ಕರ್ನಾಟಕ

karnataka

ETV Bharat / entertainment

'ಹೆಡ್ ಬುಷ್' ಬೆನ್ನಲ್ಲೇ ಸೆಟ್ಟೇರುತ್ತಿದೆ ಡಾಲಿ ಧನಂಜಯ್​ ಹೊಸ ಸಿನಿಮಾ - ಈಟಿವಿ ಭಾರತ ಕನ್ನಡ

ಡಾಲಿ ಧನಂಜಯ್​ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ 'ಉತ್ತರಕಾಂಡ' ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸುತ್ತಿದ್ದಾರೆ. ರತ್ನನ್ ಪ್ರಪಂಚ ಯಶಸ್ಸಿನ ಬಳಿಕ ಕೆ.ಆರ್.ಜಿ ಸ್ಟುಡಿಯೋಸ್, ಡಾಲಿ ಮತ್ತು ರೋಹಿತ್ ತಂಡಕ್ಕೆ ಮತ್ತೆ ಕೈಜೋಡಿಸುತ್ತಿದ್ದಾರೆ.

daali-dhananjay-to-act-in-new-movie-uttarakand
'ಹೆಡ್ ಬುಷ್' ಬೆನ್ನಲ್ಲೇ ಸೆಟ್ಟೇರುತ್ತಿದೆ ಡಾಲಿ ಧನಂಜಯ್​ ಹೊಸ ಸಿನಿಮಾ

By

Published : Nov 2, 2022, 10:51 AM IST

'ಹೆಡ್​​ ಬುಷ್​' ಚಿತ್ರದ ಬಳಿಕ ನಟ ಡಾಲಿ ಧನಂಜಯ್​ ಮತ್ತೊಂದು ಸಿನಿಮಾಗೆ ಸಜ್ಜುಗೊಂಡಿದ್ದಾರೆ. 'ಉತ್ತರಕಾಂಡ' ಎಂಬ ಚಿತ್ರದ ಮೂಲಕ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. ಸದ್ಯದಲ್ಲೇ ಹೊಸ ಚಿತ್ರ ಸೆಟ್ಟೇರಲಿದೆ.

ಉತ್ತರಕಾಂಡ ಚಿತ್ರತಂಡ

ಡಾಲಿ ಧನಂಜಯ್​ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸುತ್ತಿದ್ದಾರೆ. ರತ್ನನ್ ಪ್ರಪಂಚ ಯಶಸ್ಸಿನ ಬಳಿಕ ಕೆ.ಆರ್.ಜಿ ಸ್ಟುಡಿಯೋಸ್, ಡಾಲಿ ಮತ್ತು ರೋಹಿತ್ ತಂಡಕ್ಕೆ ಸಾಥ್ ಕೊಟ್ಟಿದ್ದಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ಚಿತ್ರೀಕರಿಸಲಾಗುತ್ತದೆ ಎಂಬುದು ವಿಶೇಷವಾಗಿದೆ.

ಉತ್ತರಕಾಂಡ ಚಿತ್ರ

ಬೆಂಗಳೂರಿನಲ್ಲಿ ನವೆಂಬರ್ 6ರ ಮಧ್ಯಾಹ್ನ 3.22ಕ್ಕೆ ಚಿತ್ರದ ಪೂಜಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆಸಲು ವೇದಿಕೆ ಸಜ್ಜಾಗಿದೆ. ಮಾಸ್ ಟೈಟಲ್ ಹೊಂದಿರುವ 'ಉತ್ತರಕಾಂಡ'ದ ಬಗ್ಗೆ ಮತ್ತಷ್ಟು ವಿವರಗಳನ್ನು ಚಿತ್ರತಂಡವು ಆ ದಿನವೇ ಹಂಚಿಕೊಳ್ಳಲಿದೆ.

ನಿರ್ದೇಶಕ ರೋಹಿತ್ ಅವರು ಮನುಷ್ಯನ ಮನದಲ್ಲಿನ ಖೇದ, ಗೊಂದಲ, ತಳಮಳಗಳನ್ನು ಬಹಳ ಸುಂದರವಾಗಿ ಕಥಾ ರೂಪದಲ್ಲಿ ಹೆಣೆದಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನವಿರುವ ಚಿತ್ರಕ್ಕೆ ಸ್ವಾಮಿ ಛಾಯಾಗ್ರಾಹಕರಾಗಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ ಮತ್ತು ವಿಶ್ವಾಸ್ ಕಶ್ಯಪ್ ವಿನ್ಯಾಸದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಉತ್ತರಕಾಂಡ ಚಿತ್ರದ ಪೂಜೆ ಕಾರ್ಯಕ್ರಮ

ನಿರ್ಮಾಪಕ ವಿಜಯ್ ಕಿರಗಂದೂರು ಪ್ರಸ್ತುತಪಡಿಸುತ್ತಿರುವ ಉತ್ತರಕಾಂಡ ಚಿತ್ರವನ್ನು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಕಾರ್ತಿಕ್ ಮತ್ತು ಯೋಗಿ ಜಿ. ರಾಜ್ ನಿರ್ಮಿಸುತ್ತಿದ್ದಾರೆ. ಈ ಹಿಂದೆ ರತ್ನನ್‌ ಪ್ರಪಂಚ ಹಾಗು ಹೊಯ್ಸಳ ಚಿತ್ರ ನಿರ್ಮಾಣ ಮಾಡುತ್ತಿರುವ ನಿರ್ಮಾಪಕ ಕಾರ್ತಿಕ್ ಮತ್ತು ಯೋಗಿ ಜಿ. ರಾಜ್ ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ:ಕರ್ನಾಟಕ ರತ್ನ ಪ್ರಶಸ್ತಿ: ಮಳೆಯಿಂದ ಕುರ್ಚಿ ಒದ್ದೆ, ಒರೆಸಿ ಕುಳಿತು ಜೂ.ಎನ್​ಟಿಆರ್ ಸರಳತೆ

ABOUT THE AUTHOR

...view details