ಕರ್ನಾಟಕ

karnataka

ETV Bharat / entertainment

ಪ್ರಜ್ವಲ್ ದೇವರಾಜ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ನೃತ್ಯ ನಿರ್ದೇಶಕ ಕಲೈ - Prajwal Devraj movies

ಡೈನಾಮಿಕ್​ ಪ್ರಿನ್ಸ್​​ ಪ್ರಜ್ವಲ್ ದೇವರಾಜ್ ನಟನೆಯ ಸಿನಿಮಾವನ್ನು ಡ್ಯಾನ್ಸ್ ಕೊರಿಯೋಗ್ರಾಫರ್ ಕಲೈ ನಿರ್ದೇಶಿಸಲಿದ್ದಾರೆ.

Kalai will direct movie of Prajwal Devraj
ಪ್ರಜ್ವಲ್ ದೇವರಾಜ್ ಸಿನಿಮಾ ನಿರ್ದೇಶಿಸಲಿದ್ದಾರೆ ಕಲೈ

By

Published : Jul 21, 2023, 2:05 PM IST

ಈ ಬಣ್ಣದ ಪ್ರಪಂಚದಲ್ಲಿ ಯಾರು ಯಾವಾಗ ಏನಾಗ್ತಾರೆ ಎಂದು ಹೇಳೋದು ಕಷ್ಟ. ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗೋದುಂಟು. ಹಾಗೆಯೇ ನಟರು ನಿರ್ದೇಶಕರಾಗೋದು, ಇತ್ತ ನಿರ್ದೇಶಕರು ನಟರಾಗೋದನ್ನು ನೋಡುತ್ತಿರುತ್ತೇವೆ. ಕ್ರಿಯೇಟಿವ್ ಆ್ಯಂಡ್​​ ಕಲರ್​ಫುಲ್​​ ಫೀಲ್ಡ್​ನಲ್ಲಿ ಡ್ಯಾನ್ಸ್ ಕೊರಿಯೋಗ್ರಾಫರ್ಸ್ ನಿರ್ದೇಶಕರಾಗೋದು ಕೂಡಾ ಹೊಸತೇನೆಲ್ಲ. ಇದೀಗ ಕನ್ನಡ ಚಿತ್ರರಂಗದಲ್ಲಿ 300ಕ್ಕೂ ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿರುವ ಕಲೈ ಮಾಸ್ಟರ್ ಅವರೀಗ ಡೈರೆಕ್ಟರ್ ಕ್ಯಾಪ್​​ ತೊಡಲು ಸಜ್ಜಾಗಿದ್ದಾರೆ. ಡೈನಾಮಿಕ್​ ಪ್ರಿನ್ಸ್​​ ಪ್ರಜ್ವಲ್ ದೇವರಾಜ್ ಮುಖ್ಯಭೂಮಿಕೆಯ ಸಿನಿಮಾಗೆ ಕಲೈ ಆ್ಯಕ್ಷನ್ ಕಟ್ ಹೇಳುವ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ.

ನೃತ್ಯ ನಿರ್ದೇಶಕ ಕಲೈ

ಸಾಮಾಜಿಕ ಕಳಕಳಿ ಹೊಂದಿರುವ ಕಥೆಯನ್ನು ಚಿತ್ರ ಹೊಂದಿರಲಿದೆ. ಪ್ರಜ್ವಲ್ ದೇವರಾಜ್ ಈ ಸಿನಿಮಾದಲ್ಲಿ ವಿಭಿನ್ನ ಶೇಡ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೀರ್ಷಿಕೆಯಿಡದ ಚಿತ್ರಕ್ಕೆ ಕಲೈ ನಿರ್ದೇಶನ ಮಾಡುತ್ತಿದ್ದಾರೆ.

23 ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ಸಂಪರ್ಕ ಹೊಂದಿರುವ ಕಲೈ ಅವರು ನೃತ್ಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮದನ್, ಹರಿಣಿ, ಚಿನ್ನಿಪ್ರಕಾಶ್, ತ್ರಿಭುವನ್, ಫೈವ್ ಸ್ಟಾರ್ ಗಣೇಶ್ ಸೇರಿದಂತೆ ಮುಂತಾದ ಹಿರಿಯ ನೃತ್ಯ ನಿರ್ದೇಶಕರೊಂದಿಗೆ ಕೆಲಸ‌ ಮಾಡಿರುವ ಕಲೈ ಅವರು ಕನ್ನಡದ ಬಹುತೇಕ ಸ್ಟಾರ್ ನಟರ ಜೊತೆಯೂ ಕೆಲಸ ಮಾಡಿದ್ದಾರೆ. 300ಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ನಿರ್ದೇಶಿಸಿದ್ದಾರೆ. ಪ್ರಜ್ವಲ್​​ ದೇವರಾಜ್​ ಅಭಿನಯದ ಸಿನಿಮಾ ಕಲೈ ಅವರು ನಿರ್ದೇಶಿಸುತ್ತಿರುವ ಮೊದಲ ಚಿತ್ರ.

