ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರ ಚಿತ್ರಮಂದಿರಗಳಲ್ಲಿ ಯಶಸ್ಸಿನ ಧೂಳೆಬ್ಬಿಸುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಮೂರೇ ದಿನಗಳಲ್ಲಿ 300 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಬರೆದ ಚಿತ್ರವಿದು. ಚಿತ್ರಮಂದಿರಗಳು ಪ್ರೇಕ್ಷಕರಿಂದ ಭರ್ತಿಯಾಗುತ್ತಿದ್ದು ಥಿಯೇಟರ್ ಮಾಲೀಕರು ಉತ್ಸವ ಮಾಡುತ್ತಿದ್ದಾರೆ. ಮುಂಬೈನ ಫೇಮಸ್ ಮರಾಠ ಮಂದಿರ್ ಥಿಯೇಟರ್ನಲ್ಲಿ ಪಠಾಣ್ ಜೊತೆಗೆ ಶಾರುಖ್ ಸೂಪರ್ ಹಿಟ್ ಮೂವಿ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಅನ್ನು ಏಕಕಾಲದಲ್ಲಿ ಪ್ರದರ್ಶಿಸಲಾಗುತ್ತಿದೆ.
ಮನೋಜ್ ದೇಸಾಯಿ ಸಂತಸ:ಮರಾಠ ಮಂದಿರ್ ಚಿತ್ರಮಂದಿರದ ಕಾರ್ಯನಿರ್ವಾಹಕ ನಿರ್ದೇಶಕ, G7 ಮಲ್ಟಿಪ್ಲೆಕ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್ ದೇಸಾಯಿ ಮಾತನಾಡಿ, "ಇಂತಹ ಉತ್ಸಾಹವು ಬಹಳ ವರ್ಷಗಳ ನಂತರ ಕಂಡುಬಂದಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
ಒಂದೇ ಚಿತ್ರಮಂದಿರದಲ್ಲಿ ಶಾರುಖ್ ಸಿನಿಮಾಗಳು: ಜಿ7 ಮಲ್ಟಿಪ್ಲೆಕ್ಸ್‌ನಲ್ಲಿ 1000-1000 ಆಸನ ಸಾಮರ್ಥ್ಯದ 2 ಥಿಯೇಟರ್‌ಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ. 2000 ಮಂದಿ ಸಿನಿಮಾ ವೀಕ್ಷಿಸುತ್ತಿದ್ದರೆ, ಇನ್ನೂ 2000 ಮಂದಿ ಹೊರಗೆ ನಿಂತಿದ್ದಾರೆ. ಕೆಲವರು ಚಿತ್ರ ವೀಕ್ಷಣೆಗೆ ಟಿಕೆಟ್ ಖರೀದಿಸುತ್ತಿದ್ದಾರೆ. ಚಿತ್ರ ಬಿಡುಗಡೆಯಾದ ದಿನ ಕಾಲಿಡಲು ಜಾಗವೇ ಇರಲಿಲ್ಲ. ಶನಿವಾರವೂ ಕಲೆಕ್ಷನ್ ತುಂಬಾ ಚೆನ್ನಾಗಿದೆ, ಭಾನುವಾರ ಚಿತ್ರಮಂದಿರ ಭರ್ತಿ ಆಗಿದೆ. ಮರಾಠಾ ಮಂದಿರ್ ಥಿಯೇಟರ್ನಲ್ಲಿ ಶಾರುಖ್ ಮಾತ್ರ ಇದ್ದಾರೆ. ಅವರ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರ 28 ವರ್ಷಗಳಿಂದ ಓಡುತ್ತಿದ್ದು, ಈಗ ಪಠಾಣ್ ಕೂಡ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ಮನೋಜ್ ದೇಸಾಯಿ ತಿಳಿಸಿದರು.
ಮನೋಜ್ ದೇಸಾಯಿ ಮನವಿ:ಪಠಾಣ್ ಬಿಡುಗಡೆಗೂ ಮುನ್ನ ಚಿತ್ರವನ್ನು ಬಹಿಷ್ಕರಿಸುವ ಎಚ್ಚರಿಕೆ ಇತ್ತು. ಸಾಮಾಜಿಕ ಮಾಧ್ಯಮದಲ್ಲಿ ಅವರ ವಿರುದ್ಧ ಕೆಲವು ಆಕ್ಷೇಪಾರ್ಹ ಪದಗಳನ್ನು ಬಳಸಲಾಯಿತು. ಪ್ರತಿಭಟನೆಗಳೂ ಕೂಡ ನಡೆದವು. ಯಾವುದೇ ಚಿತ್ರವನ್ನು ಬಹಿಷ್ಕರಿಸಬೇಡಿ ಎಂದು ಸಾರ್ವಜನಿಕರಲ್ಲಿ ಮನೋಜ್ ದೇಸಾಯಿ ಮನವಿ ಮಾಡಿಕೊಂಡಿದ್ದಾರೆ. ಶಾರುಖ್‌ಗಾಗಿ ಇಂತಹ ಮಾತುಗಳನ್ನು ಆಡಬಾರದು ಎಂದು ಸಹ ಕೇಳಿಕೊಂಡಿದ್ದಾರೆ.