ಕರ್ನಾಟಕ

karnataka

ETV Bharat / entertainment

'ಕೌಸಲ್ಯಾ ಸುಪ್ರಜಾ ರಾಮ' ಚಿತ್ರದ ಹೊಸ ಪೋಸ್ಟರ್​ ರಿಲೀಸ್ - ಈಟಿವಿ ಭಾರತ ಕನ್ನಡ

ಡಾರ್ಲಿಂಗ್​ ಕೃಷ್ಣ ಅಭಿನಯದ 'ಕೌಸಲ್ಯಾ ಸುಪ್ರಜಾ ರಾಮ' ಚಿತ್ರದ ಹೊಸ ಪೋಸ್ಟರ್​ ಬಿಡುಗಡೆಯಾಗಿದೆ.

Kausalya supraja rama
ಕೌಸಲ್ಯಾ ಸುಪ್ರಜಾ ರಾಮ

By

Published : Apr 6, 2023, 1:01 PM IST

ಶಶಾಂಕ್​ ನಿರ್ದೇಶನದ 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾದ ಹೊಸ ಪೋಸ್ಟರ್​ ರಿಲೀಸ್​ ಆಗಿದೆ. ಮೊಗ್ಗಿನ ಮನಸು, ಬಚ್ಚನ್​, ಮುಂಗಾರು ಮಳೆ 2 ಮುಂತಾದ ಹಿಟ್​ ಚಿತ್ರಗಳನ್ನು ನೀಡಿರುವ ಸ್ಯಾಂಡಲ್​ವುಡ್​ ಸ್ವ- ಮೇಕ್​ ನಿರ್ದೇಶಕ ಶಶಾಂಕ್​ ಅವರು ಲವ್​ ಮಾಕ್ಟೇಲ್​ ಖ್ಯಾತಿಯ ಡಾರ್ಲಿಂಗ್​ ಕೃಷ್ಣಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾದ ಹೊಸ ಲುಕ್​​ ಇಂದು ಬಿಡುಗಡೆಯಾಗಿದೆ.

ಪೋಸ್ಟರ್​ನಲ್ಲಿ ಡಾರ್ಲಿಂಗ್​ ಕೃಷ್ಣ ಅವರ ಆ್ಯಟಿಟ್ಯೂಡ್ ನೋಟ ಸಿನಿಮಾದ ಬಗ್ಗೆ ಕುತೂಹಲ ಮೂಡಿಸುವಂತಿದೆ. ​ಅಲ್ಲದೇ ಇದರಲ್ಲಿ 'ಟೇಲ್​ ಆಫ್​ ಎ ರಿಯಲ್​ ಮ್ಯಾನ್​' ಎಂಬ ಬರಹವಿದೆ. ಇನ್ನುಳಿದಂತೆ ಡಾರ್ಲಿಂಗ್​ ಕೃಷ್ಣ ಅವರ ರಗಡ್​ ಲುಕ್​ ಮತ್ತು ಅವರು ಬೈಕ್​ನಲ್ಲಿ ಬರುತ್ತಿರುವುದನ್ನು ಕಾಣಬಹುದು. ಇಷ್ಟು ಮಾತ್ರವಲ್ಲದೇ ಒಂದು ಬದಿಯಲ್ಲಿ ತಾಯಿಯ ಪ್ರೀತಿ ಮತ್ತು ಇನ್ನೊಂದು ಬದಿಯಲ್ಲಿ ಹುಡುಗಿಯ ಪ್ರೇಮ ಕಾಣುತ್ತದೆ. ಹೀಗೆ ಒಂದೇ ಪೋಸ್ಟರ್​ನಲ್ಲಿ ಇಡೀ ಚಿತ್ರಕಥೆಯನ್ನು ನಿರ್ದೇಶಕ ಶಶಾಂಕ್​ ತೋರಿಸಿದ್ದಾರೆ.

