ಕರ್ನಾಟಕ

karnataka

ETV Bharat / entertainment

ಪ್ರತಿಷ್ಠಿತ 'ಅಕಾಡೆಮಿ ಮ್ಯೂಸಿಯಂ ಗಾಲಾ' ಈವೆಂಟ್​ ಮುಗಿಸಿ ಬಂದ ದೀಪಿಕಾ ಪಡುಕೋಣೆ - ದೀಪಿಕಾ ಪಡುಕೋಣೆ ಸಿನಿಮಾ

Deepika Padukone: ಲಾಸ್ ಏಂಜಲೀಸ್‌ನ ಪ್ರತಿಷ್ಠಿತ ಅಕಾಡೆಮಿ ಮ್ಯೂಸಿಯಂ ಗಾಲಾ 2023ರಲ್ಲಿ ಭಾಗವಹಿಸಿದ್ದ ಬಾಲಿವುಡ್​ ಬೆಡಗಿ ದೀಪಿಕಾ ಪಡುಕೋಣೆ ಇಂದು ದೇಶಕ್ಕೆ ವಾಪಸಾಗಿದ್ದಾರೆ.

Deepika Padukone
ದೀಪಿಕಾ ಪಡುಕೋಣೆ

By ETV Bharat Karnataka Team

Published : Dec 6, 2023, 5:32 PM IST

ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಇತ್ತೀಚೆಗೆ, ಲಾಸ್ ಏಂಜಲೀಸ್‌ನ ಪ್ರತಿಷ್ಠಿತ ಅಕಾಡೆಮಿ ಮ್ಯೂಸಿಯಂ ಗಾಲಾ 2023ರಲ್ಲಿ ಅವರು ಭಾಗವಹಿಸಿದ್ದರು. ಹಾಲಿವುಡ್‌ನ ಖ್ಯಾತನಾಮರಾದ ಸೆಲೆನಾ, ದುವಾ ಲಿಪಾ ಮತ್ತು ಲಿಯೊನಾರ್ಡೊ ಡಿಕಾಪ್ರಿಯೊ ಸೇರಿದಂತೆ ಹಲವರೊಂದಿಗೆ ದೀಪಿಕಾ ಪಡುಕೋಣೆ ಹೆಜ್ಜೆ ಹಾಕಿ ಭಾರತದ ಕೀರ್ತಿ ಹೆಚ್ಚಿಸಿದ್ದರು. ಈ ಪ್ರತಿಷ್ಠಿತ ಈವೆಂಟ್​ನಲ್ಲಿ ಭಾಗಿಯಾದ ಮೊದಲ ಭಾರತೀಯ ನಟಿ ಇವರು.

ವಿಶ್ವದ ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಭಾಗಿಯಾದ ಭಾರತೀಯ ನಟಿ ಇಂದು ಮುಂಜಾನೆ ತವರಿಗೆ ಮರಳಿದ್ದಾರೆ. ಎಂದಿನಂತೆ ನಟಿಯ ಏರ್​ಪೋರ್ಟ್ ಲುಕ್ ನೆಟ್ಟಿಗರ​​ ಗಮನ ಸೆಳೆದಿದೆ. ಸಂಪೂರ್ಣ ಕಪ್ಪುಡುಗೆಯಲ್ಲಿ ಪಠಾಣ್​ ಬೆಡಗಿ ದೀಪಿಕಾ ಕಾಣಿಸಿಕೊಂಡಿದ್ದು, ಕ್ಯಾಶುವಲ್​​ ವೇರ್​ನಲ್ಲೂ ಕಿಲ್ಲಿಂಗ್​ ಲುಕ್​ ಬೀರಿದ್ದಾರೆ ಅಂತಾರೆ ಅಭಿಮಾನಿಗಳು. ಪಾಪರಾಜಿಗಳ ಕ್ಯಾಮರಾದಲ್ಲಿ ಜವಾನ್​ ನಟಿಯ ಸೌಂದರ್ಯ ಸೆರೆಯಾಗಿದೆ. ​ಪಾಪರಾಜಿಗಳು ಏರ್​ಪೋರ್ಟ್​ನಿಂದ ದೀಪಿಕಾ ಪಡುಕೋಣೆ ವಿಡಿಯೋ ಹಂಚಿಕೊಂಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪಾಪರಾಜಿಯೋರ್ವರು ತಮ್ಮ ಖಾತೆ ಮೂಲಕ ಹಂಚಿಕೊಂಡ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ಅವರ ಏರ್​ಪೋರ್ಟ್ ಲುಕ್​ ಸಿಕ್ಕಿದೆ. ಕಂಪ್ಲೀಟ್​ ಬ್ಲ್ಯಾಕ್​ ವೇರ್​ನಲ್ಲಿ ಕಿಲ್ಲಿಂಗ್​​ ಲುಕ್ ಕೊಟ್ಟಿದ್ದಾರೆ. ವಿಮಾನ ನಿಲ್ದಾಣಕ್ಕೆ ನಟಿ ಆರಿಸಿಕೊಳ್ಳುವ ಉಡುಪಿನ ಶೈಲಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿರೋದು ನಿಮಗೆ ತಿಳಿದಿರುವ ವಿಚಾರವೇ. ಅದರಂತೆ ಇಂದೂ ಕೂಡ ಕಂಗೊಳಿಸಿದ್ದು, ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.

