ಬಾಲಿವುಡ್‌ನ ಪವರ್ಫುಲ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಒಟ್ಟಿಗೆ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ನಟ ರಣ್ವೀರ್ ಸಿಂಗ್ ತಮ್ಮ ಅಧಿಕೃತ ಇನ್ಸ್ಟಾ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಸಿನಿಮಾ ಅಥವಾ ಸೀರಿಸ್ನ ಟೀಸರ್ನಂತಿರುವ ಈ ವಿಡಿಯೋದಲ್ಲಿ ಪತ್ನಿ ದೀಪಿಕಾ ಪಡುಕೋಣೆ ಅಲ್ಲದೇ ಸೌತ್ ಸಿನಿಮಾ ರಂಗದ ಪ್ರತಿಭಾನ್ವಿತ ನಟರು ಕೂಡ ಕಾಣಿಸಿಕೊಂಡಿದ್ದಾರೆ.
ಆರ್‌ಆರ್‌ಆರ್ ಸ್ಟಾರ್ ರಾಮ್ ಚರಣ್ ಮತ್ತು ಪೊನ್ನಿಯಿನ್ ಸೆಲ್ವನ್ ನಟಿ ತ್ರಿಶಾ ಕೂಡ ಬಹಿರಂಗಪಡಿಸದ ಪ್ರಾಜೆಕ್ಟ್ನ ಟೀಸರ್ನಲ್ಲಿ ಕಾಣಿಸಿಕೊಂಡಿದ್ದಾರೆ. ರಣ್ವೀರ್ ಅವರು ದೀಪಿಕಾ, ರಾಮ್ ಚರಣ್ ಮತ್ತು ತ್ರಿಶಾ ಅವರನ್ನೊಳಗೊಂಡ ಟೀಸರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಪ್ರಶ್ನೆಗಳ ಮಳೆ ಸುರಿಸಿದ್ದಾರೆ.
ಭಾನುವಾರ ಗಲ್ಲಿಭಾಯ್ ನಟ ರಣ್ವೀರ್ ಸಿಂಗ್ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ತಮ್ಮ ಪತಿ ಕಾಣೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೀಪಿಕಾ ದೂರು ನೀಡುವ ದೃಶ್ಯದಿಂದ ಆರಂಭವಾಗುವ ಈ ಕುತೂಹಲಕಾರಿ ವಿಡಿಯೋದ ಮುಂದಿನ ಶಾಟ್‌ನಲ್ಲಿ ರಣ್ವೀರ್ "ಗುರಿ"ಯನ್ನು ಬೆನ್ನಟ್ಟುತ್ತಾರೆ. ರಾಮ್ ಚರಣ್ ಚೇಸಿಂಗ್ ಸೀನ್ನಲ್ಲಿದ್ದು, ಕೊನೆಯಲ್ಲಿ ತ್ರಿಶಾ ಪೊಲೀಸ್ ಠಾಣೆಯಲ್ಲಿ ಕಾಣಿಸಿಕೊಳ್ಳುತ್ತಾರೆ.
ವಿಡಿಯೋದಲ್ಲಿ ಬರುವ ಲಿಖಿತ ಸಾಲುಗಳು ನೋಡುಗರ ಕುತೂಹಲ ಹೆಚ್ಚಿಸಿದೆ. ಕೆಲ ರಹಸ್ಯಗಳು ರಹಸ್ಯಗಳಾಗಿಯೇ ಉಳಿಯಬೇಕು, ಕೆಲ ಪ್ರಶ್ನೆಗಳಿಗೆ ಉತ್ತರ ಸಿಗದಿರುವುದೇ ಉತ್ತಮ, ಕೆಲವು ರಹಸ್ಯಗಳನ್ನು ಬಿಡಿಸದೇ ಇರುವುದು ಉತ್ತಮ ಎಂಬ ಬರಹ ವಿಡಿಯೋದ ನಡುವೆ ಬಂದಿದೆ. ವಿಡಿಯೋ ಶೇರ್ ಮಾಡಿ, ಶೀಘ್ರದಲ್ಲೇ ಹೊರಬರಲಿದೆ ಮತ್ತು "ರಹಸ್ಯ" ಬಹಿರಂಗಗೊಳ್ಳುತ್ತದೆ ಎಂದು ರಣ್ವೀರ್ ತಮ್ಮ ಶೀರ್ಷಿಕೆಯಲ್ಲಿ ಉಲ್ಲೇಖಿಸಿರುವುದರಿಂದ ಅಭಿಮಾನಿಗಳು ಈ ಕುರಿತ ಡೀಟೆಲ್ಸ್ಗೆ ಹೆಚ್ಚು ಕಾಯಬೇಕಾಗಿಲ್ಲ.