ಡೈನಾಮಿಕ್​ ಪ್ರಿನ್ಸ್​​ ಪ್ರಜ್ವಲ್ ದೇವರಾಜ್

ಅಕ್ಟೋಬರ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಹೆಚ್ಚಿನ ಭಾಗದ ‌ಚಿತ್ರೀಕರಣ ಅದ್ಧೂರಿ ಸೆಟ್​ಗಳಲ್ಲೇ 80 ದಿನಗಳ ಕಾಲ ನಡೆಯಲಿದೆ. ಆರು ಭರ್ಜರಿ ಫೈಟ್​ಗಳು ಹಾಗೂ ಆರು ಹಾಡುಗಳು ಈ ಚಿತ್ರದಲ್ಲಿರುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಶಂಕರ್ ಹಾಗೂ ಚಂದ್ರಮೌಳಿ (ಕೆ.ಜಿ.ಎಫ್ ಖ್ಯಾತಿ) ಸಂಭಾಷಣೆ ಬರೆಯುತ್ತಿದ್ದಾರೆ.

ರಾಜಲಕ್ಷ್ಮೀ ಎಂಟರ್​ಟೈನ್ಮೆಂಟ್ ಲಾಂಛನದಲ್ಲಿ ನಿರ್ಮಾಪಕಿ ಪ್ರತಿಭಾ ಬಂಡವಾಳ ಹಾಕುತ್ತಿದ್ದಾರೆ. ಮಂಗಳೂರು ಮೂಲದ ಪ್ರತಿಭಾ 20 ವರ್ಷಗಳಿಂದ ರಾಜಲಕ್ಷ್ಮೀ ಟ್ರಾವೆಲ್ಸ್ ನಡೆಸುತ್ತಿದ್ದಾರೆ. ಕನ್ನಡದಲ್ಲಿ ನಿರ್ಮಾಣ ಮಾಡುತ್ತಿರುವ ಮೂರನೇ ಚಿತ್ರ ಇದು. ಈ ಸಿನಿಮಾ ಮೂಲಕ ಕಲೈ ಅವರು ಯಶಸ್ವಿ ನಿರ್ದೇಶಕನಾಗಿ ಯಶಸ್ಟು ಕಾಣಲಿ ಅನ್ನೋದು ಪ್ರೇಕ್ಷಕರ, ಅಭಿಮಾನಿಗಳ ಆಶಯ.

ಇದನ್ನೂ ಓದಿ:ಗ್ರ್ಯಾಮಿ ಪ್ರಶಸ್ತಿ ಸದಸ್ಯರಾಗಿ ಗಾಯಕ ಶ್ರೀರಾಮ್ ಅಯ್ಯರ್ ಆಯ್ಕೆ

ಪ್ರಜ್ವಲ್ ದೇವರಾಜ್ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಗಣ ಚಿತ್ರದಲ್ಲಿ ಮೇಘನಾ ರಾಜ್​ ಜೊತೆ ತೆರೆ ಹಂಚಿಕೊಂಡಿದ್ದಾರೆ. ಮಿಸ್ಸಿಂಗ್​ ಕೇಸ್​ ಕಥಾಹಂದರವುಳ್ಳ ಈ ಚಿತ್ರವನ್ನು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ. ಕನ್ನಡ, ತೆಲುಗು, ಮಲಯಾಳಂ, ತಮಿಳು ಹಾಗೂ ಹಿಂದಿ ಸೇರಿ 5 ಭಾಷೆಗಳಲ್ಲಿ ಪ್ರಜ್ವಲ್ ಅವರ ಮತ್ತೊಂದು ಸಿನಿಮಾ ನಿರ್ಮಾಣವಾಗಲಿದೆ. ಡೈನಾಮಿಕ್​ ಪ್ರಿನ್ಸ್ ನಟನೆಯ ಚೊಚ್ಚಲ ಪ್ಯಾನ್​ ಇಂಡಿಯಾ ಚಿತ್ರವಿದು. ಜಾತರೆ ಶೀರ್ಷಿಕೆಯ ಈ ಸಿನಿಮಾ ಆಗಸ್ಟ್​​ನಲ್ಲಿ ಸೆಟ್ಟೇರಲಿದ್ದು, 2024ರ ಜನವರಿ ಹೊತ್ತಿಗೆ ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ಹೊಂದಿದೆ.

ಇದನ್ನೂ ಓದಿ:Project K First Glimpse: 'ಕಲ್ಕಿ 2898 ಎಡಿ' ಟೈಟಲ್​ನೊಂದಿಗೆ ಪ್ರಾಜೆಕ್ಟ್ ಕೆ ಫಸ್ಟ್ ಗ್ಲಿಂಪ್ಸ್ ರಿಲೀಸ್‌

ABOUT THE AUTHOR

...view details