ಬಾಲಿವುಡ್ ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ (Nora Fatehi) ಸೋಮವಾರ ದುಬೈನಲ್ಲಿ ತಮ್ಮ 31ನೇ ಹುಟ್ಟುಹಬ್ಬ ಆಚರಿಸಿಕೊಂಡರು. ತಮ್ಮ ಆಪ್ತರನ್ನೊಳಗೊಂಡ ಗ್ಯಾಂಗ್‌ನೊಂದಿಗೆ ದುಬೈನಲ್ಲಿ ಉತ್ತಮ ಕ್ಷಣಗಳನ್ನು ಕಳೆದಿದ್ದಾರೆ. ತಮ್ಮ ಹುಟ್ಟುಹಬ್ಬ ಆಚರಣೆಯ ಚಿತ್ರಗಳನ್ನು, ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನೋರಾ ಫತೇಹಿ ತಂಡದ ಮೋಜು ಮಸ್ತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸುತ್ತುವರಿದಿದೆ. ಈ ವಿಡಿಯೋದಲ್ಲಿ, ನೋರಾ ಅವರು ತಮ್ಮ ಸ್ನೇಹಿತರೊಂದಿಗೆ ಹಡಗಿನಲ್ಲಿ ಸಮಯ ಕಳೆದಿರುವುದನ್ನು ನೋಡಬಹುದು. ಇನ್‌ಸ್ಟಾಗ್ರಾಮ್‌ನಲ್ಲಿ ಡ್ಯಾನ್ಸರ್ ನೋರಾ ಫತೇಹಿ ಹಂಚಿಕೊಂಡ ವಿಡಿಯೋದಲ್ಲಿ, ಎಂದಿನಂತೆ ತಮ್ಮ ಸೊಂಟ ಬಳುಕಿಸಿ ಸಖತ್ ಸ್ಟೆಪ್ ಹಾಕಿದ್ದಾರೆ. ಸಿರಿಯನ್ ಗಾಯಕ ಲಮಿಸ್ ಕಾನ್ (Syrian singer Lamis Kan) ಹಾಡಿದ ಅರೇಬಿಕ್ ಹಾಡು ಮೆಸಯ್ತಾರಾ (Mesaytara) ಹಾಡಿಗೆ ನೋರಾ ಡ್ಯಾನ್ಸ್ ಮಾಡಿದ್ದಾರೆ.
ಜುಮೈರಾ ಬೀಚ್‌ನಲ್ಲಿ ವಿಹಾರ ನೌಕೆಯಲ್ಲಿ ಡ್ಯಾನ್ಸ್ ಮಾಡಿದ್ದು, ಸ್ನೇಹಿತರು ಸಪೋರ್ಟ್ ಮಾಡಿದ್ದಾರೆ. "ನಾನು ಗಮನ ಹರಿಸಲು ಪ್ರಯತ್ನಿಸಿದೆ, ಆದರೆ ಗಮನವು ನನಗೆ ಜನ್ಮದಿನದ ಸಂತಸ ನೀಡಿದೆ" ಎಂದು ನೋರಾ ಫತೇಹಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ತಮ್ಮ ಹುಟ್ಟುಹಬ್ಬದ ಆಚರಣೆಯ ವಿಡಿಯೋದೊಂದಿಗೆ ಬರೆದುಕೊಂಡಿದ್ದಾರೆ.
ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡ ಕೂಡಲೇ, ಅಭಿಮಾನಿಗಳು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಂಪು ಹೃದಯ ಮತ್ತು ಫೈರ್ ಎಮೋಜಿ ಬಳಸಿ ಕಾಮೆಂಟ್ ವಿಭಾಗವನ್ನು ತುಂಬಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ನೋರಾ. ನಿಮಗೆ ಸಂಪೂರ್ಣ ಶುಭವಾಗಲಿ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಅಭಿಮಾನಿ, ಜನ್ಮದಿನದ ಶುಭಾಶಯಗಳು ನೋರಾ! ಎಂದು ಬರೆದಿದ್ದಾರೆ. ಹ್ಯಾಪಿ ಬರ್ತ್‌ಡೇ ಕ್ಯೂಟೀ ಎಂದು ಅಭಿಮಾನಿ ಒಬ್ಬರು ಬರೆದಿದ್ದಾರೆ.