ಕರ್ನಾಟಕ

karnataka

ETV Bharat / entertainment

ಆಸ್ಕರ್‌ ವೇದಿಕೆಯಲ್ಲಿ ದೀಪಿಕಾ ಪಡುಕೋಣೆ ಮೋಹಕ ನೋಟ - Oscars award 2023

ಆಸ್ಕರ್ 2023 ಸಮಾರಂಭದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಭಾಗಿಯಾಗಿದ್ದು, ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿದ್ದಾರೆ. ತಮ್ಮ ಫೊಟೋಗಳನ್ನು ಇನ್ಸ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Deepika Padukon
ದೀಪಿಕಾ ಪಡುಕೋಣೆ

By

Published : Mar 13, 2023, 7:49 AM IST

Updated : Mar 13, 2023, 8:54 AM IST

ಲಾಸ್ ಏಂಜಲೀಸ್ (ಯುಎಸ್): ಇಡೀ ವಿಶ್ವವೇ ಎದುರು ನೋಡುತ್ತಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ 2023 ಲಾಸ್‌ ಏಂಜಲಿಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಇಂದು ನಡೆಯುತ್ತಿದೆ. ಈ ಪ್ರತಿಷ್ಟಿತ ಸಮಾರಂಭದಲ್ಲಿ ಬಾಲಿವುಡ್​ನ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ ಕೂಡ ಭಾಗಿಯಾಗಿದ್ದರು. ಕಪ್ಪು ಬಣ್ಣದ ಶೋಲ್ಡರ್ ವೆಲ್ವೆಟ್ ಗೌನ್ ಧರಿಸಿ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿದ ಅವರು ಮನಮೋಹಕ ನೋಟ ಬೀರಿದರು.

ಆಸ್ಕರ್ ಸಮಾರಂಭದ ಸರಣಿ ಫೋಟೋಗಳನ್ನು ಇನ್ಸ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿರುವ 'ಪಠಾಣ್' ಸಿನಿಮಾದ ನಟಿ, "ಆಸ್ಕರ್ 95" ಎಂಬ ಶೀರ್ಷಿಕೆ ನೀಡಿದ್ದಾರೆ. ಫೊಟೋಗಳಿಗೆ ಅಭಿಮಾನಿಗಳು ಮನಸೋತಿತ್ತು, ರೆಡ್ ಹಾರ್ಟ್ಸ್ ಮತ್ತು ಫೈರ್ ಎಮೋಜಿ ನೀಡಿ ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹಾಲಿವುಡ್‌ನ ಖ್ಯಾತ ಕಲಾವಿದರ ಜೊತೆ ಭಾರತದ ನಟಿ ಕೂಡ ಮಿಂಚುತ್ತಿರುವುದು ವಿಶೇಷವಾಗಿದೆ.

ಇದನ್ನೂ ಓದಿ:ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ವಿಭಾಗ: ಆಸ್ಕರ್‌ ಪ್ರಶಸ್ತಿ ಗೆದ್ದ ಭಾರತದ 'ದ ಎಲೆಫೆಂಟ್‌ ವಿಸ್ಪರರ್ಸ್‌'!

ಆಸ್ಕರ್ 2023ರ ರೆಡ್​ ಕಾರ್ಪೆಟ್​ನಲ್ಲಿ ದೀಪಿಕಾ ಪಡುಕೋಣೆ ಬಳಿಕ ಡ್ವೇನ್ ಜಾನ್ಸನ್, ಮೈಕೆಲ್ ಬಿ. ಜೋರ್ಡಾನ್, ರಿಜ್ ಅಹ್ಮದ್, ಎಮಿಲಿ ಬ್ಲಂಟ್, ಗ್ಲೆನ್ ಕ್ಲೋಸ್, ಟ್ರಾಯ್ ಕೋಟ್ಸೂರ್, ಡ್ವೇನ್ ಜಾನ್ಸನ್, ಜೆನ್ನಿಫರ್ ಕೊನ್ನೆಲ್ಲಿ, ಸ್ಯಾಮ್ಯುಯೆಲ್ ಎಲ್.ಜಾಕ್ಸನ್, ಮೆಲಿಸ್ಸಾ ಮೆಕಾರ್ಥಿ, ಜೊಯ್ ಸಲ್ಡಾನಾ, ಡೊನ್ನಿ ಯೆನ್, ಜೊನಾಥನ್ ಮೇಜರ್ಸ್ ಮತ್ತು ಜೊನಾಥನ್ ಮೇಜರ್ಸ್ ಕೂಡ ಹೆಜ್ಜೆ ಹಾಕಿ ಗಮನ ಸೆಳೆದರು.

ಇದನ್ನೂ ಓದಿ:ಇತಿಹಾಸ ಸೃಷ್ಟಿಸಿದ 'ಕೆ ಹುಯ್ ಕ್ವಾನ್': ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಗೆದ್ದ ಮೊದಲ ಏಷ್ಯಾ ನಟ

ಪ್ರಸ್ತುತ ವರ್ಷ ನಡೆಯುತ್ತಿರುವ ಆಸ್ಕರ್‌ ಅವಾರ್ಡ್ಸ್‌ ಭಾರತಕ್ಕೆ ವಿಶೇಷವಾಗಿದೆ. ಒಂದಲ್ಲ, ಮೂರು ಮಹತ್ವದ ಭಾರತೀಯ ಚಲನಚಿತ್ರಗಳು ಪ್ರತಿಷ್ಟಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿವೆ. ಇದರಲ್ಲಿ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ಕಾರ್ತಿಕಿ ಗೋನ್ಸಾಲ್ವೇಸ್‌ ಅವರ ‘ದ ಎಲಿಫೆಂಟ್‌ ವಿಸ್ಪರರ್ಸ್‌’ ಈಗಾಗಲೇ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಹಾಗೆಯೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದ ಮತ್ತು ಎಸ್.ಎಸ್.ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಆರ್​ಆರ್​ಆರ್​ ಸಿನಿಮಾದ ನಾಟು ನಾಟು ನೃತ್ಯ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್‌ ಗೆದ್ದುಕೊಂಡಿದೆ. ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ಶೌನಕ್‌ ಸೇನ್‌ ಅವರ ‘ಆಲ್‌ ದ ಬ್ರೀದ್ಸ್‌’ ಕೂಡ ನಾಮ ನಿರ್ದೇಶನಗೊಂಡಿತ್ತು. ಆದರೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ.

ಇದನ್ನೂ ಓದಿ:ಪ್ಯಾರಿಸ್​ ಫ್ಯಾಷನ್​ ವೀಕ್​ 2023: ಸಾಗರಾದಾಚೆ ಅಂದ ಚೆಲ್ಲಿದ ಬಾಲಿವುಡ್​ ಬೆಡಗಿಯರು

ಇದನ್ನೂ ಓದಿ:'ನಾಟು ನಾಟು' ಸಂಗೀತ ಸಂಯೋಜಕ ಎಂಎಂ ಕೀರವಾಣಿ ಕುರಿತ ಆಸಕ್ತಿದಾಯಕ ವಿಚಾರಗಳು ಗೊತ್ತಾ?

Last Updated : Mar 13, 2023, 8:54 AM IST

ABOUT THE AUTHOR

...view details