ಕರ್ನಾಟಕ

karnataka

ETV Bharat / entertainment

ಫೈಟರ್​ ಚಿತ್ರತಂಡ ಸೇರಲು ವಿದೇಶಕ್ಕೆ ತೆರಳಿದ ದೀಪಿಕಾ: ಹೃತಿಕ್​ ಜೊತೆ ಇದೇ ಮೊದಲ ಬಾರಿ ತೆರೆ ಹಂಚಿಕೆ - ಮೊದಲ ಬಾರಿಗೆ ದೀಪಿಕಾ ಹೃತಿಕ್​ ತೆರೆ

2024ರ ಜನವರಿಯಲ್ಲಿ ಈ ಚಿತ್ರ ಬಿಡುಗಡೆ ಕಾಣಲಿದೆ. ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ದೀಪಿಕಾ-ಹೃತಿಕ್​ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಫೈಟರ್​ ಚಿತ್ರತಂಡ ಸೇರಲು ಹಾರಿದ ದೀಪಿಕಾ; ಹೃತಿಕ್​ ಜೊತೆ ಇದೇ ಮೊದಲ ಬಾರಿ ತೆರೆ ಹಂಚಿಕೆ
deepika-jets-off-to-join-the-film-crew-of-fighter

By

Published : Nov 17, 2022, 4:28 PM IST

ಮುಂಬೈ: ತಮ್ಮ ಬಹುನಿರೀಕ್ಷಿತ ಆಕ್ಷನ್​ ಥ್ರಿಲ್ಲರ್​​​ ಚಿತ್ರ 'ಫೈಟರ್'​ಗಾಗಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೊಣೆ ವಿದೇಶಕ್ಕೆ ತೆರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಲೇಡಿಬಾಸ್​ ಲುಕ್​ನಲ್ಲಿ ಕಂಡ ಪಿಕು ನಟಿ, ಕಪ್ಪು-ಬಿಳುಪಿನ ಉಡುಗೆಯಲ್ಲಿ ಗಮನಸೆಳೆದರು.

ಇತ್ತೀಚೆಗಷ್ಟೇ ನಟಿ ಹೃತಿಕ್​ ರೋಷನ್​ 'ಫೈಟರ್'​ ಚಿತ್ರದ ಶೂಟಿಂಗ್​​ ಕಾರ್ಯಾರಂಭದ ಕುರಿತು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಸದ್ಯ ಈ ತಂಡವನ್ನು ಈಗ ನಟಿ ದೀಪಿಕಾ ಪಡುಕೋಣೆ ಸೇರಿದ್ದಾರೆ. ಈ ಸಿನಿಮಾವನ್ನು ಸಿದ್ದಾರ್ಥ್ ಆನಂದ್​ ನಿರ್ದೇಶನ ಮಾಡುತ್ತಿದ್ದಾರೆ.

ದಿಪೀಕಾ - ಹೃತಿಕ್​ ಹೊರತಾಗಿ ಚಿತ್ರದಲ್ಲಿ ಅನಿಲ್​ ಕಪೂರ್​ ಕೂಡ ಲೀಡ್​ ರೋಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಭಾರತದ ಮೊದಲ ಏರಿಯಲ್​ ಆಕ್ಷನ್ ಥ್ರಿಲ್ಲರ್​ ಸಿನಿಮಾವಾಗಿದೆ​

ಈ ಚಿತ್ರದ ಮೊದಲ ಫೋಸ್ಟರ್​ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. 2024ರ ಜನವರಿಯಲ್ಲಿ ಈ ಚಿತ್ರ ಬಿಡುಗಡೆ ಕಾಣಲಿದೆ. ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ದೀಪಿಕಾ - ಹೃತಿಕ್​ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಹೃತಿಕ್​ ಅಭಿನಯದ ತಮಿಳು ರಿಮೇಕ್​ ಆಧಾರಿತ 'ವಿಕ್ರಮ್​ ವೇದಾ' ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರಕ್ಕೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಈ ಸಿನಿಮಾದ ಜೊತೆಯಲ್ಲಿಯೇ ಸಿದ್ಧಾರ್ಥ್​ ಆನಂದ್​ ನಿರ್ದೇಶನದ ಆಕ್ಷನ್​ ಥ್ರಿಲ್ಲರ್​ 'ಪಾಠಾಣ್'​ನಲ್ಲೂ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ. ಶಾರುಖ್​​ ಖಾನ್​, ಜಾನ್​ ಅಬ್ರಹಾಂ ಜೊತೆ ಡಿಂಪಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಮುಂದಿನ ವರ್ಷ ಜನವರಿಗೆ ಅಂದರೆ, 2023ರ ಜನವರಿ 25ಕ್ಕೆ ಬಿಡುಗಡೆಯಾಗಲಿದೆ. ​

ಇದನ್ನೂ ಓದಿ: ಈ ಕ್ರಿಕೆಟ್‌ ಆಟಗಾರ್ತಿಗೆ ಅನುಷ್ಕಾ ಶರ್ಮಾ ಅಂದ್ರೆ ಅಚ್ಚುಮೆಚ್ಚಂತೆ

ABOUT THE AUTHOR

...view details