ಕರ್ನಾಟಕ

karnataka

ETV Bharat / entertainment

ಚಿತ್ರೀಕರಣದ ವೇಳೆ ನಟಿ ದೀಪಿಕಾ ಪಡುಕೋಣೆ ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಚಿತ್ರೀಕರಣದ ವೇಳೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದೆ.

DEEPIKA PADUKONE RUSHED TO HOSPITAL AFTER FEELING SICK SAYS SOURCES
ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ

By

Published : Jun 14, 2022, 8:01 PM IST

ಹೈದರಾಬಾದ್​:ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗುತ್ತಿದೆ. ಹೈದರಾಬಾದ್​​ನಲ್ಲಿ ಅಮಿತಾಭ್​​ ಬಚ್ಚನ್​ ಮತ್ತು ಪ್ರಭಾಸ್ ನಟನೆಯ ಪ್ರಾಜೆಕ್ಟ್ ಕೆ ಚಿತ್ರೀಕರಣದ ಸಂದರ್ಭದಲ್ಲಿ ಅವರು ಅನಾರೋಗ್ಯಕ್ಕೆ ತುತ್ತಾದರು ಎಂಬ ಮಾಹಿತಿ ಲಭ್ಯವಾಗಿದೆ. ದಿಢೀರ್​ ಹೃದಯ ಬಡಿತದಲ್ಲಿ ವ್ಯತ್ಯಾಸ ಕಂಡುಬಂದಿದ್ದು ತಕ್ಷಣ ನಟಿಯನ್ನು ಆಸ್ಪತ್ರೆಗೆ ಕರೆತರಲಾಗಿದೆ. ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.


ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ಅಭಿನಯದ ಸಿನಿಮಾ ಇದಾಗಿದ್ದು ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದಾರೆ.


ಸತತ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರಿಂದ ಮತ್ತು ವಿಶ್ರಾಂತಿಯ ಕೊರತೆಯಿಂದ ಹೀಗಾಗಬಹುದು ಎಂದು ಹೇಳಲಾಗುತ್ತಿದೆ.


ಸ್ಯಾಂಡಲ್​ವುಡ್​ನ ಉಪೇಂದ್ರ ನಟನೆಯ ಐಶ್ವರ್ಯ ಚಿತ್ರದ ಮೂಲಕ ಮೊದಲ ಬಾರಿಗೆ ಬಣ್ಣ ಹಚ್ಚಿದ್ದ ದೀಪಿಕಾ ಬಳಿಕ ದಕ್ಷಿಣ ಭಾರತದ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಪ್ರಾಜೆಕ್ಟ್ ಕೆ ಚಿತ್ರದ ಮೂಲಕ ಇತ್ತ ಮುಖ ಮಾಡಿದ್ದಾರೆ.

ABOUT THE AUTHOR

...view details