ಇದನ್ನೂ ಓದಿ:ಹೈದರಾಬಾದ್‌ನಲ್ಲಿ 'ದಿ ಗರ್ಲ್‌ಫ್ರೆಂಡ್‌' ಶೂಟಿಂಗ್​​​ ಆರಂಭ; ರಶ್ಮಿಕಾ ಮಂದಣ್ಣ ಭಾಗಿ

ಲಾಸ್ ಏಂಜಲೀಸ್‌ನಲ್ಲಿ ನಡೆದ 'ಅಕಾಡೆಮಿ ಮ್ಯೂಸಿಯಂ ಗಾಲಾ 2023' ಈವೆಂಟ್​​ಗೆ ಬ್ಲ್ಯೂ ವೆಲ್ವೆಟ್​​ ಒನ್​​ ಶೋಲ್ಡರ್ ಗೌನ್​ ಧರಿಸಿ ಹೋಗಿದ್ದರು. ಉಡುಗೆಗೆ ಹೊಂದಿಕೆಯಾಗುವ ಸಿಂಪಲ್​​ ಜ್ಯುವೆಲರಿಗಳನ್ನು ಧರಿಸಿದ್ದರು. ಈ ಪ್ರತಿಷ್ಟಿತ ಕಾರ್ಯಕ್ರಮಕ್ಕೆ ಆಹ್ವಾನ ಸ್ವೀಕರಿಸಿದ ಮೊದಲ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಜಾಗತಿಕ ಮಟ್ಟದ ಈ ಕಾರ್ಯಕ್ರಮದಲ್ಲಿ ಅತ್ಯಂತ ಜನಪ್ರಿಯ ತಾರೆಯರೊಂದಿಗೆ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:'ಕಾಫಿ ವಿತ್ ಕರಣ್'ನಲ್ಲಿ ಕಿಯಾರಾ ಅಡ್ವಾಣಿ, ವಿಕ್ಕಿ ಕೌಶಲ್​; ಆಕರ್ಷಕ ಫೋಟೋಗಳು ಶೇರ್

ಇನ್ನು ನಟಿಯ ಸಿನಿಮಾ ವಿಚಾರ ಗಮನಿಸೋದಾದ್ರೆ, ಹೃತಿಕ್ ರೋಷನ್ ಜೊತೆ ಫೈಟರ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ, ನಟಿಯ ಕ್ಯಾರೆಕ್ಟರ್​​ ಪೋಸ್ಟರ್ ಅನಾವರಣಗೊಂಡಿತ್ತು. ಮುಂದಿನ ಜನವರಿ 25ರಂದು ತೆರೆಕಾಣಲು ಸಜ್ಜಾಗುತ್ತಿರುವ ಫೈಟರ್​ ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಈ ಸಾಲಿನಲ್ಲಿ ಬಿಡುಗಡೆ ಆಗಿರುವ ನಟಿಯ ಪಠಾಣ್​ ಮತ್ತು ಜವಾನ್ ಸಿನಿಮಾಗಳು​ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿವೆ. ಹಾಗಾಗಿ ನಟಿಯ ಮುಂದಿನ ಚಿತ್ರಗಳ ಬಗ್ಗೆ ಸಿನಿಪ್ರಿಯರು ಕುತೂಹಲ ಹೊಂದಿದ್ದಾರೆ.

ABOUT THE AUTHOR

...view details