ಬೆಂಗಳೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ನಿವಾಸದಲ್ಲಿ ನಿನ್ನೆ ಆಯೋಜಿಸಿದ್ದ ರಂಜಾನ್ ಮಾಸದ ಇಫ್ತಿಯಾರ್ ಕೂಟದಲ್ಲಿ ನಟ ದರ್ಶನ್ ಪಾಲ್ಗೊಂಡು, ಆತಿಥ್ಯ ಸ್ವೀಕರಿಸಿ ಶುಭ ಹಾರೈಸಿದ್ದಾರೆ. ಇದೇ ವೇಳೆ, ಶಾಸಕ ಜಮೀರ್ ಅವರು ದರ್ಶನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
Photos: ಶಾಸಕ ಜಮೀರ್ ನಿವಾಸದಲ್ಲಿ ಇಫ್ತಿಯಾರ್ ಕೂಟ; ನಟ ದರ್ಶನ್ ಭಾಗಿ - ಜಮೀರ್ ಅಹ್ಮದ್ ಖಾನ್ ಮನೆಗೆ ಭೇಟಿ ನೀಡಿದ ದರ್ಶನ್
ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ನಿವಾಸದಲ್ಲಿ ನಿನ್ನೆ ಆಯೋಜಿಸಿದ್ದ ರಂಜಾನ್ ಮಾಸದ ಇಫ್ತಿಯಾರ್ ಕೂಟದಲ್ಲಿ ದರ್ಶನ್ ಪಾಲ್ಗೊಂಡು, ಆತಿಥ್ಯ ಸ್ವೀಕರಿಸಿ ಶುಭ ಹಾರೈಸಿದ್ದಾರೆ.
ದರ್ಶನ್ಗೆ ಆತಿಥ್ಯ ನೀಡುತ್ತಿರುವ ಶಾಸಕ
ಭೋಜನದ ಬಳಿಕ ಗಣ್ಯರು ಪರಸ್ಪರ ಕುಶಲೋಪರಿ ವಿಚಾರಿಸಿದ್ದಾರೆ. ಈ ವೇಳೆ ನಟ ವಿನೋದ್ ಪ್ರಭಾಕರ್, ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್, ಮುಖಂಡರಾದ ಇಮ್ತಿಯಾಜ್ ಫಾರುಖ್ ಖಾನ್, ಜಿ.ಎ.ಬಾವಾ, ಅಲ್ತಾಫ್ ಖಾನ್, ಶೋಯೆಬ್ ಖಾನ್ ಇದ್ದರು. ಇಫ್ತಿಯಾರ್ ಕೂಟದ ಕೆಲವು ಫೋಟೋಗಳು ಇಲ್ಲಿವೆ.