ಸ್ಯಾಂಡಲ್ವುಡ್ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಹಾಗೂ ರಾಮು ಅವರ ಪುತ್ರಿ ಆರಾಧನಾ ರಾಮ್ 'ಕಾಟೇರ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಗೊತ್ತಿರುವ ವಿಚಾರ. ಈಗಾಗಲೇ ಈ ಚಿತ್ರದ ಶೂಟಿಂಗ್ನಲ್ಲಿ ಆರಾಧನಾ ತೊಡಗಿಸಿಕೊಂಡಿದ್ದಾರೆ. 'ಕಾಟೇರ'ದ ವಿಭಿನ್ನ ಪೋಸ್ಟರ್ಗಳು ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದೆ. ಇದೀಗ ಆರಾಧನಾ ರಾಮ್ ಬೆಳಕಿನ ಹಬ್ಬ ದೀಪಾವಳಿಯನ್ನು ಅತ್ಯಂತ ಅದ್ಧೂರಿಯಾಗಿ ಮತ್ತು ಸಾಂಪ್ರದಾಯಿಕವಾಗಿ ಆಚರಿಸಿದ್ದಾರೆ. ಅಮ್ಮ ಮಾಲಾಶ್ರೀ ಜೊತೆ ನಿಂತು ಫೋಟೋಶೂಟ್ ಮಾಡಿಸಿದ್ದಾರೆ.
ಈ ವರ್ಷದ ದೀಪಾವಳಿ ಮಾಲಾಶ್ರೀ ಹಾಗೂ ರಾಮು ಮನೆಯಲ್ಲಿ ಸಂಭ್ರಮ ಹೆಚ್ಚಿಸಿದೆ. ಈ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಮಾಲಾಶ್ರೀ ಅವರು ಮಗಳು ಆರಾಧನಾ ಜೊತೆ ಹೊಸ ಲುಕ್ನಲ್ಲಿ ಮಿಂಚಿದ್ದಾರೆ. ಅಮ್ಮ ಮಗಳು ನಮ್ಮ ದೇಶಿ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದರ ಜೊತೆಗೆ ಮೈಸೂರಿನ ರೇಷ್ಮೆ ಸೀರೆಯಲ್ಲಿ ಮಿಂಚಿದ್ದಾರೆ. ಬೊಂಬಾಟ್ ಫೋಟೋಶೂಟ್ ಮಾಡಿಸಿದ್ದಾರೆ.
ಈ ಕಲರ್ಫುಲ್ ಫೋಟೋಶೂಟ್ ಬಗ್ಗೆ ಮಾತನಾಡಿರುವ ಮಾಲಾಶ್ರೀ, "ನಾಡಿನ ಸಮಸ್ತ ಜನತೆಗೆ ದೀಪಾವಳಿ ಶುಭಾಶಯ ತಿಳಿಸುತ್ತೇನೆ. ಬಹಳ ವರ್ಷಗಳ ನಂತರ ನಾನು ಫೋಟೋಶೂಟ್ ಮಾಡಿಸಿಕೊಂಡಿದ್ದೇನೆ. ಮಗಳ ಜೊತೆಗೆ ಫೋಟೋ ತೆಗೆಸಿಕೊಂಡಿರುವುದು ಹೆಚ್ಚು ಖುಷಿಯಾಗಿದೆ. ಈ ವರ್ಷ ನನ್ನ ಮಗಳು ಕಾಟೇರ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾಳೆ. ನನಗೆ ತಾವು ನೀಡಿರುವ ಪ್ರೋತ್ಸಾಹ ನನ್ನ ಮಗಳಿಗೂ ನೀಡಿ" ಎಂದು ಹೇಳಿದರು.