ಬಾಲಿವುಡ್ ಚಿತ್ರರಂಗದ ಕಿಂಗ್ ಖಾನ್ ಮತ್ತು ಪದ್ಮಾವತಿಯ ಬಹುನಿರೀಕ್ಷಿತ ಪಠಾಣ್ ಸಿನಿಮಾದ ಮೊದಲ ಟ್ರ್ಯಾಕ್ ''ಬೇಶರಂ ರಂಗ್'' ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾದ ಬಿಸಿ ಏರಿಸಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಕೆಮಿಸ್ಟ್ರಿ ಮಾತ್ರ ಸಖತ್ ವರ್ಕ್ ಔಟ್ ಆಗಿದೆ. ಈ ಜೋಡಿ ಹಾಡಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಡ್ಯಾನ್ಸ್ ಜೊತೆಗೆ ರೊಮ್ಯಾನ್ಸ್ ''ಬೇಶರಂ ರಂಗ್''ನ ಬಿಸಿ ಏರಿಸಿದೆ. ಈ ಹಾಡಿನ ಸಕ್ಸಸ್ಗೆ ಕೇವಲ ದೀಪಿಕಾ, ಎಸ್ಆರ್ಕೆ ಮಾತ್ರ ಕಾರಣರಲ್ಲ. ತೆರೆ ಹಿಂದೆ ಕೆಲಸ ಮಾಡಿರುವ ನೃತ್ಯ ಸಂಯೋಜಕಿ ವೈಭವಿ ಮರ್ಚೆಂಟ್ ಅವರ ಪಾತ್ರ ಕೂಡ ಮಹತ್ವದ್ದು.
''ಬೇಶರಂ ರಂಗ್'' ಸೋಮವಾರ ಬಿಡುಗಡೆ ಆಗಿದೆ. ಕುಮಾರ್ ಅವರ ಸಾಹಿತ್ಯವನ್ನು ವಿಶಾಲ್ ಮತ್ತು ಶೇಖರ್ ಸಂಯೋಜಿಸಿದ್ದಾರೆ. ದೀಪಿಕಾ ಬಿಕಿನಿ, ಮೋನೋಕಿನಿಯಲ್ಲಿ, ಶಾರುಖ್ ಬೀಚ್ ಶರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. 57ರ ಪ್ರಾಯದಲ್ಲೂ ಕಿಂಗ್ ಖಾನ್ ಯಾವ ಯಂಗ್ಸ್ಟರ್ಗೂ ಕಡಿಮೆ ಇಲ್ಲದಂತೆ ಕಾಣಿಸಿಕೊಂಡಿದ್ದಾರೆ.
ಬಿಕಿನಿಯಲ್ಲಿ ಬೋಲ್ಡ್ ಬ್ಯೂಟಿ
ನೃತ್ಯ ಸಂಯೋಜಕಿ ವೈಭವಿ ಮರ್ಚೆಂಟ್, ಪರದೆ ಮೇಲೆ ನಟಿಯರನ್ನು ಹಾಟೆಸ್ಟ್ ಆಗಿ ಪ್ರಸ್ತುತ ಪಡಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಬಂಟಿ ಔರ್ ಬಬ್ಲಿಯ 'ಕಜ್ರಾ ರೇ' ಹಾಡಿನಲ್ಲಿ ಐಶ್ವರ್ಯಾ ರೈ ಬಚ್ಚನ್, ಧೂಮ್ 3ಯ ಕಮಲಿ ಹಾಡಿನಲ್ಲಿ ಕತ್ರಿನಾ ಕೈಫ್ ಇಂದ ಹಿಡಿದು ಪಠಾಣ್ನ ಬೇಷರಮ್ ರಂಗ್ನ ದೀಪಿಕಾರವರೆಗೆ ಕೆಲಸ ಮಾಡಿದ್ದಾರೆ. ದೀಪಿಕಾ ಅವರೊಂದಿಗೆ ಮೊದಲ ಹಾಡು ಮಾಡಿರುವ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಬಿಕಿನಿಯಲ್ಲಿ ಬೋಲ್ಡ್ ಬ್ಯೂಟಿ
ದೀಪಿಕಾರನ್ನು ಭಾರತ ಇದುವರೆಗೆ ತೆರೆಯ ಮೇಲೆ ನೋಡಿರದ ಹಾಟೆಸ್ಟ್ ಹೀರೋಯಿನ್ ಆಗಿ ಕಾಣುವಂತೆ ಮಾಡುವಲ್ಲಿ ಶ್ರಮ ವಹಿಸಿದ್ದೇನೆ. ಈ ಹಾಡಿನಲ್ಲಿ ದೀಪಿಕಾ ಆರಾಮದಾಯಕವಾಗಿ ಕೆಲಸ ಮಾಡಿದ್ದನ್ನು ನೋಡಿ ಆಶ್ಚರ್ಯವಾಯಿತು ಎಂದು ವೈಭವಿ ಹೇಳಿದರು.
