ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಶ್ವದ 9ನೇ ಸುಂದರಿ ಎಂಬ ಖ್ಯಾತಿ ಗಳಿಸಿರುವ ಬಾಲಿವುಡ್ ಚಿತ್ರರಂಗದ ಪದ್ಮಾವತಿ ಆಗಾಗ ತನ್ನ ಸ್ಟೈಲಿಶ್ ಲುಕ್ನಿಂದ ಸದ್ದು ಮಾಡುತ್ತಿರುತ್ತಾರೆ.
ಸ್ಟೈಲಿಶ್ ಲುಕ್ನಲ್ಲಿ ಗಮನ ಸೆಳೆದ ಬಾಲಿವುಡ್ ಪದ್ಮಾವತಿ - ದೀಪಿಕಾ ಪಡುಕೋಣೆ ಫೋಟೋಗಳು
ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಬೋಲ್ಡ್ ಬ್ಯೂಟಿ ದೀಪಿಕಾ ಪಡುಕೋಣೆ ಸೆರೆಯಾಗಿದ್ದಾರೆ.
ನಟಿ ದೀಪಿಕಾ ಪಡುಕೋಣೆ
ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಬೋಲ್ಡ್ ಬ್ಯೂಟಿ ದೀಪಿಕಾ ಸೆರೆಯಾಗಿದ್ದಾರೆ. ಬ್ಲೂ ಪ್ಯಾಂಟ್, ಆರೆಂಜ್ ಫುಲ್ ಸ್ಲೀವ್ ಟೀ ಶರ್ಟ್ ಧರಿಸಿ ಬಂದ ನಟಿ ಸಖತ್ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬಳಿಕ ಏರ್ಪೋರ್ಟ್ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಫೋಟೋ ತೆಗೆಸಿಕೊಂಡರು.
ಇದನ್ನೂ ಓದಿ:ಫಿಫಾ ಫ್ಯಾನ್ ಫೆಸ್ಟ್‌ನಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ ರಂಗು