ಇನ್ನೂ ಜೂಲಿಯಟ್​ 2 ಸಿನಿಮಾಗಳಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬೃಂದಾ ಆಚಾರ್ಯ ಈ ಸಿನಿಮಾಗೆ ನಾಯಕಿಯಾಗಿದ್ದಾರೆ. ಇದೊಂದು ತಾಯಿ, ಮಗನ ನಡುವಿನ ಭಾವನಾತ್ಮಕ ಚಿತ್ರವಾಗಿದ್ದು, ನಾಯಕನಾಗಿ ಡಾರ್ಲಿಂಗ್​ ಕೃಷ್ಣ, ತಾಯಿಯ ಪಾತ್ರದಲ್ಲಿ ಸುಧಾ ಬೆಳವಾಡಿ, ತಂದೆಯ ಪಾತ್ರದಲ್ಲಿ ರಂಗಾಯಣ ರಘು ನಟಿಸುತ್ತಿದ್ದಾರೆ. ಜೊತೆಗೆ ಅಚ್ಯುತ್​ ಕುಮಾರ್​, ಗಿರಿರಾಜ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಒಟ್ಟು ಐದು ಹಾಡುಗಳಿವೆ. ಅರ್ಜುನ್​ ಜನ್ಯ ಸಂಗೀತ, ಸುಜ್ಞಾನ್​ ಛಾಯಾಗ್ರಹಣವಿದೆ. ಶಶಾಂಕ್​ ಸಿನಿಮಾಸ್​ ಮತ್ತು ಬಿಸಿ ಪಾಟೀಲ್​ ಅವರ ಕೌರವ ಪ್ರೊಡಕ್ಷನ್​ ಹೌಸ್​ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ಡಾರ್ಲಿಂಗ್​ ಕೃಷ್ಣ ಸಿನಿ ಜರ್ನಿ.. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕೃಷ್ಣ ರುಕ್ಮಿಣಿ ಧಾರಾವಾಹಿ ಮೂಲಕ ಡಾರ್ಲಿಂಗ್​ ಕೃಷ್ಣ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ನಂತರದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಾನೇ ಕಥೆಗಳನ್ನು ಬರೆದು, ನಿರ್ದೇಶಿಸಿ ಸಿನಿಮಾಗಳನ್ನು ಮಾಡಿದ್ದಾರೆ. ಕೆಲವೇ ವರ್ಷಗಳಲ್ಲಿ ಸೂಪರ್​ ಸ್ಟಾರ್​ ನಟರ ಸಾಲಿಗೆ ಇವರು ಕೂಡ ಸೇರಿದ್ದಾರೆ. ಕೊರೊನಾ ಸಮಯದಲ್ಲಿ ತೆರೆ ಕಂಡಿದ್ದ ಲವ್​ ಮಾಕ್ಟೇಲ್​ ಚಿತ್ರ ಅದೆಷ್ಟೋ ಸಿನಿ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅದಾದ ನಂತರ ಲವ್​ ಮಾಕ್ಟೇಲ್ 2 ಕೂಡ ಸೂಪರ್​​ ಹಿಟ್​ ಆಗಿದೆ.

ಇವರು ತಮ್ಮ ಸಿನಿಮಾಗಳಿಗೆ ಹೆಚ್ಚಾಗಿ ಎರಡು ಹೀರೋಯಿನ್​ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲಿ ಒಬ್ಬರು ಚಿತ್ರಕಥೆ ಕೊನೆಯಲ್ಲಿ ಇವರ ಜೀವನ ಸಂಗಾತಿಯಾಗುತ್ತಾರೆ. ಅಲ್ಲದೇ ಇವರ ಹೆಚ್ಚಿನ ಸಿನಿಮಾಗಳಲ್ಲಿ ಇವರ ಪತ್ನಿ, ನಟಿ ಮಿಲನಾ ನಾಗರಾಜ್ ಅವರೇ​ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದಕ್ಕೆ ಉದಾಹರಣೆಯೆಂಬಂತೆ ಇತ್ತೀಚೆಗೆ ತೆರೆ ಕಂಡ ಲವ್ ಬರ್ಡ್ಸ್​​ ಸಿನಿಮಾ ಒಳ್ಳೆಯ ರೀತಿಯಲ್ಲೇ ಪ್ರದರ್ಶನ ಕಂಡಿದೆ. ಇದೀಗ ಕೌಸಲ್ಯಾ ಸುಪ್ರಜಾ ರಾಮ ಚಿತ್ರವು ತೆರೆ ಮೇಲೆ ಬರಲು ಸಿದ್ಧವಾಗುತ್ತಿದ್ದು, ಬಿಡುಗಡೆಗೆ ಮುಹೂರ್ತ ಫಿಕ್ಸ್​ ಆಗಿಲ್ಲ.

ಇದನ್ನೂ ಓದಿ:ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಟೈಟಲ್ ವಿವಾದದಲ್ಲಿ ಮೋಹಕ ತಾರೆಗೆ ಸಿಕ್ತು ಜಯ

ABOUT THE AUTHOR

...view details