ಕರ್ನಾಟಕ

karnataka

ETV Bharat / entertainment

ಚಾಲೆಂಜಿಂಗ್ ಸ್ಟಾರ್​ಗೆ ಫ್ಯಾನ್ಸ್ ಫಿದಾ; ಮೊದಲ ದಿನವೇ ​'ಕಾಟೇರ' ಭರ್ಜರಿ ಗಳಿಕೆ - Kaatera collection

Kaatera collection: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ 'ಕಾಟೇರ' ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ.

Kaatera collection
ಕಾಟೇರ ಕಲೆಕ್ಷನ್

By ETV Bharat Karnataka Team

Published : Dec 30, 2023, 12:30 PM IST

2023ರ ಕೊನೆಯಲ್ಲಿ ಸ್ಯಾಂಡಲ್​ವುಡ್ ಚಾಲೆಂಜಿಂಗ್​​ ಸ್ಟಾರ್ ದರ್ಶನ್​ ತೂಗುದೀಪ ಅಭಿನಯದ 'ಕಾಟೇರ' ಚಿತ್ರ ಅದ್ಧೂರಿಯಾಗಿ ತೆರೆಕಂಡಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಕ್ಕಾ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಸಿನಿಮಾ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಬಹಳ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಸಿನಿಪ್ರಿಯರ ಮನ ಗೆಲ್ಲುವಲ್ಲಿ ಯಶ ಕಂಡಿರುವ 'ಕಾಟೇರ' ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಗಳಿಕೆ ಮಾಡಿದೆ.

'ಕಾಟೇರ' ಕಂಪ್ಲೀಟ್ ಮಾಸ್ ಎಂಟರ್​ಟೈನ್ಮೆಂಟ್ ಸಿನಿಮಾ. ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಮೇಲು ಕೀಳು, ಮೇಲು ಜಾತಿಯವರಿಂದ ಕೆಳ ಜಾತಿಯವರ ಮೇಲೆ ಆಗುತ್ತಿದ್ದ ಅನ್ಯಾಯ ಹಾಗೂ ಉಳುವವನೇ ಭೂಮಿಯ ಒಡೆಯ ಕಾಯ್ದೆ ದೇಶದಲ್ಲಿ ಎಂಥ ಬದಲಾವಣೆ ತಂದಿತ್ತು ಎಂಬುದರ ಬಗ್ಗೆ ಚಿತ್ರವು ಮಾತನಾಡಿದೆ. ದರ್ಶನ್ ಎರಡು ಶೇಡ್​ಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ಚಿತ್ರವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಸೇರಿದಂತೆ ಬರೋಬ್ಬರಿ 1,500 ಶೋಗಳು ಪ್ರದರ್ಶನಗೊಂಡಿದೆ. ಬೆಂಗಳೂರು ಹಾಗೂ ಕೆಲ ಜಿಲ್ಲೆಗಳಲ್ಲಿ ಮಧ್ಯರಾತ್ರಿಯಿಂದಲೇ ಕಾಟೇರ ಶೋ ನಡೆದಿದ್ದು, ಬಿಡುಗಡೆ ಆದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನಗೊಂಡಿದೆ. ಬಹುತೇಕ ಸಕಾರಾತ್ಮಕ ಸ್ಪಂದನೆ ಸ್ವೀಕರಿಸಿರುವ ಸಿನಿಮಾವು ಮೊದಲ ದಿನ 19 ಕೋಟಿ 75 ಲಕ್ಷ ರೂ. ಕಲೆಕ್ಷನ್ ಮಾಡಿ ಗಮನ ಸೆಳೆದಿದೆ. ಇದನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

15 ದಿನ‌ ಕಾಟೇರನಿಗೆ ಎದುರಾಳಿಯಾಗಿ ಯಾವುದೇ ಕನ್ನಡ ಸಿನಿಮಾ ಬಿಡುಗಡೆ ಇಲ್ಲ.‌ ಬ್ಯಾಕ್ ಟು ಬ್ಯಾಕ್ ರಜೆ ಇರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ ಅಂತಾ ಗಾಂಧಿನಗರದ ಸಿನಿ ಪಂಡಿತರು ಹೇಳುತ್ತಿದ್ದಾರೆ. ದರ್ಶನ್ ಸಿನಿಮಾದ ಕ್ರೇಜ್ ಹೀಗೆಯೇ ಇದ್ರೆ ವಾರಾಂತ್ಯಕ್ಕೆ 25 ರಿಂದ 30 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್​ ಮಾಡುವ ಸಾಧ್ಯತೆಗಳಿವೆ.

ಇದನ್ನೂ ಓದಿ:'ಕಾಟೇರ' ಸಿನಿಮಾ ಹೇಗಿದೆ?: ಯಾರು, ಏನಂದ್ರು? ವಿಡಿಯೋ ನೋಡಿ

ರಾಬರ್ಟ್ ಚಿತ್ರದ ಬಳಿಕ ನಟ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಜೊತೆಯಾಗಿ ಮಾಡಿದ ಕಾಟೇರ ಚಿತ್ರ 1970ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ. ಸಿನಿ ಪ್ರೇಕ್ಷಕರು ಈ ವಿಭಿನ್ನ ಕಥೆಗೆ ಫಿದಾ ಆಗಿದ್ದಾರೆ. ದರ್ಶನ್ ಸಿನಿ ಪಯಣದಲ್ಲಿ ವಿಶೇಷ ಚಿತ್ರವಾಗಿ 'ಕಾಟೇರ' ಹೊರಹೊಮ್ಮಿದೆ.

ಇದನ್ನೂ ಓದಿ:ರಾಜ್ಯಾದ್ಯಂತ 'ಕಾಟೇರ' ಅಬ್ಬರ; ಚಾಲೆಂಜಿಂಗ್​ ಸ್ಟಾರ್​ ಅಭಿಮಾನಿಗಳ ಸಂಭ್ರಮ

ದರ್ಶನ್ ಜೋಡಿಯಾಗಿ ನಟಿ ಮಾಲಾಶ್ರೀ ಮಗಳು ಆರಾಧನಾ ರಾಮ್ ಚಿತ್ರದಲ್ಲಿ ಉತ್ತಮ ನಟನೆ ಮೂಲಕ ಭರವಸೆ ಮೂಡಿಸಿದ್ದಾರೆ‌. ಜೊತೆಗೆ ತೆಲುಗು ನಟ‌ ಜಗಪತಿ ಬಾಬು, ವಿನೋದ್ ಆಳ್ವಾ, ಅವಿನಾಶ್, ಕುಮಾರ ಗೋವಿಂದ್, ವೈಜನಾಥ್ ಬಿರಾದಾರ್, ಶ್ರುತಿ, ಪದ್ಮಾವಸಂತಿ, ಮಾಸ್ಟರ್ ಲೋಹಿತ್ ತಮ್ಮ ಪಾತ್ರಗಳಿಂದ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಈ ಚಿತ್ರಕ್ಕೆ ಜಡೇಶ್ ಕಥೆ ಬರೆದಿದ್ದು, ಮಾಸ್ತಿ ಮಂಜು ಸಂಭಾಷಣೆ, ವಿ. ಹರಿಕೃಷ್ಣ ಸಂಗೀತ ಜೊತೆಗೆ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

ABOUT THE AUTHOR

...view details