ಬಾಲಿವುಡ್ನ ಪವರ್ಫುಲ್, ಪಾಪ್ಯುಲರ್ ಕಪಲ್ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ 'ಕಾಫಿ ವಿತ್ ಕರಣ್'ನ ಮೊದಲ ಸಂಚಿಕೆಯಲ್ಲಿ ಅತಿಥಿಗಳಾಗಿ ಆಗಮಿಸಿದ್ದರು. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸಂಪಾದಿಸಿರುವ 'ದೀಪ್ವೀರ್' ಜೋಡಿ ಜನಪ್ರಿಯ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಅಭಿಮಾನಿಗಳ ಖುಷಿಗೆ ಕಾರಣವಾಯ್ತು. ಆದ್ರೆ ಟ್ರೋಲರ್ಗಳು ಆಟ ಶುರು ಮಾಡಿದ್ದ ಬೆನ್ನಲ್ಲೇ, ದೀಪಿಕಾ ಪಡುಕೋಣೆ ತಮ್ಮದೇ ಶೈಲಿಯಲ್ಲಿ ಟ್ರೋಲರ್ಗಳಿಗೆ ಗೂಸಾ ಕೊಟ್ಟರು.
ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ನಿರೂಪಣೆಯಲ್ಲಿ ಮೂಡಿಬರುವ 'ಕಾಫಿ ವಿತ್ ಕರಣ್' ಸೀಸನ್ 8 ಅಕ್ಟೋಬರ್ 26ರಂದು ಆರಂಭಗೊಂಡಿದೆ. 20 ವರ್ಷಗಳಿಂದ ಪ್ರಸಾರವಾಗುತ್ತಿರುವ ಚಾಟ್ ಶೋಗೆ ದೊಡ್ಡ ಸಂಖ್ಯೆಯ ಪ್ರೇಕ್ಷಕರಿದ್ದಾರೆ. ತಮ್ಮ ಮೆಚ್ಚಿನ ನಟ, ನಟಿಯರ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿರುತ್ತಾರೆ. ಅದರಂತೆ ಸೀಸನ್ 8ರ ಮೊದಲ ಅತಿಥಿಗಳಾಗಿ 'ದೀಪ್ವೀರ್' ಜೋಡಿ ಆಗಮಿಸಿದ್ದರು.
ಅಭಿಮಾನಿಗಳು ಕಾರ್ಯಕ್ರಮ ಇಷ್ಟಪಟ್ಟರೆ, ಕೆಲ ನೆಟ್ಟಿಗರು ಈ ಜೋಡಿಯನ್ನು ಅದರಲ್ಲೂ ದೀಪಿಕಾ ಪಡುಕೋಣೆ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ನಟಿಯ ಕೆಲ ಕಾಮೆಂಟ್ಗಳೇ ಇದಕ್ಕೆ ಕಾರಣ. ಇದಕ್ಕೆ ಪ್ರತಿಕ್ರಿಯೆಯಾಗಿ ದೀಪಿಕಾ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಟ್ರೆಂಡ್ ಫಾಲೋ ಮಾಡಿದ ಪಠಾಣ್ ಬ್ಯೂಟಿ, ಸೋ ಬ್ಯೂಟಿಫುಲ್, ಸೋ ಎಲಿಗೆಂಟ್, ಜಸ್ಟ್ ಲುಕಿಂಗ್ ಲೈಕ್ ಅ ವಾವ್ಹ್, ಜಸ್ಟ್ ಲುಕಿಂಗ್ ಲೈಕ್ ಅ ವಾವ್ಹ್ ಎಂದು ಹೇಳಿದ್ದಾರೆ.