಿದೆ. ಬಹು ದೀರ್ಘ ಸಮಯದ ಬಳಿಕ ಶಾರುಖ್ ಅಭಿಯನದ ಪಠಾಣ್ ಸಿನಿಮಾ ಇದೇ ಬುಧವಾರ ಬಿಡುಗಡೆಯಾಗುತ್ತಿದ್ದು, ಈ ಚಿತ್ರವನ್ನು ಯಶ್ ರಾಜ್ ಫೀಲ್ಮ್ಸ್ಅಡಿ ನಿರ್ಮಿಸಲಾಗುತ್ತಿದೆ. ಈಗಾಗಲೇ ಚಿತ್ರದ ಹಾಡುಗಳು, ಟ್ರೈಲರ್ನಲ್ಲಿ ಈ ಜೋಡಿಗಳು ಕಣ್ಮನ ಸೆಳೆದಿದ್ದಾರೆ.
ಶಾರುಖ್ ಖಾನ್ ಜೊತೆ ಅದ್ಭುತ ಸಿನಿಮಾಗಳಲ್ಲಿ ನಟಿಸುತ್ತಿರುವುದು ನಿಜಕ್ಕೂ ನನ್ನ ಅದೃಷ್ಟ. ನಾನು ಮತ್ತೊಮ್ಮೆ ನನ್ನ ನೆಚ್ಚಿನ ನಟನೊಂದಿಗೆ ಕೆಲಸ ಮಾಡುತ್ತಿದ್ದೇನೆ. ನಮ್ಮ ನಡುವೆ ಉತ್ತಮ ಸಂಬಂಧ ಇದೆ ಎಂದು ನಟಿ ದೀಪಿಕಾ ಪಡುಕೋಣೆ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಹೇಗಿದೆ ದೀಪಿಕಾ ಶಾರುಖ್ ಕೆಮಿಸ್ಟ್ರಿ: 'ಪಠಾಣ್' ಸಿನಿಮಾದಲ್ಲಿನ ಎಲೆಕ್ಟ್ರಿಕ್ ಕೆಮಿಸ್ಟ್ರಿ ರಹಸ್ಯದ ಬಗ್ಗೆ ಇಬ್ಬರು ನಟರು ತಿಳಿಸಿದ್ದಾರೆ, ಇಬ್ಬರು ತಮ್ಮ ಜೋಡಿಯ ಕೆಮಿಸ್ಟ್ರಿ ಅದ್ಭುತವಾಗಿ ಬರಲು ಕಾರಣ ಇಬ್ಬರ ನಡುವಿನ ಭಾಂದವ್ಯ ಎಂದು ಪರಸ್ಪರ ಕ್ರೆಡಿಟ್ ನೀಡಿದ್ದಾರೆ. ಚಿತ್ರಕ್ಕಾಗಿ ಶಾರುಖ್ ಸಿಕ್ಕಾಪಟ್ಟೆ ಡಯಟ್ ಮತ್ತು ವ್ಯಾಯಾಮ ಮಾಡಿ ದೇಹ ಹುರುಗೊಳಿಸಿದ್ದಾರೆ. ಇಬ್ಬರು ಪ್ರತ್ಯೇಕವಾಗಿ ಚಿತ್ರಕ್ಕಾಗಿ ಶ್ರಮವಹಿಸಿದ್ದೇವೆ. ಆದರೆ, ಅಂತಿಮವಾಗಿ ಇದೊಂದು ತಂಡದ ಕೆಲಸವಾಗಿದೆ ಎಂದಿದ್ದಾರರೆ ಪಠಾಣ್ ಬೆಡಗಿ.
ಈ ಚಿತ್ರ ನಿರ್ದೇಶಕ ಸಿದ್ದಾರ್ಥ್ ಆನಂದ್ ದೃಷ್ಟಿ. ಸಿನಿಮಾಟೋಗ್ರಾಫ್ ಇದನ್ನು ಮತ್ತಷ್ಟು ಉನ್ನತಗೊಳಿಸಿದೆ, ಸ್ಟೈಲಿಸ್ಟ್ ಶಲೀನ ನತಾನಿ ಇಬ್ಬರನ್ನು ಮತ್ತಷ್ಟು ಸುಂದರವಾಗಿಸಿದ್ದಾರೆ. ಮೇಕಪ್ ಮತ್ತು ಕೇಶ ವಿನ್ಯಾಸಗಳು ಅದ್ಭುತವಾಗಿದೆ. ಈ ಹಿನ್ನೆಲೆ ಇಡೀ ಚಿತ್ರ ತಂಡ ಒಟ್ಟುಗೂಡಿ ಕೆಲಸ ಮಾಡಿದೆ ಎಂದಿದ್ದಾರೆ.
ಗೂಢಾಚಾರಿಣಿ ಪಾತ್ರದಲ್ಲಿ:ಇನ್ನು 'ಪಠಾಣ್' ಸಿನಿಮಾ ತಮ್ಮ ಸಿನಿ ಜೀವನದಲ್ಲಿ ವಿಶೇಷವಾಗಿರಲಿದೆ ಎಂದಿದ್ದಾರೆ ನಟಿ. ಕಾಣ ಇದೇ ಮೊದಲ ಬಾರಿ ದೀಪಿಕಾ ಗೂಢಚಾರಿಣಿ ಪಾತ್ರದಲ್ಲಿ ನಟಿಸುತ್ತಿದ್ದು, ಆ್ಯಕ್ಷನ್ ಸಿನ್ಗಳಲ್ಲಿ ನಟಿಸಿದ್ದಾರೆ. ಚಿತ್ರದ ನನ್ನ ಪಾತ್ರದ ಬಗ್ಗೆ ನನಗೆ ಬಹಳಷ್ಟು ಕಾತರತೆ ಇದೆ. ಈ ಮೊದಲು ನಾನು ನಿರ್ವಹಿಸದ ಪಾತ್ರ ಇದಾಗಿದೆ. ಜೊತೆಗೆ ಇಷ್ಟು ಮಟ್ಟದ ಸಾಹಸವನ್ನು ನಾನು ಈ ಮೊದಲು ಮಾಡಿಲ್ಲ ಎಂದಿದ್ದಾರೆ. 'ಪಠಾಣ್' ಚಿತ್ರ ದಲ್ಲಿ ಆದಿತ್ಯ ಚೋಪ್ರಾ ಮತ್ತು ಜಾನ್ ಅಬ್ರಹಾಂ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಇದೇ ಜನವರಿ 25ರಂದು ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಪಠಾಣ್ ರಿಲೀಸ್ಗೆ ಇನ್ನೆರಡೇ ದಿನ ಬಾಕಿ: ಅಭಿಮಾನಿಗಳಿಗೆ ಶುಭಾಶಯ ಕೋರಿದ ಶಾರುಖ್ ಖಾನ್