ದೀಪಿಕಾ ಶಾರುಖ್ ರೊಮ್ಯಾನ್ಸ್
ದೀಪಿಕಾರನ್ನು ಹಿಂದೆಂದೂ ತೆರೆ ಮೇಲೆ ಯಾರೂ ಪ್ರಸ್ತುತಪಡಿಸದ ರೀತಿಯಲ್ಲಿ ನಾನು ಪ್ರಸ್ತುತಪಡಿಸಲು ಬಯಸಿದ್ದೆ. ಶಲೀನಾ ನಥಾನಿ ವಸ್ತ್ರವಿನ್ಯಾಸ ಮಾಡಿದ್ದಾರೆ. ದೀಪಿಕಾ ಶಲೀನಾ ಅವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ದೀಪಿಕಾ ತಮ್ಮ ಅಂದ, ಮೈ ಬಣ್ಣ ವಿಷಯವಾಗಿ ಯಾವ ಮುಜುಗರವನ್ನೂ ಹೊಂದಿಲ್ಲ. ಬಹಳ ಕಂಫರ್ಟಬಲ್ ಆಗಿ ಕೆಲಸ ಮಾಡಿದ್ದಾರೆ. ಪ್ರತಿ ಫ್ರೇಮ್‌ನಲ್ಲಿಯೂ ಸುಂದರವಾಗಿ, ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆಂದು ವೈಭವಿ ತಿಳಿಸಿದರು.
ಇದನ್ನೂ ಓದಿ:ನ್ಯೂ ಲುಕ್ನಲ್ಲಿ ಬಿಟೌನ್ ಬೆಡಗಿ ದೀಪಿಕಾ ಪಡುಕೋಣೆ; ಜಾಲತಾಣಗಳಲ್ಲಿ ಟ್ರೆಂಡಿಂಗ್ ಆದ ನಟಿಯ ಬಿಕಿನಿ ಸ್ಟಿಲ್ಸ್
"ದೀಪಿಕಾ ಅವರು ಬೇಷರಂ ರಂಗ್‌ನಲ್ಲಿ ಅದ್ಭುತವಾಗಿ ಕಾಣಲು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಅವರು ತಮ್ಮ ತರಬೇತುದಾರರು ಹೇಳಿದ್ದನ್ನು ತಪ್ಪದೇ ಪಾಲಿಸಿದ್ದಾರೆ. ಈ ಹಾಡಿನಲ್ಲಿ ಬಿಕಿನಿ ಧರಿಸಿ ಉತ್ತಮವಾಗಿ ಹೆಜ್ಜೆ ಹಾಕಿದ್ದಾರೆ ಎಂದು ತಿಳಿಸಿದರು.
ಸುಮಾರು 5 ವರ್ಷಗಳ ವಿರಾಮದ ನಂತರ ಶಾರುಖ್ ಖಾನ್ ತಮ್ಮ ಹೊಸ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ದೀಪಿಕಾ ಜೊತೆಗಿನ ಈ ಪಠಾಣ್ ಚಿತ್ರವನ್ನು ಜನವರಿ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದು, ಯಶರಾಜ್ ಫಿಲ್ಮ್ಸ್ ನಿರ್ಮಿಸಿದೆ. ಜಾನ್ ಅಬ್ರಹಾಂ ಕೂಡ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.