ಲಾಸ್ ಏಂಜಲೀಸ್‌ನಲ್ಲಿ ನಡೆದ ವಿಶ್ವ ಪ್ರತಿಷ್ಠಿತ ಆಸ್ಕರ್ 2023ರಲ್ಲಿ ಭಾಗಿಯಾಗಿ ಭಾರತದ ಕೀರ್ತಿ ಹೆಚ್ಚಿಸಿದ ನಟಿ ದೀಪಿಕಾ ಪಡುಕೋಣೆ ಮನೆಗೆ ಮರಳಿದ್ದಾರೆ. ಶುಕ್ರವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅಭಿನಂದನೆ ತಿಳಿಸಿದ ಪಾಪರಾಜಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ನಸುನಕ್ಕು ಮುನ್ನಡೆದರು.
ದೀಪಿಕಾ ಏರ್ಪೋರ್ಟ್ ಲುಕ್ ವೈರಲ್: ಏರ್ಪೋರ್ಟ್ನಲ್ಲಿ ಹೆಚ್ಚಾಗಿ ಕೂಲ್ ಲುಕ್ನಲ್ಲಿ ಕಾಣಸಿಗುತ್ತಾರೆ ವಿಶ್ವದ ಒಂಭತ್ತನೇ ಸುಂದರಿ ಖ್ಯಾತಿಯ ದೀಪಿಕಾ ಪಡುಕೋಣೆ. ಈ ಬಾರಿ ಬ್ಲ್ಯಾಕ್ ಡ್ರೆಸ್, ಶೂನಲ್ಲಿ ಸಖತ್ ಕ್ಲಾಸಿ ಲುಕ್ನಲ್ಲಿ ಎಲ್ಲರ ಗಮನ ಸೆಳೆದರು. ದೀಪಿಕಾ ಪಡುಕೋಣೆ ಏರ್ಪೋರ್ಟ್ ಲುಕ್ ಸಖತ್ ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿದೆ.
ಅಭಿಮಾನಿಗಳ ಮೆಚ್ಚುಗೆ..ದೀಪಿಕಾ ಪಡುಕೋಣೆ ಅವರ ಏರ್ಪೋರ್ಟ್ ಬ್ಲ್ಯಾಕ್ ಲುಕ್ ನೆಟಿಜನ್‌ಗಳ ಹೃದಯ ಕದ್ದಿದ್ದು, ಅವರ ಚಿತ್ರಗಳಿಗೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು, "ಎಷ್ಟು ಮುದ್ದಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ವಿಮಾನ ನಿಲ್ದಾಣದ ನೋಟಕ್ಕೆ ಬಂದಾಗ ''ದೀಪಿಕಾಗೆ ಉತ್ತಮವಾದದ್ದು ತಿಳಿದಿದೆ" ಎಂದು ಮತ್ತೊಬ್ಬರು ತಿಳಿಸಿದ್ದಾರೆ.
ಆಸ್ಕರ್ ವೇದಿಕೆಯಲ್ಲಿದೀಪಿಕಾ ಪಡುಕೋಣೆ:ಬಾಲಿವುಡ್ ಮಸ್ತಾನಿ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಆಸ್ಕರ್ ವೇದಿಕೆಯಲ್ಲಿ ಪ್ರೆಸೆಂಟರ್ ಪಾತ್ರ ಅಲಂಕರಿಸಿದ್ದರು. ವೇದಿಕೆಯಲ್ಲಿ 'ನಾಟು ನಾಟು' ಗಾಯಕರನ್ನು ಪರಿಚಯಿಸಿದರು ಮತ್ತು ಜೋರಾದ ಹರ್ಷೋದ್ಘಾರಗಳ ನಡುವೆ ಹಾಡಿನ ಬಗ್ಗೆ ಪ್ರೇಕ್ಷಕರಿಗೆ ತಿಳಿಸಿದರು. 'ನಾಟು ನಾಟು' ಹಾಡು ವಿಶ್ವದಲ್ಲಿ ಜನಪ್ರಿಯತೆ ಗಳಿಸಿದ್ದರ ಬಗ್ಗೆಯೂ ಮಾತನಾಡಿದ್ದರು. ಡಿಸೈನರ್ ಲೇಬಲ್ ಲೂಯಿಸ್ ವಿನ್ಯಾಸಗೊಳಿಸಿದ್ದ ಆಫ್ ಶೋಲ್ಡರ್ ಗೌನ್ ಧರಿಸಿ ಎಲ್ಲರ ಗಮನ ಸೆಳೆದಿದ್ದರು.